ಚಿಕ್ಕಮಗಳೂರು: ಅಕ್ರಮವಾಗಿ ಕಟ್ಟಿಹಾಕಿದ್ದ 12 ಜಾನುವಾರುಗಳ ರಕ್ಷಣೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಕಟ್ಟಿಹಾಕಿ ಹಿಂಸೆ ನೀಡಲಾಗುತ್ತಿದ್ದ 12 ಜಾನುವಾರುಗಳನ್ನು ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ರಕ್ಷಣೆ ಮಾಡಿರುವ ಘಟನೆ ಹಳುವಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಆದರ್ಶಕುಮಾರ ಜಿ.ಆರ್. ಹಾಗೂ ಸಿಬ್ಬಂದಿ ಮಾಗಡಿ ಮತ್ತು ಮರ್ಲೆ ಗ್ರಾಮಗಳ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ, ಹಳುವಳ್ಳಿ ಗ್ರಾಮದ ಸುಭಾಷ್ ಎಂಬುವರಿಗೆ ಸೇರಿದ ಖಾಲಿ ಜಮೀನಿನ ಬೇಲಿ ಸಮೀಪ ಕಳ್ಳತನದ ಜಾನುವಾರುಗಳನ್ನು ತಂದು ಅಕ್ರಮವಾಗಿ ಕಟ್ಟಿಹಾಕಲಾಗಿದೆ ಎಂಬ ಖಚಿತ ಮಾಹಿತಿ ಲಭಿಸಿದೆ.

ತಕ್ಷಣ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ವಾರಸುದಾರರಿಲ್ಲದೆ ಕಟ್ಟಿಹಾಕಲಾಗಿದ್ದ 12 ಜಾನುವಾರುಗಳನ್ನು ಪತ್ತೆಹಚ್ಚಿದ್ದಾರೆ. ಪರಿಶೀಲನೆ ವೇಳೆ ಜಾನುವಾರುಗಳಿಗೆ ಸಮರ್ಪಕ ಆಹಾರ, ನೀರು ಹಾಗೂ ಆಶ್ರಯ ಒದಗಿಸದೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಲಾಗಿರುವುದು ಕಂಡುಬಂದಿದೆ.

ರಾತ್ರಿಯ ಸಮಯವಾಗಿದ್ದರಿಂದ ಪಂಚರು ಲಭ್ಯವಾಗದ ಹಿನ್ನೆಲೆಯಲ್ಲಿ, ಜಾನುವಾರುಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಗೂಡ್ಸ್ ವಾಹನದ ಮೂಲಕ ಅದೇ ರಾತ್ರಿ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣಕ್ಕೆ ಸಾಗಿಸಿ ರಕ್ಷಣೆ ನೀಡಲಾಗಿದೆ.

ಜಾನುವಾರುಗಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಬಂಧಿಸಿ ಹಿಂಸೆ ನೀಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.