ಆಗುಂಬೆ: ಘಾಟಿಯ ಸೂರ್ಯಾಸ್ತ ಸ್ಥಳದ ಬಳಿಯೇ ತಡೆಗೋಡೆಗಳಲ್ಲಿ ಬಿರುಕು

ಆಗುಂಬೆ: (ನ್ಯೂಸ್ ಮಲ್ನಾಡ್ ವರದಿ) ಕರಾವಳಿ ಹಾಗೂ ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ಘಾಟಿಯ ಸೂರ್ಯಾಸ್ತ ಸ್ಥಳದ ಬಳಿಯೇ ರಸ್ತೆಯ ತಡೆಗೋಡೆ ಬಿರುಕು ಕಂಡಿದ್ದು, ಘನ ವಾಹನಗಳ ಸಂಚಾರದಿಂದ ತಡೆಗೋಡೆ ಕುಸಿದು ಘಾಟಿ ಬಂದ್ ಆಗುವ ಭೀತಿ ಎದುರಾಗಿದೆ.


ಇದನ್ನೂ ಓದಿ: ಶುರುವಾಯ್ತು SMS ಹಗರಣ!; ಹಣ ಜಮೆಯಾಗಿದೆ ಅಂತಾ ಸಂದೇಶ ಬಂದಿದ್ಯಾ.?; ಈ ರೀತಿ ಮೆಸೇಜ್​ ಬಂದ್ರೆ ಹುಷಾರ್


ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 14 ನೇ ತಿರುವಿನ ಸೂರ್ಯಾಸ್ತ ಸ್ಥಳದ ಬಳಿ ಘನ ವಾಹನಗಳು ಸಂಚರಿಸಿದರೆ ಸಂಪೂರ್ಣ ಕುಸಿಯುವ ಸ್ಥಿತಿ ಇದೆ. ಈ ಹಿಂದೆ ಕೆಲವೆಡೆ ಘನ ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ತಡೆ ಗೋಡೆಗಳಿಗೆ ಹಾನಿಯಾಗಿತ್ತು. ಇದೀಗ ಶಾಲೆಗಳಿಗೆ ರಜೆ ಇರುವ ಕಾರಣ ಪ್ರವಾಸಿಗರ ವಾಹನಗಳ ದಟ್ಟಣೆ ಘಾಟಿಯಲ್ಲಿ ಹೆಚ್ಚಾಗಿದೆ. ಇದರೊಂದಿಗೆ ಘನ ವಾಹನಗಳ ಓಡಾಟದಿಂದ ರಸ್ತೆ ಮೇಲೆ ಒತ್ತಡ ಹೆಚ್ಚುತ್ತಿದೆ. ಬಿರುಕುಬಿಟ್ಟ ತಡೆಗೋಡೆಯನ್ನು ಕೂಡಲೇ ದುರಸ್ತಿಗೊಳಿಸದಿದ್ದರೆ ಮಳೆಗಾಲದಲ್ಲಿ ಭಾರೀ ಹಾನಿಯುಂಟಾಗಬಹುದು.


ಇದನ್ನೂ ಓದಿ: ಅಡಿಕೆ ತೋಟಕ್ಕೆ ಕೊಳೆ ರೋಗದ ಭೀತಿಯೇ?;  ನಿಯಂತ್ರಣಕ್ಕೆ ಈಸೀ ಲೈಫ್ ನ ಶಾಖೆಯಲ್ಲಿ ಲಭ್ಯವಿದೆ ರಾಮಬಾಣ


ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಸುತ್ತಲಿನ ಜಿಲ್ಲೆಯ ಜನರು ಮಣಿಪಾಲ ಆಸ್ಪತ್ರೆಯನ್ನು ಆಶ್ರಯಿಸಿದ್ದು, ಒಂದು ವೇಳೆ ಸಂಚಾರಕ್ಕೆ ಸಮಸ್ಯೆಯಾದರೆ ಇವರಿಗಷ್ಟೇ ಅಲ್ಲದೇ ಮಲೆನಾಡು ಕರಾವಳಿಯ ಸಂಪರ್ಕವೂ ಕಡಿತಗೊಳ್ಳಲಿದೆ. ಹಾಗಾಗಿ ಕೂಡಲೇ ಜಿಲ್ಲಾಡಳಿತ ಗಮನ ಹರಿಸಿ ಘನವಾಹನಗಳ ಸಂಚಾರವನ್ನು ನಿರ್ಬಂಧಿಸಿ ತಡೆಗೋಡೆಯನ್ನ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಯಪುರ: ಕರಾಟೆ ಮತ್ತು ಯೋಗ ತರಬೇತಿ ಶಿಬಿರ ಆಯೋಜನೆ

ಜಯಪುರ:  (ನ್ಯೂಸ್ ಮಲ್ನಾಡ್ ವರದಿ) ಆತ್ಮರಕ್ಷಣೆಗಾಗಿ ಕರಾಟೆಯಂತಹ ಕಲೆಯನ್ನು ಕಲಿಯುವುದು ಇತ್ತೀಚಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ ಮಲೆನಾಡು ಭಾಗದ ಜನರಿಗೆ ಜಯಪುರದ ಸ್ಪಂದನ ಸ್ವಯಂಸೇವಾ ಸಂಸ್ಥೆ ಉಚಿತ ಕರಾಟೆ ತರಬೇತಿ ಶಿಬಿರವನ್ನು ಆಯೋಜಿಸಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ನೋಡಿ ಸುವರ್ಣಾವಕಾಶ; ಕಂದಾಯ ಇಲಾಖೆಯಲ್ಲಿ ಉದ್ಯೋಗ


ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸ್ಪಂದನ ಸಂಸ್ಥೆಯ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್, 4 ವರ್ಷ ಮೇಲ್ಪಟ್ಟ ಕರಾಟೆ ತರಬೇತಿ ಪಡೆಯಲಿಚ್ಚಿಸುವ ಬಾಲಕ, ಬಾಲಕಿಯರು, ಹಾಗೂ ವಯಸ್ಕರಿಗಾಗಿ ಹದಿನೈದು ದಿನಗಳ ಉಚಿತ ಕರಾಟೆ ತರಬೇತಿ ಶಿಬಿರವನ್ನು ಜಯಪುರದಲ್ಲಿ ಆಯೋಜಿಸಿದೆ.

ಮೇ 06 ರ ಸೋಮವಾರದಿಂದ ಮೇ 20 ರ ಸೋಮವಾರದವರೆಗೆ ಜಯಪುರದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರಾಟೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಪ್ರತಿ ದಿನ ಬೆಳಗ್ಗೆ 7 ರಿಂದ ಬೆಳಗ್ಗೆ 8-30 ರವರೆಗೆ ಶಿಬಿರದಲ್ಲಿ ಕರಾಟೆಯ ವಿವಿಧ ಪ್ರಾಕಾರಗಳಾದ ಬೇಸಿಕ್ ಟೆಕ್ನಿಕ್, ಪಂಚ್ ಟೆಕ್ನಿಕ್, ಕಿಕ್ ಬಾಕ್ಸಿಂಗ್, ದೊಣ್ಣೆ ವರೆಸೆ, ಸೆಲ್ಫ್ ಡಿಫೆನ್ಸ್ ಟೆಕ್ನಿಕ್ ಹಾಗೂ ಯೋಗ, ಸೂರ್ಯ ನಮಸ್ಕಾರಗಳನ್ನು ಕಲಿಸಲಾಗುವುದು.


ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಪಡೆದವರು ಐಸ್ ಕ್ರೀಂ, ಫ್ರಿಡ್ಜ್ ವಾಟರ್ ಸೇವಿಸಬಾರದು; ಈ ಸುದ್ದಿಯ ಕುರಿತು ಆರೋಗ್ಯ ಇಲಾಖೆ ಸ್ಪಷ್ಟನೆ


ಮಹಾರಾಷ್ಟ್ರದ ಸಾಂಗ್ಲಿಯ ಕರಾಟೆ ಶಿಕ್ಷಕ ಆರ್ ಮಣಿಕಂಠ್ ಹಾಗೂ ಇತರೆ ಶಿಕ್ಷಕರು ಕರಾಟೆ ಹಾಗೂ ಯೋಗದ ತರಬೇತಿಯನ್ನು ನೀಡಲಿದ್ದು, ಹೆಚ್ಚಿನ ಮಾಹಿತಿಗೆ ಶಿಬಿರ ನಿರ್ವಾಹಕ ವಿಶ್ವನಾಥ್ ಎಸ್ 9481074453 ಹಾಗೂ ಕರಾಟೆ ಶಿಕ್ಷಕ ಮಣಿಕಂಠ ಆರ್ 9923118800, ಸ್ಪಂದನ ಸಂಸ್ಥೆಯ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್ 9449498994, ಅರುಣರಾಜ್ ಎಸ್. ಗುಡ್ಡೆತೋಟ: 8762750706, ಹರೀಶ್: 9440552531 ಸಂಪರ್ಕಿಸಬಹುದಾಗಿದೆ.


ಇದನ್ನೂ ಓದಿ: ರಾಜ್ಯದ ಅನ್ನದಾತರಿಗೆ ಗುಡ್‌ ನ್ಯೂಸ್‌; ಬೆಳೆ ನಷ್ಟ ಪರಿಹಾರ ವಿತರಣೆಗೆ ಸರ್ಕಾರ ಆದೇಶ; ಯಾವುದಕ್ಕೆ ಎಷ್ಟು ಪರಿಹಾರ? ಇಲ್ಲಿದೆ ಡಿಟೈಲ್ಸ್


ಜಯಪುರದ ಸುತ್ತಮುತ್ತಲಿನ ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.