ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) 2026–2027ನೇ ಸಾಲಿನ ಹರಿಹರಪುರ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕೊಪ್ಪದ ಲಯನ್ಸ್ ಹಾಲ್‌ನಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಹರಿಹರಪುರ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಸುಪ್ರದೀಪ್ ಎನ್.ಎಸ್, ಕಾರ್ಯದರ್ಶಿಯಾಗಿ ಪ್ರಜ್ವಲ್ ಹಾಗೂ ಖಜಾಂಚಿಯಾಗಿ ಪ್ರತಿನ್ ನಂದಿಗೋಡು ಅವರು ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.

ಸಮಾರಂಭದಲ್ಲಿ ಕೊಪ್ಪ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಎನ್, ನಿಲುವಾಗಿಲು ಮಂಡಲ ಪಂಚಾಯಿತಿಯ ಮಾಜಿ ಮಂಡಲ ಪ್ರಧಾನರು ಎನ್.ಪಿ. ಶಂಕರಪ್ಪ ನಾಯಕ್, ಅ.ರ.ಸ. ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಎ.ಒ. ವೆಂಕಟೇಶ್, ಸರ್ಕಾರಿ ಪ್ರೌಢಶಾಲೆ, ನಿಲುವಾಗಿಲು ಕುಮಾರಿ ಅನಿಶಾ ಶಶಿಕುಮಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಮುಖಂಡರು, ಗಣ್ಯರು, ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಹರಿಹರಪುರದ ಸಾರ್ವಜನಿಕರು ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮವು ಸ್ನೇಹ, ಸೇವೆ ಮತ್ತು ಸಾಮಾಜಿಕ ಬದ್ಧತೆಯ ಸಂದೇಶ ಸಾರುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು. (ವರದಿ- ಅಖಿಲೇಶ್ ಕೊಪ್ಪ)













