ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ಕೈಬಿಡಲಾದ ಹೆಸರುಗಳ ಬೂತ್‌ವಾರು ಪಟ್ಟಿ ಇಲ್ಲಿದೆ

ಶೃಂಗೇರಿ: (ನ್ಯೂಸ್‌ ಮಲ್ನಾಡ್‌ ವರದಿ) ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ಕೈಬಿಡಲಾದ ಹೆಸರುಗಳ ಬೂತ್‌ವಾರು ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಮತದಾರರು ತಮ್ಮ ಬೂತ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ಪಟ್ಟಿಯಲ್ಲಿ ತಮ್ಮ ಹೆಸರು ಇರುವುದೇ ಎಂಬುದನ್ನು ಪರಿಶೀಲಿಸಬಹುದಾಗಿದೆ.

ಪಟ್ಟಿಯಲ್ಲಿ ಹೆಸರು ಕಂಡುಬಂದಲ್ಲಿ, ಮತದಾರರು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿತ ಬೂತ್ ಮಟ್ಟದ ಅಧಿಕಾರಿ (BLO), ಗ್ರಾಮ ಪಂಚಾಯಿತಿ ಕಚೇರಿ, ತಾಲ್ಲೂಕು ಕಚೇರಿ ಅಥವಾ ಮತದಾರ ನೋಂದಣಿ ಅಧಿಕಾರಿಯನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಪರಿಶೀಲನೆಗೆ ಲಿಂಕ್:
https://drive.google.com/drive/folders/1j5eBKxSQQuxCOVQ54gCT7O1V1U7akmPY

ಪರಿಷ್ಕೃತ ವೇಳಾಪಟ್ಟಿಯ ಪ್ರಮುಖ ದಿನಾಂಕಗಳು
ಚುನಾವಣಾ ಆಯೋಗವು ಪ್ರಕಟಿಸಿರುವ ಹೊಸ ವೇಳಾಪಟ್ಟಿಯ ಪ್ರಕಾರ ಮತಗಟ್ಟೆ ಮಟ್ಟದ ಅಧಿಕಾರಿಗಳ ಮನೆ ಮನೆ ಭೇಟಿ ಪ್ರಕ್ರಿಯೆಯಿಂದ ಅಂತಿಮ ಮತದಾರರ ಪಟ್ಟಿ ಪ್ರಕಟಣೆಯವರೆಗೆ ದಿನಾಂಕಗಳಲ್ಲಿ ಬದಲಾವಣೆ ಮಾಡಲಾಗಿದೆ.

ಪರಿಷ್ಕೃತ ವೇಳಾಪಟ್ಟಿ
ಮನೆ ಮನೆ ಭೇಟಿ ಪ್ರಕ್ರಿಯೆ:
2026 ಜೂನ್ 30 ರಿಂದ 2026 ಆಗಸ್ಟ್ 17ರವರೆಗೆ

ಮತಗಟ್ಟೆಗಳ ಮರುಜೋಡಣೆ:
2026 ಆಗಸ್ಟ್ 17

ಕರಡು ಮತದಾರರ ಪಟ್ಟಿಯ ಪ್ರಕಟಣೆ:
2026 ಆಗಸ್ಟ್ 24

ಆಕ್ಷೇಪಣೆ ಸಲ್ಲಿಸಲು ಅವಕಾಶ:
2026 ಆಗಸ್ಟ್ 24 ರಿಂದ 2026 ಸೆಪ್ಟೆಂಬರ್ 23ರವರೆಗೆ

ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ:
2026 ಆಗಸ್ಟ್ 24 ರಿಂದ 2026 ಅಕ್ಟೋಬರ್ 22ರವರೆಗೆ

ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ:
2026 ಅಕ್ಟೋಬರ್ 27

ಮನೆ ಮನೆ ಭೇಟಿ ಅವಧಿ ವಿಸ್ತರಣೆ
ಈ ಮೊದಲು ನಿಗದಿಪಡಿಸಿದ್ದ ವೇಳಾಪಟ್ಟಿಯ ಪ್ರಕಾರ ಬಿಎಲ್‌ಒಗಳ ಮನೆ ಮನೆ ತಪಾಸಣಾ ಕಾರ್ಯ ಈಗಾಗಲೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಹಲವು ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಪರಿಶೀಲನೆ ಹಾಗೂ ದತ್ತಾಂಶ ನಮೂದು ಕಾರ್ಯ ಬಾಕಿ ಇರುವುದರಿಂದ, ಮನೆ ಮನೆ ಭೇಟಿ ಪ್ರಕ್ರಿಯೆಯನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದೆ.

ಅದೇ ದಿನ ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ (Rationalisation) ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ. ನಂತರ ಆಗಸ್ಟ್ 24ರಂದು ರಾಜ್ಯದಾದ್ಯಂತ ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ನಕಲಿ ಮತ್ತು ಗೈರುಹಾಜರಾತಿ ಮತದಾರರ ಪರಿಶೀಲನೆ
ಚುನಾವಣಾ ಇಲಾಖೆ ಪ್ರಸ್ತುತ ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ನಕಲಿ ಮತದಾರರನ್ನು ಗುರುತಿಸುವ (ASDDO ಪಟ್ಟಿ) ಕಾರ್ಯವನ್ನು ವೇಗವಾಗಿ ನಡೆಸುತ್ತಿದೆ. ಈ ಪ್ರಕ್ರಿಯೆಯಲ್ಲಿ ತಪ್ಪಾಗಿ ಹೆಸರು ಸೇರಿದ್ದರೆ ಅಥವಾ ಕೈಬಿದ್ದಿದ್ದರೆ, ಮತದಾರರು ಆಗಸ್ಟ್ 17ರೊಳಗೆ ತಮ್ಮ ವಿವರಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.