ಎನ್.ಆರ್.ಪುರ: ವಿದ್ಯುತ್ ಇಲ್ಲದೆ ಬೀದಿ ದೀಪದ ಕೆಳಗೆ ವಸತಿ ಶಾಲೆಯ ಮಕ್ಕಳ ಓದು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಸತಿ ಶಾಲೆಯಲ್ಲಿ ವಿದ್ಯುತ್ ಇಲ್ಲದೆ ಸೋಲಾರ್ ಬೀದಿ ದೀಪದ ಕೆಳಗೆ ಮಕ್ಕಳು ಓದುವಂತಹ ಪರಿಸ್ಥಿತಿಗೆ ಬಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕೈಮರದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯ ವಸತಿ ಶಾಲೆಯಲ್ಲಿ ನಡೆದಿದೆ.

 

ಇದನ್ನೂ ಓದಿ; KOF ನಲ್ಲಿ ನೇಮಕಾತಿಗಾಗಿ; ಲೆಕ್ಕಪರಿಶೋಧಕರ ಭರ್ತಿಗೆ ಅರ್ಜಿ ಆಹ್ವಾನ

ಸರ್ಕಾರ ಲೋಡ್ ಶೆಡ್ಡಿಂಗ್ ಹೆಸರಲ್ಲಿ ಕರೆಂಟ್ ತೆಗೆಯುತ್ತಿರುವ ಕಾರಣ ವಸತಿ ಶಾಲೆಯ ಮಕ್ಕಳು ಸಂಜೆ ವೇಳೆ ಶಾಲೆ ಕಟ್ಟಡದಿಂದ ಹೊರಬಂದು ಕಾಂಪೌಂಡ್ ಒಳಗೆ ಬೀದಿ ದೀಪದ ಸೋಲಾರ್ ವಿದ್ಯುತ್ ಕೆಳಗೆ ಓದುತ್ತಿದ್ದಾರೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾಗಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರ ಆಡಳಿತದ ವ್ಯಾಪ್ತಿಗೆ ಸೇರುವ ಎನ್.ಆರ್.ಪುರ ತಾಲೂಕು ಅಷ್ಟೇ ಅಲ್ಲದೆ ಇಂಧನ ಸಚಿವರೇ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಮಕ್ಕಳು ಬೀದಿ ದೀಪದ ಕೆಳಗೆ ಓದುವ ಪರಿಸ್ಥಿತಿ ಬಂದಿದೆ. ಈ ಕುರಿತು ಸ್ಥಳೀಯರು ಅಸಮಾಧಾನ ಹೊರಹಾಕಿದ್ದು, ಹೆಣ್ಣು ಮಕ್ಕಳು ಇರುವ ವಸತಿ ಶಾಲೆ ಸರ್ಕಾರ ಕೂಡಲೇ ವಸತಿ ಶಾಲೆಗೆ ಯುಪಿಎಸ್ ಅಳವಡಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ; ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವವರಿಗೆ ಗುಡ್‌ ನ್ಯೂಸ್‌; ಕೆಲವೇ ತಿಂಗಳಲ್ಲಿ ಕೇಬಲ್ ಸೇತುವೆ ಸಿದ್ದ

ಕೊಪ್ಪ: ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ

 

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಶ್ರೀ ಮಠದ ಆವರಣದಲ್ಲಿ ಫೆಬ್ರವರಿ 25 ಭಾನುವಾರದಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ಆಯೋಜಿಸಲಾಗಿದೆ ಎಂದು ಕೊಪ್ಪ ಸರ್ಕಾರಿ ಆಸ್ಪತ್ರೆಯ ದಂತ ಆರೋಗ್ಯ ಅಧಿಕಾರಿ ಡಾ. ಗಾನವಿ ತಿಳಿಸಿದ್ದಾರೆ.

ಇದನ್ನೂ ಓದಿ; ಪ್ರೊಬೆಷನರಿ ನೌಕರರನ್ನು ಏಕಾಏಕಿ ವಜಾ ಮಾಡುವಂತಿಲ್ಲ: ಹೈಕೋರ್ಟ್ ಆದೇಶ

 

ಸಂಪೂರ್ಣ ದಂತ ಪಂಕ್ತಿ ಕಳೆದುಕೊಂಡಿರುವ 45 ವರ್ಷ ಮೇಲ್ಪಟ್ಟ ಬಿಪಿಎಲ್ ಕಾಡುದಾರರ ಫಲಾನುಭವಿಗಳಿಗೆ ಉಚಿತ ದಂತ ಪಂಕ್ತಿ ಜೋಡಣೆಯನ್ನು ಮಾಡಲಾಗುವುದು. ಶಿಬಿರದಲ್ಲಿ 50 ಕ್ಕೂ ಹೆಚ್ಚು ನುರಿತ ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಗಳು ಭಾಗವಹಿಸಲಿದ್ದು, ಜಿಲ್ಲೆಯ ನಾಗರೀಕರು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು, ಒರಲ್ ಹೆಲ್ತ್ ಪಾಲಿಸಿ ಮತ್ತು ದಂತ ಆರೋಗ್ಯ ಚಿಕ್ಕಮಗಳೂರು ಇವರು ತಿಳಿಸಿದ್ದಾರೆ.

ಇದನ್ನೂ ಓದಿ; ಗಮನಿಸಿ; ಈ ಕಾರ್ಡ್ ನಲ್ಲಿ 5 ಲಕ್ಷ ಉಚಿತ ಚಿಕಿತ್ಸೆ; ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

ಫಲಾನುಭವಿಗಳು ಫೆಬ್ರವರಿ 17 ರ ಒಳಗಾಗಿ ತಮ್ಮ ತಾಲೂಕಿನ ಸರ್ಕಾರಿ ಆಸ್ಪತ್ರೆಯ ದಂತ ಆರೋಗ್ಯ ಅಧಿಕಾರಿಗಳನ್ನು ಭೇಟಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಮೊದಲು ಬಂದ ಐವತ್ತು ಜನರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.