ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಒಮಿಸಿ ಕಾರಿಗೆ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸುಟ್ಟು ಹೋಗಿರುವ ಘಟನೆ ನಡೆದಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ರಿಲೀಫ್; ಏನದು, ಮಿಸ್ ಮಾಡ್ದೆ ಈ ಸುದ್ದಿ ಓದಿ

ಶಿವಮೊಗ್ಗದಿಂದ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದೆಮ್ಲಾಪುರಕ್ಕೆ ತೆರಳುತ್ತಿದ್ದ ಓಮಿನಿ ಕಾರಿಗೆ ಬೆಳ್ಳೂರು ಬಂಗ್ಲಿ ದಿಬ್ಬದ ಬಳಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಶನಿವಾರ ತಡರಾತ್ರಿ ಸಂಪೂರ್ಣ ಸುಟ್ಟು ಹೋಗಿದೆ.

ದೆಮ್ಹಾಪುರದ ಗಂಗಾಧರ್ ಎಂಬುವವರಿಗೆ ಸೇರಿದ ಓಮಿನಿ ವಾಹನ ಇದಾಗಿದೆ. ಚಾಲಕ ಶ್ರೀಕಾಂತ್ ಹಾಗೂ ಮಾಲಿಕ ಗಂಗಾಧರ್ ಇಬ್ಬರು ವಾಹನದಿಂದ ಇಳಿದು ಅಪಾಯದಿಂದ ಪಾರಾಗಿದ್ದಾರೆ. ಗಂಗಾಧರ್ ಅವರ ಮನೆಯಲ್ಲಿ ಮದುವೆ ಕಾರ್ಯದ ನಿಮಿತ್ತ ಶಿವಮೊಗ್ಗದಿಂದ ದಿನಸಿ ಸಾಮಗ್ರಿಗಳನ್ನು ತುಂಬಿಕೊಂಡು ಊರಿಗೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಇನ್ಮುಂದೆ ಮೊಬೈಲ್ ನಲ್ಲೇ ಸಿಗಲಿದೆ ಹಳೆಯ ಪಹಣಿ
















