ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನ ಸೇನೆ ಗಡಿಯಲ್ಲಿ ನಡೆಸಿದ ಅಪ್ರಯೋಜಿತ ದಾಳಿಗೆ 15 ಮಂದಿ ಭಾರತೀಯ ನಾಗರಿಕರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಹಲವು ಕ್ಷಿಪಣಿ ದಾಳಿ ನಡೆಸುವ ಪ್ರಯತ್ನವನ್ನು ಭಾರತ ವಿಫಲಗೊಳಿಸಿದೆ.
ಇದನ್ನೂ ಓದಿ: ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸರ್ಕಾರದಿಂದ ಮಹತ್ವದ ಆದೇಶ!

ಸೇನೆ ಮತ್ತು ವಾಯುಪಡೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಸ್ಥಳಗಳನ್ನು ನಿಖರವಾಗಿ ಗುರಿಯಾಗಿಸಲು ಆಪರೇಷನ್ ಸಿಂಧೂರ್ ನಲ್ಲಿ ತನ್ನ ರಕ್ಷಣಾ ಮೂಲಸೌಕರ್ಯವನ್ನು ತಂತ್ರಗಾರಿಕೆಯಿಂದ ಬಳಸಿತು. ಭಾರತೀಯ ವಾಯುಪಡೆಯು ಗಾಳಿಯಿಂದ ಮೇಲ್ಮೈ ಕ್ಷಿಪಣಿಗಳಿಂದ ದೂರದ ಗುರಿಗಳ ಮೇಲೆ ದಾಳಿ ನಡೆಸಿದರೆ, ಭಾರತೀಯ ಸೇನೆಯು ಕಾಮಕಾಜಿ ಡ್ರೋನ್ಗಳು ಸೇರಿದಂತೆ ಸ್ಫೋಟಕ ಶಸ್ತ್ರಾಸ್ತ್ರಗಳೊಂದಿಗೆ ಹತ್ತಿರದ ಗುರಿಗಳನ್ನು ಹೊಡೆದುರುಳಿಸಿತು. ಇದರಿಂದಾಗಿ ಐವತ್ತಕ್ಕೂ ಅಧಿಕ ಉಗ್ರಗಾಮಿಗಳು ಸಾವನ್ನಪ್ಪಿದ್ದರು, ಹಾಗೆಯೇ ಪಾಕಿಸ್ತಾನದ ನಾಗರಿಕರಿಗೆ ಯಾವುದೇ ಹಾನಿ ಉಂಟಾಗಿರಲಿಲ್ಲ. ಆದರೆ ಪಾಕಿಸ್ತಾನ ಅದಕ್ಕೆ ಪ್ರತಿಯಾಗಿ ಗಡಿಯಲ್ಲಿ ಇಂದು ಮುಂಜಾನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಅಮಾಯಕರನ್ನು ಹತ್ಯೆಗೈದಿದೆ.

ಇದನ್ನೂ ಓದಿ: ಶೃಂಗೇರಿಯ ಟ್ರಿಲಿಯಂಟ್ ಡಿಜಿಟಲ್ ಕಂಪನಿಯಲ್ಲಿ ಭರ್ಜರಿ ಜಾಬ್ ಆಫರ್!; ವಾಕ್-ಇನ್ ಸಂದರ್ಶನ, ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
ಭಾರತದ ದಾಳಿಗೆ ಉಗ್ರ ಮಸೂದ್ ಫಿನಿಶ್ , ಉಗ್ರ ಮಸೂದ್ ಅಜರ್ ಕುಟುಂಬವೂ ಸರ್ವನಾಶ : ಈ ಹಿಂದೆ ವಿಮಾನ ಅಪಹರಣದ ಮೋಸ್ಟ್ ವಾಂಟೆಡ್ ಉಗ್ರ ಮಸೂಜ್ ಅಜರ್ ಹಾಗೂ ಅವನ ಕುಟುಂಬ ಭಾರತದ ದಾಳಿಗೆ ಸರ್ವನಾಶವಾಗಿದೆ.
ಈ ಮಧ್ಯೆ ಕುತಂತ್ರಿ ಪಾಕಿಸ್ತಾನ ಬುದ್ಧಿ ಕಲಿಯದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಆಪರೇಷನ್ ಸಿಂಧೂರ 2.0ಗೆ ತಯಾರಾಗಿದೆ.
ಲಾಹೋರ್ ನಲ್ಲಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ನಾಶ: ಇನ್ನು ಭಾರತೀಯ ಸೇನೆ ಡ್ರೋನ್ ಮೂಲಕ ನಡೆಸಿದ ಕ್ಷಿಪ್ರ ದಾಳಿಗೆ ಇಂದು ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ನಾಶಗೊಂಡಿದೆ, ಪಾಕಿಸ್ತಾನದ ಕರಾಚಿಯಲ್ಲಿ ಹಲವು ಕಡೆಗಳಲ್ಲಿ ಡ್ರೋನ್ ದಾಳಿ ನಡೆದಿದೆ.
ಇದನ್ನೂ ಓದಿ: ಪಾಕ್ ವಿರುದ್ಧ ಆಪರೇಷನ್ ಸಿಂಧೂರ್..; ಭಾರತೀಯ ಸೇನೆಯಿಂದ ಏರ್ಸ್ಟ್ರೈಕ್..!















