
ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಳೆದ ನಾಲ್ಕು ವರ್ಷಗಳ ಹಿಂದೆ ಮಾವಿನಕೆರೆ ಗ್ರಾಮದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗೆ 3 ವರ್ಷಗಳ ಜೈಲು ಹಾಗೂ 10.000ರೂ ದಂಡ ವಿಧಿಸಿ ಆದೇಶಿಸಿದೆ.

ಏನಿದು ಪ್ರಕರಣ:
2021 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಮಾವಿನಕೆರೆ ಗ್ರಾಮದ ಆರೋಪಿ ಎನ್.ಸಿ ಸತೀಶ್, ಮಗಳಿಗೆ ಸೌದೆಯಿಂದ ಹೊಡೆದು ಹಲ್ಲೆ ಮಾಡಿದಲ್ಲದೆ ತಡೆಯಲು ಹೋದ ಪತ್ನಿ ಮೇಲೂ ಹಲ್ಲೆ ನಡೆಸಿದ್ದು, ಈ ಸಂಬಂಧ ಆರೋಪಿಯ ಪತ್ನಿ ದೂರು ನೀಡಿದ್ದರು.

ಇದನ್ನೂ ಓದಿ: ಅರಣ್ಯದಲ್ಲಿ ಶೂಟ್ ಮಾಡುವವರಿಗೆ ಸ್ಟ್ರಿಕ್ಟ್ ರೂಲ್ಸ್; ಸರ್ಕಾರದಿಂದ ಹೊಸ ಆದೇಶ
ದೂರಿನನ್ವಯ ಪ್ರಕರಣ ವಿಚಾರಣೆ ನಡೆಸಿದ ಮಾನ್ಯ ಹೆಚ್ಚುವರಿ ಸಿಜೆ ಮತ್ತು ಜೆ.ಎಂಎಫ್‌ಸಿ ನ್ಯಾಯಾಲಯ ಮೂಡಿಗೆರೆಯ ನ್ಯಾಯಾದೀಶರಾದ ವಿಶ್ವನಾಥ್.ಎ. ಅವರು ಆರೋಪಿಗೆ 3 ವರ್ಷಗಳ ಜೈಲು, 10.000ರೂ ದಂಡ ವಿಧಿಸಿದೆ. ದಂಡ ಕೊಡಲು ತಪ್ಪಿದ್ದಲ್ಲಿ 6 ತಿಂಗಳು ಕಾರಾಗೃಹ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ: BEL ನಿಂದ 350 ಹುದ್ದೆಗೆ ಅರ್ಜಿ ಆಹ್ವಾನ; ಆಕರ್ಷಕ ಸಂಬಳ
ನೊಂದವರ ಪರ ಸರ್ಕಾರಿ ಅಭಿಯೋಜಕಿ ಶ್ರೀಮತಿ ರೇಣುಕಾ ವಾದ ಮಂಡಿಸಿದ್ದರು.













