ಬೆಳ್ತಂಗಡಿ/ಬಾಳೂರು: (ನ್ಯೂಸ್ ಮಲ್ನಾಡ್ ವರದಿ) ಗ್ಯಾರೇಜ್ ನಲ್ಲಿ ರಿಪೇರಿಗೆ ಇರಿಸಿದ್ದ ಓಮಿನಿ ಕಾರನ್ನು ಮ್ಯಾಕಾನಿಕ್ ಟೆಸ್ಟ್ ಡ್ರೈವ್ ಮಾಡಲು ತೆಗೆದುಕೊಂಡು ಹೋಗುವಾಗ ಅಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಬೆಳ್ತಂಗಡಿ ನಗರದ ಕಲ್ಲಗುಡ್ಡೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.


ಇದನ್ನೂ ಓದಿ; ಮನೆ ಮಾಲೀಕರ ಗಮನಕ್ಕೆ; ಮನೆ ಬಾಡಿಗೆಗೆ ಸರ್ಕಾರದ ಹೊಸ ನಿಯಮ; ಏನಿದೆ ಹೊಸ ರೂಲ್ಸ್, ಇಲ್ಲಿದೆ ಡಿಟೈಲ್ಸ್

ಬೆಳ್ತಂಗಡಿ ನಗರದ ಕಲ್ಲಗುಡ್ಡೆ ರಸ್ತೆಯಲ್ಲಿ ನಿನ್ನೆ ರಾತ್ರಿ ಓಮಿನಿ ಕಾರನ್ನು ಲಾಯಿಲದ ಗ್ಯಾರೇಜಿನ ಮ್ಯಾಕಾನಿಕ್ ಚಲಾಯಿಸಿಕೊಂಡು ಹೋಗುವಾಗ ಅಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಓಮಿನಿ ಕಾರು ಚರಂಡಿಗೆ ಬಿದ್ದಿದೆ. ಕಾರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಾಳೂರು ನಿವಾಸಿ ಗೀತಾ ಎಂಬವರಿಗೆ ಸೇರಿದ್ದು. ರಿಪೇರಿಗಾಗಿ ಬೆಳ್ತಂಗಡಿಯ ಲಾಯಿಲ ಗ್ಯಾರೇಜ್ ನಲ್ಲಿ ಇಟ್ಟಿದ್ದರು ಎನ್ನಲಾಗಿದೆ. (ವರದಿ- ತನು ಕೊಟ್ಟಿಗೆಹಾರ)

ಇದನ್ನೂ ಓದಿ; BPL ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ಈ ತರಬೇತಿಗೆ ಅರ್ಜಿ ಆಹ್ವಾನ












