ಎನ್.ಆರ್.ಪುರ: (ನ್ಯೂಸ್ ಮಲ್ನಾಡ್ ವರದಿ) ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕರಗುಂದದಲ್ಲಿ ನಡೆದಿದೆ. ಹೊರನಾಡು ಸಮೀಪದ ಸುನಿಲ್ ಹಾಗೂ ಉಮೇಶ್ ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿಗಳು.


ಇದನ್ನೂ ಓದಿ: ಶುರುವಾಯ್ತು SMS ಹಗರಣ!; ಹಣ ಜಮೆಯಾಗಿದೆ ಅಂತಾ ಸಂದೇಶ ಬಂದಿದ್ಯಾ.?; ಈ ರೀತಿ ಮೆಸೇಜ್ ಬಂದ್ರೆ ಹುಷಾರ್

ಇಂದು ಬೆಳಗ್ಗೆ 9.30 ರ ಸುಮಾರಿಗೆ ಈ ಘಟನೆ ನಡೆದಿದೆ. ಸುನಿಲ್ ಹಾಗೂ ಉಮೇಶ್ ಹೊರನಾಡಿನ ಲಾಡ್ಜ್ ವೊಂದರಲ್ಲಿ ಕೆಲಸ ಮಾಡುತ್ತಿದ್ದವರು ಎನ್ನಲಾಗಿದೆ.


ಇದನ್ನೂ ಓದಿ: ಅಡಿಕೆ ತೋಟಕ್ಕೆ ಕೊಳೆ ರೋಗದ ಭೀತಿಯೇ?; ನಿಯಂತ್ರಣಕ್ಕೆ ಈಸೀ ಲೈಫ್ ನ ಶಾಖೆಯಲ್ಲಿ ಲಭ್ಯವಿದೆ ರಾಮಬಾಣ
ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿದ್ದು, ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.
ಜಯಪುರ: ಕರಾಟೆ ಮತ್ತು ಯೋಗ ತರಬೇತಿ ಶಿಬಿರ ಆಯೋಜನೆ
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಆತ್ಮರಕ್ಷಣೆಗಾಗಿ ಕರಾಟೆಯಂತಹ ಕಲೆಯನ್ನು ಕಲಿಯುವುದು ಇತ್ತೀಚಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ ಮಲೆನಾಡು ಭಾಗದ ಜನರಿಗೆ ಜಯಪುರದ ಸ್ಪಂದನ ಸ್ವಯಂಸೇವಾ ಸಂಸ್ಥೆ ಉಚಿತ ಕರಾಟೆ ತರಬೇತಿ ಶಿಬಿರವನ್ನು ಆಯೋಜಿಸಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ನೋಡಿ ಸುವರ್ಣಾವಕಾಶ; ಕಂದಾಯ ಇಲಾಖೆಯಲ್ಲಿ ಉದ್ಯೋಗ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸ್ಪಂದನ ಸಂಸ್ಥೆಯ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್, 4 ವರ್ಷ ಮೇಲ್ಪಟ್ಟ ಕರಾಟೆ ತರಬೇತಿ ಪಡೆಯಲಿಚ್ಚಿಸುವ ಬಾಲಕ, ಬಾಲಕಿಯರು, ಹಾಗೂ ವಯಸ್ಕರಿಗಾಗಿ ಹದಿನೈದು ದಿನಗಳ ಉಚಿತ ಕರಾಟೆ ತರಬೇತಿ ಶಿಬಿರವನ್ನು ಜಯಪುರದಲ್ಲಿ ಆಯೋಜಿಸಿದೆ.
ಮೇ 06 ರ ಸೋಮವಾರದಿಂದ ಮೇ 20 ರ ಸೋಮವಾರದವರೆಗೆ ಜಯಪುರದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರಾಟೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಪ್ರತಿ ದಿನ ಬೆಳಗ್ಗೆ 7 ರಿಂದ ಬೆಳಗ್ಗೆ 8-30 ರವರೆಗೆ ಶಿಬಿರದಲ್ಲಿ ಕರಾಟೆಯ ವಿವಿಧ ಪ್ರಾಕಾರಗಳಾದ ಬೇಸಿಕ್ ಟೆಕ್ನಿಕ್, ಪಂಚ್ ಟೆಕ್ನಿಕ್, ಕಿಕ್ ಬಾಕ್ಸಿಂಗ್, ದೊಣ್ಣೆ ವರೆಸೆ, ಸೆಲ್ಫ್ ಡಿಫೆನ್ಸ್ ಟೆಕ್ನಿಕ್ ಹಾಗೂ ಯೋಗ, ಸೂರ್ಯ ನಮಸ್ಕಾರಗಳನ್ನು ಕಲಿಸಲಾಗುವುದು.
ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಪಡೆದವರು ಐಸ್ ಕ್ರೀಂ, ಫ್ರಿಡ್ಜ್ ವಾಟರ್ ಸೇವಿಸಬಾರದು; ಈ ಸುದ್ದಿಯ ಕುರಿತು ಆರೋಗ್ಯ ಇಲಾಖೆ ಸ್ಪಷ್ಟನೆ
ಮಹಾರಾಷ್ಟ್ರದ ಸಾಂಗ್ಲಿಯ ಕರಾಟೆ ಶಿಕ್ಷಕ ಆರ್ ಮಣಿಕಂಠ್ ಹಾಗೂ ಇತರೆ ಶಿಕ್ಷಕರು ಕರಾಟೆ ಹಾಗೂ ಯೋಗದ ತರಬೇತಿಯನ್ನು ನೀಡಲಿದ್ದು, ಹೆಚ್ಚಿನ ಮಾಹಿತಿಗೆ ಶಿಬಿರ ನಿರ್ವಾಹಕ ವಿಶ್ವನಾಥ್ ಎಸ್ 9481074453 ಹಾಗೂ ಕರಾಟೆ ಶಿಕ್ಷಕ ಮಣಿಕಂಠ ಆರ್ 9923118800, ಸ್ಪಂದನ ಸಂಸ್ಥೆಯ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್ 9449498994, ಅರುಣರಾಜ್ ಎಸ್. ಗುಡ್ಡೆತೋಟ: 8762750706, ಹರೀಶ್: 9440552531 ಸಂಪರ್ಕಿಸಬಹುದಾಗಿದೆ.
ಜಯಪುರದ ಸುತ್ತಮುತ್ತಲಿನ ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.













