ಚಿಕ್ಕಮಗಳೂರು: ಬೀಟಮ್ಮ ಅಂಡ್ ಗ್ಯಾಂಗ್ ಆತಂಕ : ರಾಜ್ಯ ಹೆದ್ದಾರಿ ತಡೆದು ಸ್ಥಳೀಯರ ಆಕ್ರೋಶ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)ಬೀಟಮ್ಮ ಅಂಡ್ ಗ್ಯಾಂಗ್ ಕಳೆದ 20 ದಿನಗಳಿಂದ ಚಿಕ್ಕಮಗಳೂರು ತಾಲೂಕಿನ ಗ್ರಾಮಗಳಲ್ಲಿ ಬೀಡುಬಿಟ್ಟು ಕೋಟ್ಯಂತರ ಮೌಲ್ಯದ ಬೆಳೆ ಹಾನಿ ಮಾಡಿ, ದಿನಕ್ಕೊಂದು ಗ್ರಾಮದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಾವರ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

 

ಇದನ್ನೂ ಓದಿ; UPSC ಇಂದ ನೇಮಕ ಅಧಿಸೂಚನೆ; 122 ವಿವಿಧ ಪೋಸ್ಟ್‌ ಗಳ ನೇಮಕ

24 ಕ್ಕೂ ಹೆಚ್ಚು ಕಾಡಾನೆಗಳ ಹಿಂಡಿರುವ ಬೀಟಮ್ಮ ಗ್ಯಾಂಗ್ ವಾರದಿಂದ ಇಂದಾವರ ಸುತ್ತಮುತ್ತಾ ಬೀಡು ಬಿಟ್ಟಿದೆ. ಕಾಡಾನೆಗಳ ಉಪಟಳದಿಂದಾಗಿ ಗ್ರಾಮದ ಜನತೆ ಹಾಗೂ ರೈತರು ಹೈರಾಣಾಗಿ ಹೋಗಿದ್ದಾರೆ. ಇತ್ತ ತೋಟಗಳಿಗೆ ಹೋಗೋದಕ್ಕೂ ಭಯ ಪಡುವಂತೆ ಆಗಿದೆ. ಈ ಹಿನ್ನೆಲಯಲ್ಲಿ ತಕ್ಷಣವೇ ಸೂಕ್ತ ಕ್ರಮವಹಿಸಿ ಆನೆಗಳನ್ನ ಸ್ಥಳಾಂತರಿಸುವಂತೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ; ರಾಜ್ಯದ ರೈತರ ಗಮನಕ್ಕೆ; ಗ್ರಾಮ ಪಂಚಾಯಿತಿಗಳಲ್ಲಿ ಬರ ಪರಿಹಾರ ಪಟ್ಟಿ ಪ್ರಕಟ

ಎನ್.ಆರ್.ಪುರ: ವಿದ್ಯುತ್ ಇಲ್ಲದೆ ಬೀದಿ ದೀಪದ ಕೆಳಗೆ ವಸತಿ ಶಾಲೆಯ ಮಕ್ಕಳ ಓದು

 

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಸತಿ ಶಾಲೆಯಲ್ಲಿ ವಿದ್ಯುತ್ ಇಲ್ಲದೆ ಸೋಲಾರ್ ಬೀದಿ ದೀಪದ ಕೆಳಗೆ ಮಕ್ಕಳು ಓದುವಂತಹ ಪರಿಸ್ಥಿತಿಗೆ ಬಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕೈಮರದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯ ವಸತಿ ಶಾಲೆಯಲ್ಲಿ ನಡೆದಿದೆ.

ಇದನ್ನೂ ಓದಿ; KOF ನಲ್ಲಿ ನೇಮಕಾತಿಗಾಗಿ; ಲೆಕ್ಕಪರಿಶೋಧಕರ ಭರ್ತಿಗೆ ಅರ್ಜಿ ಆಹ್ವಾನ

 

ಸರ್ಕಾರ ಲೋಡ್ ಶೆಡ್ಡಿಂಗ್ ಹೆಸರಲ್ಲಿ ಕರೆಂಟ್ ತೆಗೆಯುತ್ತಿರುವ ಕಾರಣ ವಸತಿ ಶಾಲೆಯ ಮಕ್ಕಳು ಸಂಜೆ ವೇಳೆ ಶಾಲೆ ಕಟ್ಟಡದಿಂದ ಹೊರಬಂದು ಕಾಂಪೌಂಡ್ ಒಳಗೆ ಬೀದಿ ದೀಪದ ಸೋಲಾರ್ ವಿದ್ಯುತ್ ಕೆಳಗೆ ಓದುತ್ತಿದ್ದಾರೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾಗಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರ ಆಡಳಿತದ ವ್ಯಾಪ್ತಿಗೆ ಸೇರುವ ಎನ್.ಆರ್.ಪುರ ತಾಲೂಕು ಅಷ್ಟೇ ಅಲ್ಲದೆ ಇಂಧನ ಸಚಿವರೇ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಮಕ್ಕಳು ಬೀದಿ ದೀಪದ ಕೆಳಗೆ ಓದುವ ಪರಿಸ್ಥಿತಿ ಬಂದಿದೆ. ಈ ಕುರಿತು ಸ್ಥಳೀಯರು ಅಸಮಾಧಾನ ಹೊರಹಾಕಿದ್ದು, ಹೆಣ್ಣು ಮಕ್ಕಳು ಇರುವ ವಸತಿ ಶಾಲೆ ಸರ್ಕಾರ ಕೂಡಲೇ ವಸತಿ ಶಾಲೆಗೆ ಯುಪಿಎಸ್ ಅಳವಡಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನ ಓದಿ; ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವವರಿಗೆ ಗುಡ್‌ ನ್ಯೂಸ್‌; ಕೆಲವೇ ತಿಂಗಳಲ್ಲಿ ಕೇಬಲ್ ಸೇತುವೆ ಸಿದ್ದ

 

ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಹೆಂಡದಲ್ಲಿ ತೇಲಿಸುತ್ತಿದೆ: ಆರಗ ಜ್ಞಾನೇಂದ್ರ

ಬೆಂಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಹೆಂಡ ತುಂಬಿಕೊಂಡು ಬಂದು ಮನೆಗಳಿಗೆ ಹೆಂಡ ಸರಬರಾಜು ಮಾಡಲಾಗುತ್ತಿದೆ. ಅಬಕಾರಿ ಇಲಾಖೆ, ಪೋಲೀಸ್ ಇಲಾಖೆ ರಾಜ್ಯದಲ್ಲಿ ಇದೆಯೇ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ ಎಂದು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ವಿಧಾನ ಸಭೆ ಅಧಿವೇಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಆಡಳಿತದಲ್ಲಿ ಅಕ್ರಮ ಮದ್ಯಮಾರಾಟ ಹೆಚ್ಚಾಗಿದ್ದು, ಹಳ್ಳಿಗಳ ಕೌಟುಂಬಿಕ- ಆರ್ಥಿಕ ವ್ಯವಸ್ಥೆ ಹಾಳಾಗುತ್ತಿದೆ. ಚಕ್ಕುಲಿ, ಕೋಡುಬಳೆ, ಮೀನು ಮಾರಿದಂತೆ ಹೆಂಡ ಸೇಲ್ ಮಾಡಲಾಗುತ್ತಿದೆ. ಹೆಂಡ ತುಂಬಿಕೊಂಡು ಬಂದು ಹಳ್ಳಿಗಳ ಗೂಡಂಗಡಿ, ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಹೆಂಡದಲ್ಲಿ ತೇಲಿಸುತ್ತಿದೆ ಎಂದು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ವಿಧಾನ ಸಭೆ ಅಧಿವೇಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಆರಗ ಜ್ಞಾನೇಂದ್ರ ಅವರ ಮಾತಿಗೆ ಪ್ರತಿಕ್ರಿಯಿಸಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಅಕ್ರಮಗಳಿಗೆ ಹಳ್ಳಿಯ ವ್ಯಾಪಾರಿಗಳನ್ನು ಹೊಣೆ ಮಾಡುವುದಕ್ಕಿಂತ ಅಲ್ಲಿನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಹೊಣೆ ಮಾಡಬೇಕು ಎಂದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.