
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತುರ್ತು ರೋಗಿಗಳ ಆರೋಗ್ಯ ಕಾಪಾಡಲೆಂದು ಇರುವ ‘108’ ಆಂಬ್ಯುಲೆನ್ಸ್ ಕೆಟ್ಟು ನಾಲ್ಕು ತಿಂಗಳು ಆದರೂ ಕೂಡ ನಿಂತಲ್ಲೇ ನಿಂತಿದ್ದು, ರೋಗಿಗಳು ಪರದಾಡುವಂತಾಗಿದೆ.
ಇದನ್ನೂ ಓದಿ: ಗ್ರಾಮ ಆಡಳಿತಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ರಾಜೇಂದ್ರ ಕುಮಾರ್ ಕಟಾರಿಯಾ; ಏನದು ಸೂಚನೆ…? ಇಲ್ಲಿದೆ ನೋಡಿ

ಕಳೆದ ನಾಲ್ಕು ತಿಂಗಳ ಹಿಂದೆ ಟೈರ್ ಪಂಚರ್ ಆಗಿ ದುರಸ್ತಿಗೆ ಬಂದಿತ್ತು. ಅಂದಿನಿಂದ ಇಂದಿಗೂ ಒಂದು ಮೂಲೆಯಲ್ಲಿ ಬಿಸಿಲಿಗೆ ಮೈಯೊಡ್ಡಿ ನಿಂತಿದೆ. ಈಗ ಜನತೆಯ ತುರ್ತು ಸೇವೆಗೆ ಆಂಬ್ಯುಲೆನ್ಸ್ ದೊರೆಯದಿದ್ದಾಗ ಖಾಸಗಿ ಆಂಬ್ಯುಲೆನ್ಸ್‌ಗಳ ಮೊರೆ ಹೋಗಬೇಕಾಗಿದೆ. ಇದರಿಂದಾಗಿ ಬಡವರಿಗೆ ತೀರಾ ಅನಾನುಕೂಲ ಉಂಟಾಗಿದೆ.

4 ತಿಂಗಳು ಕಳೆದರೂ ಸರ್ಕಾರಕ್ಕೆ 4 ಟೈಯರ್ ಹಾಕಿಸುವ ಯೋಗ್ಯತೆ ಇಲ್ಲವಾಯಿತೇ ಎಂಬ ಪ್ರಶ್ನೆ ಮೂಡಿದೆ ಇರುವುದೇ!

ಇದನ್ನೂ ಓದಿ: ಇ-ಖಾತೆ ಇಲ್ಲದ ಆಸ್ತಿ ಮಾಲೀಕರಿಗೆ ಖಾತೆ ಪಡೆಯಲು ಮತ್ತೊಮ್ಮೆ ಅವಕಾಶ!; ಇಲ್ಲಿದೆ ನೋಡಿ ಡಿಟೈಲ್ಸ್
ಕ್ರಮ ಕೈಗೊಳ್ಳದ ಶಾಸಕರು , ಅಧಿಕಾರಿಗಳು:
ಸಮಯಕ್ಕೆ ಸರಿಯಾಗಿ ತುರ್ತುವಾಹನದ ಸೇವೆ ಇಲ್ಲದೆ ಪ್ರಾಣಾಪಾಯಕ್ಕೆ ಒಳಗಾದಂತಹ ಪ್ರಕರಣಗಳು ತಾಲೂಕಿನಲ್ಲಿ ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಮಾತ್ರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ವಾಹನದ ಸೌಲಭ್ಯವಿಲ್ಲದೆ ಆಗುವ ಅನಾಹುತಗಳಿಗೆ ಹೊಣೆ ಯಾರು? ಎಂಬುದು ಸಾರ್ವಜನಿಕರ ಪ್ರಶ್ನೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಆಂಬ್ಯುಲೆನ್ಸ್‌ಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕ ಸೇವೆಗೆ ಒದಗಿಸಬೇಕೆಂಬುದು ನ್ಯೂಸ್ ಮಲ್ನಾಡ್ ಕಳಕಳಿ
ಇದನ್ನೂ ಓದಿ: ರಾಜ್ಯದ ರೈತರಿಗೆ ಇಂಧನ ಸಚಿವರಿಂದ ಮುಖ್ಯ ಮಾಹಿತಿ; ಅಕ್ರಮ ಪಂಪ್ ಸೆಟ್ ಕುರಿತು ಮಹತ್ವದ ಘೋಷಣೆ!














