ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಮೇಗೂರು ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದ ರಥೋತ್ಸವ ಶನಿವಾರ (ಫೆಬ್ರವರಿ 15) ವಿಜೃಂಭಣೆಯಿಂದ ನಡೆಯಿತು.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ!; ಈ ದಾಖಲೆ ಕಡ್ಡಾಯ

ದಕ್ಷಿಣ ತಿರುಪತಿ ಎಂದೇ ಖ್ಯಾತಿಯಾಗಿರುವ ಮೇಗೂರು ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದ ರಥೋತ್ಸವೂ 11.02.2025 ಗುರುವಾರದಿಂದ ಗಣಪತಿ ಮತ್ತು ಶಾಂತಾದುರ್ಗಾಪರಮೇಶ್ವರೀ ದೇವರಿಗೆ ಕಲಾತತ್ವಅಧಿವಾಸಹೋಮ, ತತ್ವ ಕಲಶಾಭಿಷೇಕ, ಮಹಾಪೂಜೆಯೊಂದಿಗೆ ಆರಂಭವಾಗಿ ಇಂದು (17.02.2025) ತುಲಾಭಾರ ಸೇವೆಗಳು ನೇರವೇರಿತು.

ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಜಾಬ್ ಆಫರ್; 10th ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ
ಜಾತ್ರೆಯ ಕೊನೆಯ ದಿನವಾದ ಇಂದು ತುಲಾಭಾರ ಸೇವೆ, ಶುದ್ಧ ಸಂಪ್ರೂಕ್ಷಣೆ ನೆರವೇರಿತು ಜಾತ್ರಾ ಮಹೋತ್ಸವದ ಸಂಪೂರ್ಣ ಧಾರ್ಮಿಕ ವಿಧಿ ವಿಧಾನಗಳು ತಂತ್ರಿಗಳಾದ ವೇ||ಬ್ರ||ಶ್ರೀ ಹೆಚ್. ಕೆ ವಿಶ್ವನಾಥ್ ಭಟ್ ಮಲ್ಲಂದೂರು ಇವರ ಇವರ ಮಾರ್ಗದರ್ಶನದಲ್ಲಿ ನೇರವೇರಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಗೋಪಿ ಮೇಗೂರು, ಶ್ರೀಧರ್ ಅಳೆವರಲು ಇದ್ದರು.
ಇದನ್ನೂ ಓದಿ: ಒಂದೇ ಚಾರ್ಜ್‌ನಲ್ಲಿ 320 ಕಿ.ಮೀ. ಪ್ರಯಾಣ; ಮತ್ತೊಂದು ಹೊಸ ಸ್ಕೂಟರ್ ಅನಾವರಣ













