ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ವೈನ್ಸ್ ಶಾಫ್ ಸೇರಿದಂತೆ ಒಟ್ಟು ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿರುವ ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ಕರುಣ ಆರ್ (25) ಹಾಗೂ ಹಸೈನ್ (22) ಬಂಧಿತ ಆರೋಪಿಗಳು.
ಇದನ್ನೂ ಓದಿ: ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ

ಕಳೆದ ಒಂದು ವಾರದ ಹಿಂದೆ ಪವನ್ ಪ್ರಾವಿಷನ್ ಸ್ಟೋರ್, ಎನ್. ಆರ್. ಪುರ ರಸ್ತೆಯ ಕಲ್ಮಕ್ಕಿ ವೈನ್ಸ್, ಪ್ರಭು ಪ್ರಾವಿಷನ್ ಸ್ಟೋರ್ ಹಾಗೂ ಬಾಳೆಹೊನ್ನೂರು ಕಾಫಿ ಲಿಂಕ್ಸ್ ಎಂಬ 4 ಅಂಗಡಿಗಳಲ್ಲಿ ಬೀಗ ಒಡೆಯದೆ ಬಾಗಿಲನ್ನು ಆಯುಧದಿಂದ ಮೀಟಿ ಒಳ್ಳ ನುಗ್ಗಿ ನಗದು ಸೇರಿದಂತೆ ಸಿಸಿಟಿವಿ ಡಿವಿಆರ್ ಹಾಗೂ ಮತ್ತಿತರ ವಸ್ತುಗಳನ್ನು ಕಳ್ಳತನ ಮಾಡಿದ್ದರು.
ಈ ಘಟನೆ ಸಂಬಂಧ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿ 4,10,985 /- ರೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
ಇನ್ನು ಈ ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಸ್.ಪಿ ವಿಕ್ರಂ ಅಮಟೆ, ಚಿಕ್ಕಮಗಳೂರು ಜಿಲ್ಲೆಯ ಹೆಚ್ಚುವರಿ ಅಧೀಕ್ಷಕರು ಕೃಷ್ಣಮೂರ್ತಿ, ಕೊಪ್ಪ ಉಪ ವಿಭಾಗ ಡಿವೈಎಸ್ ಪಿ ಬಾಲಾಜಿ ಸಿಂಗ್ ಮಾರ್ಗದರ್ಶನದಲ್ಲಿ ಬಾಳೆಹೊನ್ನೂರು ಠಾಣೆಯ ಪಿಎಸ್ ಐ ರವೀಶ್ ಹಾಗೂ ಸಿಬ್ಬಂದಿಗಳಾದ ಶಂಕರ್ ಕೆ ಜೆ, ಜಯರಾಮ್, ಮಂಜುನಾಥ, ವಿನಾಯಕ, ಮನು ಮಂಜುನಾಥ ಗುಗ್ಗರಿ, ಕಿರಣ್, ಭೀಮಸೇನಾ, ಚನ್ನಯ್ಯ, ಚಾಲಕ ಕಾರ್ತಿಕ್ ಇದ್ದರು.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?












