
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಡೈನಮೈಟ್ ಬ್ಲಾಸ್ಟ್ ಗೆ 15 ಎಲ್.ಇ.ಡಿ. ಟಿವಿ ಸುಟ್ಟುಹೋದ ಘಟನೆ ಚಿಕ್ಕಮಗಳೂರು ತಾಲೂಕಿನ ನಾಗರಹಳ್ಳಿ, ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಿನ್ನೆ ಸಂಜೆ ಆರು ಗಂಟೆ ಸುಮಾರಿಗೆ ಕಲ್ಲು ಗಣಿಗಾರಿಕೆಗಾಗಿ 2 ಡೈನಮೈಟ್ ಗಳು ಬ್ಲಾಸ್ಟ್ ಆಗಿದ್ದು, ಇದರಿಂದ 15 ಎಲ್.ಇ.ಡಿ. ಟಿವಿ, ಮನೆಯ ಮೇಲ್ಛಾವಣಿಗೆ ಹಾಕಿದ್ದ ಎಲ್.ಇ.ಡಿ.ಲೈಟ್, ಕೆಲ ಮನೆಯ ಕಿಟಕಿಯ ಗಾಜು ಹಾಗೆಯೇ ಅಡುಗೆ ಮನೆಯಲ್ಲಿದ್ದ ಪಾತ್ರೆಗಳು ಮನೆ ತುಂಬಾ ಚೆಲ್ಲಾಪಿಲ್ಲಿ ಆಗಿದ್ದು, ಮನೆಯ ಮೇಲ್ಛಾವಣಿಯ ಶೀಟ್ ಗಳು ಬಿರುಕು ಬಿಟ್ಟಿವೆ.

ಇದನ್ನೂ ಓದಿ: ಅರಣ್ಯದಲ್ಲಿ ಶೂಟ್ ಮಾಡುವವರಿಗೆ ಸ್ಟ್ರಿಕ್ಟ್ ರೂಲ್ಸ್; ಸರ್ಕಾರದಿಂದ ಹೊಸ ಆದೇಶ
ಡೈನಮೈಟ್ ಬ್ಲಾಸ್ಟ್ ತೀವ್ರತೆಗೆ ಸುಮಾರು 5-6 ಸೆಕೆಂಡ್ ಭೂಮಿ ಕಂಪಿಸಿದೆ ಎನ್ನಲಾಗಿದ್ದು, ಮರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗಣಿಗಾರಿಕೆಯಿಂದ ಆತಂಕ ಮೂಡಿದೆ.
ಇದನ್ನೂ ಓದಿ: BEL ನಿಂದ 350 ಹುದ್ದೆಗೆ ಅರ್ಜಿ ಆಹ್ವಾನ; ಆಕರ್ಷಕ ಸಂಬಳ













