ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದಲ್ಲಿರುವ ಪ್ರತಿಷ್ಠಿತ ಜೆ.ಸಿ.ಬಿ.ಎಂ ಕಾಲೇಜಿನಲ್ಲಿ PG & Ph.D ಕೋರ್ಸ್ಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಅನುಭವಿ ಮತ್ತು ಅರ್ಹ ಸಿಬ್ಬಂದಿಗಳು ಸೇರಿದಂತೆ ಪ್ರಯೋಗಾಲ, ಗ್ರಂಥಾಲಯ ಹಾಗೂ ವಿವಿಧ ಪಠ್ಯೇತರ ಚಟುವಟಿಕೆಗಳು ಮತ್ತು ಕ್ರೀಡಾ ಸೌಲಭ್ಯಗಳನ್ನು ಹೊಂದಿರುವ ಪ್ರತಿಷ್ಠಿತ ಶ್ರೀ ಜೆ.ಸಿ.ಬಿ.ಎಂ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಇವರಿಂದ 2025-26 ವರ್ಷಕ್ಕೆ PG & Ph.D. ಕೋರ್ಸ್ಗಳ ಪ್ರವೇಶ ಪ್ರಾರಂಭವಾಗಿದೆ.
ಪಿಎಚ್.ಡಿ ಕೋರ್ಸ್ ನಲ್ಲಿ ಭರತ ನಾಟ್ಯಂ, ನಾಟಕ, ಸಾಹಿತ್ಯ ಮತ್ತು ಭಾಷೆಗಳು ಹಾಗೂ ಪಿಜಿ ಕೋರ್ಸ್ ನಲ್ಲಿ ಭರತ ನಾಟ್ಯ, ಕರ್ನಾಟಕ ಸಂಗೀತ ಹಾಗೆಯೇ 6 ತಿಂಗಳುಗಳ Certificate ಕೋರ್ಸ್ಗಳಲ್ಲಿ ಭರತ ನಾಟ್ಯ, ಸುಗಮ ಸಂಗೀತ, ಕರ್ನಾಟಕ ಸಂಗೀತ ಕೋರ್ಸ್ ಗಳು ಲಭ್ಯವಿದೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಜಿಲ್ಲೆಯಲ್ಲೇ ಈ ಕೋರ್ಸ್ ಹೊಂದಿರುವ ಪ್ರಥಮ ಕಾಲೇಜು:
ಈ ಕೋರ್ಸ್ ಗಳು ಜೆ.ಸಿ.ಬಿ.ಎಂ ಕಾಲೇಜಿನಲ್ಲಿ ಬಿಟ್ಟರೆ ಬೇರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಲಭ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.












