ಮುಂದಿನ ನಾಲ್ಕು ವಾರಗಳ ಮಳೆ ವಿವರ | ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಈ ಬಾರಿ ಮಳೆಯಿಲ್ಲದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಇನ್ನು ಸೆಪ್ಟೆಂಬರ್ ತಿಂಗಳು ಆರಂಭದಿಂದ ಇಲ್ಲಿಯವರೆಗೂ ಕರಾವಳಿ ಜಿಲ್ಲೆಗಳ ಕೆಲವೆಡೆ ಹಾಗೂ ಮಲೆನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಾತ್ರ ಆಗಾಗ ಮಳೆ ಸುರಿಯುತ್ತಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಬರೀ ಬಿಸಿಲಿನ ವಾತಾವರಣವೇ ಮುಂದುವರೆದಿದೆ.

 

ಇದನ್ನೂ ಓದಿ; ಯೂಟ್ಯೂಬ್ ನಲ್ಲಿ ತನ್ನದೇ ಟ್ರೆಂಡ್ ಸೃಷ್ಟಿಸಿದ ಭಟ್ ಎನ್ ಭಟ್ ಬಗ್ಗೆ ನಿಮಗೇ ಗೊತ್ತಿಲ್ಲದ ಮಾಹಿತಿ; ಇವರ ಒಂದು ತಿಂಗಳ ಯೂಟ್ಯೂಬ್ ಸಂಪಾದನೆ ಎಷ್ಟಿದೆ ಗೊತ್ತ?

ಇನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಕರ್ನಾಟಕದ ಮುಂದಿನ ನಾಲ್ಕು ವಾರಗಳ ಹವಾಮಾನ ವರದಿ ನೀಡಿದ್ದು, ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ತಿಳಿಸಿದೆ.

 

ಇದನ್ನೂ ಓದಿ; ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 21-09-2023

ಎಲ್ಲೆಲ್ಲಿ ಮಳೆಯಾಗಲಿದೆ:
ಮುಂದಿನ ನಾಲ್ಕು ವಾರಗಳ ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಆಗ್ನೇಯ ಭಾರತದಿಂದ ನೈಋತ್ಯ ಮಾನ್ಸೂನ್ ಮುಂದಿನ ವಾರದಿಂದ ಚಲಿಸಲಿದೆ. ಅಕ್ಟೋಬರ್ 2 ರಿಂದ ಮಧ್ಯಭಾರತದಿಂದ ಸಾಗಲಿದೆ. ಅಕ್ಟೋಬರ್ ಕೊನೆಯ ವಾರದವರೆಗೆ ರಾಜ್ಯದಲ್ಲಿ ಮಳೆ ಇರಲಿದ್ದು, ನಂತರ ಮುಂಗಾರು ಮುಕ್ತಾಯವಾಗಲಿದೆ ಎಂದು ಹೇಳಿದೆ.

 

ಅಕ್ಟೋಬರ್ ತಿಂಗಳ ಮೊದಲ ಮೂರು ವಾರಗಳ ಕಾಲ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾದರೆ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಜನರ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸಲು ಸೂಚನೆ ನೀಡಿದ ಸಿಎಂ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)  ಜನರ ಆಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೆ.25 ರಂದು ಏಕಕಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ “ಜನತಾ ದರ್ಶನ” ಕಾರ್ಯಕ್ರಮ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

 

ಈ ಬಗ್ಗೆ ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ರಜನೀಶ್ ಗೋಯೆಲ್ ಸುತ್ತೋಲೆ ಹೊರಡಿಸಿದ್ದಾರೆ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಂತೆ ಶಿಷ್ಟಾಚಾರಕ್ಕೆ ಅನುಗುಣವಾಗಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುಬೇಕು. ಈ ಸಂಬಂಧ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡು, ವ್ಯವಸ್ಥಿತವಾಗಿ ಹಾಗೂ ಜವಾಬ್ದಾರಿಯುತವಾಗಿ ನಡೆಸುವ ಕುರಿತು ಸೂಕ್ತ ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸಾರ್ವಜನಿಕ ಹಾಗೂ ವೈಯಕ್ತಿಕ ಅರ್ಜಿಗಳನ್ನು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಕಛೇರಿ ಮತ್ತು ತಾಲೂಕು ಪಂಚಾಯಿತಿ ಕಛೇರಿಗಳಲ್ಲಿ ದಿನಾಂಕ: 23-09-2023 ರ (ಶನಿವಾರ) ಸಂಜೆ 5.30 ರವರೆಗೆ ಸ್ವೀಕರಿಸಿ, ವೈಯಕ್ತಿಕ ಅರ್ಜಿಗಳನ್ನು ಮತ್ತು ಸಾರ್ವಜನಿಕವಾಗಿ ಸಲ್ಲಿಸುವ ಅರ್ಜಿಗಳನ್ನು ಪ್ರತ್ಯೇಕ ವಹಿಗಳಲ್ಲಿ ನೋಂದಾಯಿಸಿ ಹಾಗೂ ಸದರಿ ಅರ್ಜಿಗಳನ್ನು ಗಣಕೀಕರಣಗೊಳಿಸಿ ಸಂಬಂಧಪಟ್ಟ ಅರ್ಜಿದಾರರುಗಳಿಗೆ ಕ್ರ.ಸಂ. 1 ರಿಂದ ಟೋಕನ್ ಗಳನ್ನು ತಾಲ್ಲೂಕುವಾರು ನೀಡುತ್ತಾರೆ.

24-09-2023 (ಭಾನುವಾರ) ರಂದು ವೈಯಕ್ತಿಕ ಅರ್ಜಿಗಳನ್ನು ಇಲಾಖಾವಾರು ಯೋಜನ ನಂಬರ್ ನೊಂದಿಗೆ ಪ್ರತ್ಯೇಕಿಸಿ ಸಾರ್ವಜನಿಕವಾಗಿ ಬಂದ ಅರ್ಜಿಗಳನ್ನು ಇಲಾಖಾವಾರು ಟೋಕನ್ ನಂಬರ್ ನೊಂದಿಗೆ ಪ್ರತ್ಯೇಕಿಸಿ ಹಾಗೂ ಸ್ವೀಕೃತಗೊಂಡ ಅರ್ಜಿಗಳನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತರಲು ಸೂಚಿಸಿದ್ದಾರೆ.

 

25-09-2023 (ಸೋಮವಾರ) ರಂದು ನಡೆಯಲಿರುವ “ಜನತಾ ದರ್ಶನ” ಕಾರ್ಯಕ್ರಮಕ್ಕೆ ನುರಿತ ಕಂಪ್ಯೂಟರ್ ಅಪರೇಟರ್ ಮತ್ತು ಮೇಲುಸ್ತುವಾರಿಗೆ ಶಿರಸ್ತೇದಾರ್ ಮತ್ತು ತಾಲೂಕು ಪಂಚಾಯಿತಿಯಿಂದ ಸಹಾಯಕ ನಿರ್ದೇಶಕರು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬೆಳಿಗ್ಗೆ 6.00 ಗಂಟೆಗೆ ಹಾಜರಿದ್ದು, ತಮ್ಮ ತಾಲ್ಲೂಕಿಗೆ ಸಂಬಂಧಿಸಿದ ಕೌಂಟರ್ ಅನ್ನು ಪರಿಶೀಲಿಸಿಕೊಮಡು ಬೆಳಿಗ್ಗೆ 5 ಗಂಟೆಯಿಂದ ಕೌಂಟರ್ ನಲ್ಲಿ ತಮ್ಮ ತಾಲ್ಲೂಕಿಗೆ ಸಂಬಂಧಿಸಿದಂತೆ ಬರುವ – ಅರ್ಜಿಗಳನ್ನು ಸ್ವೀಕರಿಸಿ ನೋಂದಾಯಿಸಿ ಅರ್ಜಿದಾರರುಗಳಿಗೆ ಟೋಕನ್ ಗಳ ವಿತರಣೆ ಮಾಡಿ ಬಂದಂತಹ ಅರ್ಜಿಗಳನ್ನು ಇಲಾಖಾವಾರು ಪ್ರತ್ಯೆಕೀಸಿ ಕಾರ್ಯಕ್ರಮದಲ್ಲಿ ನೀಡಲು ತಿಳಿಸಿದ್ದಾರೆ.

ತಹಸೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ವೀಕೃತವಾಗಿರುವ ಅರ್ಜಿಗಳನ್ನು ಪರಿಶೀಲಿಸಿಕೊಂಡು ಪ್ರತ್ಯೇಕಿಸಿ ಕಾರ್ಯಕ್ರಮದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಕ್ರಮ ವಹಿಸಿ ಉಪವಿಭಾಗಾಧಿಕಾರಿಗಳು ತಮ್ಮ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕುಗಳ ಉಸ್ತುವಾರಿಯನ್ನು ನೋಡಲು ಹಾಗೂ ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ಕ್ರಮ ವಹಿಸಲು ಸೂಚಿಸಿದ್ದಾರೆ.

ಇನ್ನು ಮಾನ್ಯ ಮುಖ್ಯಮಂತ್ರಿಯವರ ನಿರ್ದೇಶನದಂತೆ ಇಂಧನ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಾಗೂ ಜಿಲ್ಲೆಯ ಮಾನ್ಯ ಶಾಸಕರುಗಳ ಉಪಸ್ಥಿತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು 25-09-2023 (ಸೋಮವಾರ) ಬೆಳಿಗ್ಗೆ 10.30 ಗಂಟೆಗೆ ಕ.ವಿ.ಪ್ರ.ನಿ.ನಿ.(ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ನೌಕರರ ಸಭಾ ಭವನ, ರತ್ನಗಿರಿ ರಸ್ತೆ, ಚಿಕ್ಕಮಗಳೂರು ಇಲ್ಲಿ ನಡೆಯಲಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.