
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ)ಅರಣ್ಯ ಸಚಿವರು ಬಂದು ರೈತರು ಮತ್ತು ಬೆಳೆಗಾರರ ಜೊತೆ ಮಾತನಾಡಬೇಕು ಎಂದು ಆಗ್ರಹಿಸಿದ್ದ ಹಿನ್ನಲೆ ರೈತರ ಜೊತೆ ಸಮಾಲೋಚನೆ ನಡೆಸಲು ಸಚಿವ ಈಶ್ವರ ಖಂಡ್ರೆ ಅವರು ಇಂದು ಬಾಳೆಹೊನ್ನೂರಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ವರ್ಷದಲ್ಲಿ ಸುಮಾರು 11 ಜನ ಕಾಡಾನೆ ದಾಳಿ ಮತ್ತು 2 ಜನ ಕಾಡುಕೋಣ ದಾಳಿಗೆ ಸಾವನ್ನಪ್ಪಿದ್ದರು. ಒಂದು ವಾರದ ಅಂತರದಲ್ಲಿ 2 ಸಾವಾಗಿತ್ತು. ಕಳೆದ ಭಾನುವಾರ ಮಲೆನಾಡಿನ ಜನರು ರಸ್ತೆ ಮದ್ಯೆ ಶವವಿಟ್ಟು ಈಶ್ವರ್ ಖಂಡ್ರೆ ಬರುವವರೆಗೂ ನಾವು ಶವ ಎತ್ತಲ್ಲ, ಅಧಿಕಾರಿಗಳ ಮಾತು ಕೇಳದೆ ಸ್ಥಳಕ್ಕೆ ಬಂದು ರೈತರ ಜೊತೆ ಮಾತನಾಡಿ ಎಂದು ಮಲೆನಾಡ ಜನರು ಆಗ್ರಹಿಸಿದ್ದರು. ಪ್ರತಿಭಟನೆ ವೇಳೆ ಸರ್ಕಾರ ರೈತರ ಮೇಲೆ ಲಾಠಿ ಚಾರ್ಜ್ ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿತ್ತು.

ಇಂದು ರೈತರ ಜೊತೆ ಸಮಾಲೋಚನೆ ನಡೆಸಲು ಸ್ವತಃ ಸಚಿವ ಈಶ್ವರ ಖಂಡ್ರೆ ಬಾಳೆಹೊನ್ನೂರಿಗೆ ಆಗಮಿಸಿದ್ದಾರೆ. ಬಾಳೆಹೊನ್ನೂರಿನ ಗುರುಭವನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಸಚಿವರಿಗೆ ಪ್ರಶ್ನೆ ಕೇಳಲು ರೈತರು ಮತ್ತು ಬೆಳೆಗಾರರು ಸಿದ್ದರಾಗಿದ್ದಾರೆ.













