ಆಲ್ದೂರು: ಕಾಡಾನೆ ದಾಳಿಗೆ ಮತ್ತೊಂದು ಬಲಿ

ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿನಕಲ್ ದುರ್ಗ ಸಮೀಪದ ಕೆಸುವಿನಕಲ್ ಕಾಫಿ ಎಸ್ಟೇಟ್ ನಲ್ಲಿ ಇಂದು ಮುಂಜಾನೆ ನಡೆದಿದೆ. ಆನಂದ ಪೂಜಾರಿ (55) ಕಾಡಾನೆ ದಾಳಿಗೆ ಬಲಿಯಾಗಿರುವ ವ್ಯಕ್ತಿ.


ಇದನ್ನೂ ಓದಿ: ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ನೋಡಿ ಸುವರ್ಣಾವಕಾಶ; ಕಂದಾಯ ಇಲಾಖೆಯಲ್ಲಿ ಉದ್ಯೋಗ


ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ಕಾಡಾನೆ ದಾಳಿಯಿಂದ ಆನಂದ ಪೂಜಾರಿಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೂರ್ ಅಹಮ್ಮದ್ ಎಂಬುವರಿಗೆ ಸೇರಿದ ಕೆಸುವಿನಕಲ್ ಎಸ್ಟೇಟ್ ನಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಮೃತ ಆನಂದ ಪೂಜಾರಿಯವರು ಹಲವು ವರ್ಷಗಳಿಂದ ಈ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.


ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಪಡೆದವರು ಐಸ್ ಕ್ರೀಂ, ಫ್ರಿಡ್ಜ್ ವಾಟರ್ ಸೇವಿಸಬಾರದು; ಈ ಸುದ್ದಿಯ ಕುರಿತು ಆರೋಗ್ಯ ಇಲಾಖೆ ಸ್ಪಷ್ಟನೆ


ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

ಶೃಂಗೇರಿ: ಗುರುಕುಲ ಮತ್ತು ಗೋಶಾಲೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ- ಶ್ರೀ ಸಚ್ಚಿದಾನಂದ ಆಚಾರ್ಯ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸನಾತನ ಧರ್ಮದಲ್ಲಿ ಗುರುಕುಲ ಮತ್ತು ಗೋಶಾಲೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಯುರೋಪ್ ನ ಅದ್ವೈತ ವೇದಾಂತ ಆಶ್ರಮದ ಮುಖ್ಯಸ್ಥ ಸಚ್ಚಿದಾನಂದ ಅಚಾರ್ಯ ಹೇಳಿದರು.


ಇದನ್ನೂ ಓದಿ: ಅನ್ನದಾತರಿಗೆ ಗುಡ್ ನ್ಯೂಸ್;ನ್ಯಾನೋ ಯೂರಿಯಾ ಪ್ಲಸ್ ಮಾರಾಟ ಶುರು


ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಸೂರಿನಲ್ಲಿರುವ ಹಳೆಯ ಸಂಪ್ರದಾಯದಂತೆ ನಡೆಸುತ್ತಿರುವ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಗೋಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಗೋವನ್ನು ವಿಶೇಷ ಗೌರವದಿಂದ ತಾಯಿಯ ಸ್ಥಾನ ನೀಡಿ ಪೂಜಿಸಲಾಗುತ್ತದೆ. ಮಲೆನಾಡು ಗಿಡ್ಡ ತಳಿಯ ಜಾನುವಾರುಗಳ ಗೋಶಾಲೆಯನ್ನು ಯೂರೋಪಿನ ಅದ್ವೈತ ವೇದಾಂತ ಆಶ್ರಮದಲ್ಲಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಶ್ರೀ ಸಚ್ಚಿದಾನಂದ ಆಚಾರ್ಯ ಅವರ ಶಿಷ್ಯರಾದ ಆಂಡ್ರಿವ್ ಡೇವಿಡ್ ಬೌಲೇ ಮಾತನಾಡಿ, ಗೋವುಗಳ ಸಂತತಿ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ಹೊರಬೇಕು. ಗಾವೋ ವಿಶ್ವಸ್ಯ ಮಾತರಃ ಎಂಬ ಮಾತಿನಂತೆ ಗೋಮಾತೆ ಜಗತ್ತಿನ ತಾಯಿ, ಅವಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.


ಇದನ್ನೂ ಓದಿ: ಮಹಿಳೆಯರೇ ಗಮನಿಸಿ; ಉಚಿತ ಟೂಲ್ ಕಿಟ್ ಜೊತೆಗೆ ಸಿಗಲಿದೆ 15,000 ರೂಪಾಯಿ; ಈ ರೀತಿ ಅರ್ಜಿ ಸಲ್ಲಿಸಿ


ಶ್ರೀ ಜಗದ್ಗುರು ಚಂದ್ರಶೇಖರ ಭಾರತಿ ಗೋಶಾಲೆಯ ಮುಖ್ಯಸ್ಥ ರಜಿತ್ ಗೌಡ ಬೇಸೂರ್ ಮಾತನಾಡಿ, ನಮ್ಮ ಮಲೆನಾಡಿನ ಗಿಡ್ಡ ತಳಿಯ ಜಾನುವಾರುಗಳನ್ನು ಯುರೋಪ್ ನ ಆಶ್ರಮದ ಗೋಶಾಲೆಯಲ್ಲಿ ಸಾಕಲು ಅವರು ಯೋಚಿಸಿದ್ದು ಮಲೆನಾಡಿಗರಿಗೆ ಸಂತಸದ ಸುದ್ದಿ ಎಂದರು.

ಈ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ ಭಾರತಿ ಗೋಶಾಲೆಯ ತಿಮ್ಮಪ್ಪ ಗೌಡ ಬೇಸೂರ್, ಶ್ರೀದೇವಿ, ಶಂಕರಾನಂದ್ ವೈಕುಂಠಪುರ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.