
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಿ.ಡಿ.ಒ ಮತ್ತು ಅಧ್ಯಕ್ಷರ ಜನವಿರೋಧಿ ಸರ್ವಾಧಿಕಾರಿ ಆಡಳಿತ ವಿರೋಧಿಸಿ ಅದೇ ಪಂಚಾಯಿತಿ ಸದಸ್ಯರು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದಾರೆ.
ಇದನ್ನೂ ಓದಿ: ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಈ ರೂಲ್ಸ್ ಕಡ್ಡಾಯ; ರಾಜ್ಯ ಸರ್ಕಾರದಿಂದ ಆದೇಶ

ಐದು ಸದಸ್ಯರಿರುವ ಗ್ರಾಮ ಪಂಚಾಯಿತಿಯಲ್ಲಿ ಮೂರು ಸದಸ್ಯರು ವಿವಿಧ ಬೇಡಿಕೆಗಳಾದ ವಸತಿ ಮತ್ತು ನಿವೇಶನ ತಯಾರಿಸದಿರುವ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನ ದುರ್ಬಳಕೆ, ಹದಿನೈದನೇ ಹಣಕಾಸು ಯೋಜನೆಯ ನಿಯಮ ಉಲ್ಲಂಘನೆ, ವರ್ಗ-1ರ ಹಣ ದುರುಪಯೋಗ, ನರೇಗಾ ಯೋಜನೆಯಡಿ ಜನರ ಬೇಡಿಕೆ ಮತ್ತು ವಸತಿ ಇರದ ಕಡೆ ರಸ್ತೆ ಬಾಕ್ಸ್ ಚರಂಡಿ, ಈ ಸ್ವತ್ತುವಿನಲ್ಲಿ ಅವ್ಯವಹಾರ ಹಾಗೂ ಇನ್ನಿತರೆ ಬೇಡಿಕೆಗಳನ್ನಿಟ್ಟು ಸದಸ್ಯರಾದ ಶಿವಪ್ರಸಾದ್ ಬಿ.ಇ, ಸುನೀತ ಬಿ.ಟಿ ಉಪಾಧ್ಯಕ್ಷರಾದ ನಾಟ್ಯ ರಂಜಿತ್ ರವರು ಧರಣಿ ನಡೆಸಿದ್ದಾರೆ.

ಇದನ್ನೂ ಓದಿ: SSLC-PUC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಕೇಂದ್ರ ಸರ್ಕಾರದಿಂದ ಪಡೆಯಬಹುದು ಈ ಯೋಜನೆ ಲಾಭ
ಈ ವೇಳೆ ರವಿಶಂಕರ್, ಬಿ.ಡಿ ರವಿ, ಕೆ.ಪಿ ರಾಜು, ಸುಧಾಕರ್, ಜಯಕುಮಾರ್, ರಮೇಶ್ ಪೂಜಾರಿ, ಧನಂಜಯ್, ಜಿತೇಂದ್ರ, ಪ್ರಜ್ವಲ್, ಕೇಶವ್, ರಂಜಿತ್, ಸಂತೋಷ್ ಹೊಕ್ಕಳ್ಳಿ ಹಾಗೂ ನೂರಾರು ಗ್ರಾಮಸ್ಥರು ಇದ್ದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ!; ಈ ರೀತಿ ಚೆಕ್ ಮಾಡಿ













