ಎನ್ ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ಕಾಲೇಜು ಉಪನ್ಯಾಸಕರೊಬ್ಬರು ಹೃದಯಾಘಾತಕ್ಕೆ ಸಾವನ್ನಪ್ಪಿದ್ದಾರೆ.
ಎನ್ ಆರ್ ಪುರ ತಾಲ್ಲೂಕಿನ ಕಾನೂರು ನಿವಾಸಿ ಅರವಿಂದ್ (38) ಮೃತಪಟ್ಟಿರುವ ಉಪನ್ಯಾಸಕ. ಕಳೆದ ಹದಿಮೂರು ವರ್ಷದಿಂದ ಕೊಪ್ಪದ ಜೆ. ಎಫ್. ಜಿ. ಸಿ ಸೇರಿದಂತೆ ಹಲವು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿದ್ದಾರೆ. ಪ್ರಸ್ತುತ ಎನ್ ಆರ್ ಪುರದ ಮೌಂಟ್ ಕಾರ್ಮಲ್ ಪಿಯು ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಅರವಿಂದ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅರವಿಂದ್ ಕೊಪ್ಪದಲ್ಲಿ ಬಿ. ಕಾಂ ಹಾಗೂ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಎಂ. ಕಾಂ ಪದವಿ ಪಡೆದಿದ್ದರು. ಉಪನ್ಯಾಸಕ ಅರವಿಂದ್ ಸಾವಿಗೆ ಸಹೋದ್ಯೋಗಿಗಳು, ವಿದ್ಯಾರ್ಥಿ ವೃಂದ ಕಂಬನಿ ಮಿಡಿದಿದೆ.












