ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಮಂಗಳವಾರ ಯುವಕನ ಮೇಲೆ ತಲ್ವಾರ್’ನಿಂದ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನೆಮ್ಮಾರ್ʼನ ಶಬರೀಶ್ (23) ಹಾಗೂ ಎನ್. ಆರ್ ಪುರದ ಕಟ್ಟಿನಮನೆ ವಾಸಿ ವಿವೇಕ (24) ಬಂಧಿತ ಆರೋಪಿಗಳು.

ಕಳೆದ ಮಂಗಳವಾರ 11 ಗಂಟೆ ಸುಮಾರಿಗೆ ಮಹೀಂದ್ರ ಜೈಲೋ XUV 500 ಕಾರಿನಲ್ಲಿ ಬಂದಿರುವ ಗುಂಪು ಶಿಡ್ಲೆ ಸಮೀಪ ಸುಮುಖ ಎನ್ನುವ ಯುವಕನ ಮೇಲೆ ತಲ್ವಾರ್ ನಿಂದ ದಾಳಿಗೆ ಯತ್ನಿಸಿದ್ದರು. ಇದೀಗ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ನಿವೃತ್ತ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ; ಏನದು ಮಹತ್ವದ ಸುದ್ದಿ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್













