
ಒಂದೆಡೆ ಆಸ್ಪತ್ರೆಗಳಲ್ಲಿ ಮೆಡಿಸಿನ್ ಇಲ್ಲ ಎಂಬ ಕೂಗು ಕೇಳಿ ಬರುತ್ತಿದೆ, ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 2 ತಿಂಗಳಿಂದ ಇನ್ಸುಲಿನ್ ಇಂಜೆಕ್ಷನ್ ಲಭ್ಯವಿಲ್ಲ, ಹಾಗೆ ಬಿಪಿ ಮಾತ್ರೆ ಸಹ ಒಂದು ತಿಂಗಳಿಂದ ಲಭ್ಯವಿಲ್ಲ, ಹಾಗೂ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲೂ ಹಾಗೂ ಹಲವು ಆರೋಗ್ಯ ಕೇದ್ರಗಳಲ್ಲಿ ಮೆಡಿಸಿನ್ ಗಳ ಕೊರತೆ ಉಂಟಾಗಿದೆ, ದಿನನಿತ್ಯ ಅಗತ್ಯವಿರುವ ಕೆಲವು ಮೆಡಿಸಿನ್ ಗಳೇ ಲಭ್ಯವಿಲ್ಲ ಎಂಬ ದೂರು ಕೇಳಿಬಂದಿದೆ.
ಇದನ್ನೂ ಓದಿ: ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಈ ರೂಲ್ಸ್ ಕಡ್ಡಾಯ; ರಾಜ್ಯ ಸರ್ಕಾರದಿಂದ ಆದೇಶ

ಆದರೆ ಮತ್ತೊಂದೆಡೆ ಆರೋಗ್ಯ ಇಲಾಖೆಗೆ ಅಂದಾಜು 1 ಕೋಟಿ ಮೌಲ್ಯದ ಒಟ್ಟು 10 ವಾಹನಗಳ ಖರೀದಿ ಮಾಡಲಾಗಿದೆ. ಸರ್ಕಾರದಿಂದ ವಾಹನ ಖರೀದಿಗೆ ಎಂದು ಯಾವುದೇ ಅನುದಾನ ಬಾರದಿದ್ದರೂ, ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತರಾತುರಿಯಲ್ಲಿ ವಾಹನ ಖರೀದಿ ನಡೆಸಿದ್ದಾರೆ, ಆರೋಗ್ಯ ಇಲಾಖೆಯಲ್ಲಿ ಮಾರ್ಚ್ ಅಂತ್ಯದಲ್ಲಿ ಹಣವನ್ನು ಉಳಿಸಿ ಅದನ್ನು ವಾಹನ ಖರೀದಿಗೆ ಬಳಸಲಾಗಿದೆ. ಆದರೆ ಆಸ್ಪತ್ರೆಗಳಿಗೆ ಸರಿಯಾದ ಔಷದಗಳನ್ನು ಪೂರೈಸದೆ, ರೋಗಿಗಳ ಜೀವದೊಂದಿಗೆ ಆಟವಾಡಿ ಅದರಿಂದ ಹಣವನ್ನು ಉಳಿತಾಯ ಮಾಡಿ ವಾಹನ ಖರೀದಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: SSLC-PUC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಕೇಂದ್ರ ಸರ್ಕಾರದಿಂದ ಪಡೆಯಬಹುದು ಈ ಯೋಜನೆ ಲಾಭ
ಸಾಮಾನ್ಯವಾಗಿ ಆರೋಗ್ಯ ಇಲಾಖೆಗೆ ಸರ್ಕಾರದಿಂದ ಮೆಡಿಸಿನ್ ಪೂರೈಕೆ ಆಗುತ್ತದೆ, ಆಗದಿದ್ದಲ್ಲಿ ಖಾಸಗಿಯಾಗಿ ಖರೀದಿ ಮಾಡಲಾಗುತ್ತದೆ, ಆದರೆ ಖಾಸಗಿ ಮಾರಾಟಗಾರರಿಗೆ ಸಾಲ ಬಾಕಿ ಇರುವುದರಿಂದ ಹಲವೆಡೆ ಖಾಸಗಿಯವರು ಮೆಡಿಸಿನ್ ಸಪ್ಲೈ ಮಾಡುತ್ತಿಲ್ಲ. ವಾಹನ ಖರೀದಿಗೆ ಬಳಸಿದ ಹಣವನ್ನೇ ರೋಗಿಗಳ ಔಷಧ ಖರೀದಿಗೆ ಬಳಸಬಹುದಿತ್ತಲ್ಲವೇ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಅಧಿಕಾರಿಗಳು ಕಮೀಷನ್ ಆಸೆಗೆ ಬಿದ್ದು ರೋಗಿಗಳ ಜೀವದೊಂದಿಗೆ ಆಟವಾಡಿದರಾ ಎಂಬುದನ್ನು ತನಿಖೆಗೆ ಒಳಪಡಿಸಿ ಜನಪ್ರತಿನಿಧಿಗಳು ಸೂಕ್ತ ಕ್ರಮ ವಹಿಸಬೇಕಿದೆ.
ಇದನ್ನೂ ಓದಿ: ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ!; ಈ ರೀತಿ ಚೆಕ್ ಮಾಡಿ













