ಮೂಡಿಗೆರೆ: ಕಾಡಾನೆ ದಾಳಿಯಿಂದ ಅಡಿಕೆ, ಬಾಳೆ ಬೆಳೆ ನಾಶ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ದೇವನಗೂಲ್ ಗ್ರಾಮದಲ್ಲಿ ಬುಧವಾರವೂ ಕಾಡಾನೆಗಳ ಹಿಂಡು ದಾಳಿ ಇಟ್ಟಿದ್ದು ಅಪಾರ ಪ್ರಮಾಣದ ಬಾಳೆ, ಅಡಿಕೆ ಬೆಳೆಗಳು ನಾಶವಾಗಿವೆ.

 

ಇದನ್ನೂ ಓದಿ; ಪಿಎಂ ವಿಶ್ವಕರ್ಮ ಯೋಜನೆ; ಈ ಯೋಜನೆಯಲ್ಲಿ ಸಿಗುತ್ತೆ 15 ಸಾವಿರ ಸಹಾಯಧನ; ಯಾರೆಲ್ಲಾ ಈ ಯೋಜನೆಗೆ ಅರ್ಹರು, ಅರ್ಹತೆಗಳೇನು; ಸವಲತ್ತು ಪಡೆಯಲು ಹೀಗೆ ನೋಂದಣಿ ಮಾಡಿಕೊಳ್ಳಿ

ಕೊಟ್ಟಿಗೆಹಾರದ ದೇವನಗೂಲ್ ಸತೀಶ್ ಆಚಾರ್, ಬೆಳ್ಳಾಚಾರ್ ನಾಗೇಶ್ ಆಚಾರ್, ನಟೇಶ್ ಆಚಾರ್, ಹರೀಶ್ ಆಚಾರ್, ಪ್ರಶಾಂತ್ ಆಚಾರ್ ಅವರ ತೋಟದಲ್ಲಿ ಅಡಿಕೆ, ಬಾಳೆ ಬೆಳೆಗಳನ್ನು ನಾಶಮಾಡಿದೆ. ಪ್ರಶಾಂತ್ ಆಚಾರ್ ಅವರ ಮನೆಯ ಹಿಂಭಾಗ ಮನೆಯ ಮೇಲ್ಛಾವಣಿ ಜಖಂಗೊಂಡಿದೆ.

ಇದನ್ನೂ ಓದಿ; ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶ; 1,25,000ರ ವರೆಗೆ ಮಾಸಿಕ ವೇತನ;  ನೇರ ಸಂದರ್ಶನದ ಮೂಲಕ ಆಯ್ಕೆ

ಸ್ಥಳಕ್ಕೆ ಅರಣ್ಯ ಗಸ್ತು ಅಧಿಕಾರಿ ಪರಮೇಶ್ ಮತ್ತಿತರ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂರು ಕಾಡಾನೆಗಳು ಮಲಯ ಮಾರುತ ಅತಿಥಿ ಗೃಹದ ಕಡೆಯಿಂದ ದೇವನಗೂಲ್ ಗ್ರಾಮಕ್ಕೆ ಲಗ್ಗೆ ಇಟ್ಟಿವೆ. ಪಟಾಕಿ ಸಿಡಿಸಿ ಮೂರು ಕಾಡಾನೆಗಳನ್ನು ಓಡಿಸಿದರೂ ಅವುಗಳು ಈ ಗ್ರಾಮದ ಗುಡ್ಡಗಳಲ್ಲಿ ಬೀಡು ಬಿಟ್ಟಿದ್ದು ಮಲೆಮನೆ ವ್ಯಾಪ್ತಿಗೂ ಸಾಗುತ್ತಿವೆ ಎಂದು ತಿಳಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)

 

ಚಿಕ್ಕಮಗಳೂರು: ದಶಮಾನೋತ್ಸವ ಹಿನ್ನೆಲೆಯಲ್ಲಿ ಸಿದ್ಧಪಡಿಸಿರುವ ಸ್ಮರಣ ಸಂಚಿಕೆ ಜಾಗೃತಿ ಪುಸ್ತಕ ಬಿಡುಗಡೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಮಹಾಗಣಪತಿ ಸೇವಾ ಸಂಘ (ರಿ) ಆಯೋಜಿಸಲಾಗಿದ್ದ ದಶಮಾನೋತ್ಸವ ಸಂಭ್ರಮದ ಸ್ಮರಣ ಸಂಚಿಕೆ ಪುಸ್ತಕ ಜಾಗೃತಿಯನ್ನು ಬಿಡುಗಡೆಗೊಳಿಸಲಾಯಿತು.

 

ಚಿಕ್ಕಮಗಳೂರಿನ ಹಿಂದೂ ಮಹಾಗಣಪತಿಸೇವಾ ಸಂಘದ ವತಿಯಿಂದ ನಡೆದ ಕಡೆ ಕಾರ್ತಿಕ ದೀಪೋತ್ಸವ ಮತ್ತು ಸಂಘದ ದಶಮಾನ ವರ್ಷದ ಸಂಭ್ರಮದ ಪ್ರಯುಕ್ತ ಹೊರತಂದಿರುವ “ಜಾಗೃತಿ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಚಿಕ್ಕಮಗಳೂರಿನ ಓಂಕಾರೇಶ್ವರ ಗಣಪತಿ ದೇವಸ್ಥಾನದಲ್ಲಿ ಸೋಮವಾರ ನಡೆಯಿತು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಮಾಜಿ ಶಾಸಕ ಸಿ ಟಿ ರವಿ ಮಾತನಾಡಿ, ಹಿಂದೂ ಮಹಾಗಣಪತಿ 10 ಪೂರ್ಣಗೊಳಿಸಿದ ಕಾರಣ ಅಭಿನಂದನೆಯನ್ನು ಸಲ್ಲಿಸಿ, ಎಲ್ಲಾ ಗಣಪತಿಯು ಹಿಂದುತ್ವವನ್ನೇ ಪ್ರತಿಪಾದಿಸುತ್ತದೆ, ಆದರೆ ಹಿಂದೂ ಮಹಾ ಗಣಪತಿ ವಿಶೇಷ ಏನೆಂದರೆ ತತ್ವಗಳನ್ನು ಕೂಡಿದ್ದಾಗಿದೆ, ಹಿಂದೂ ಎಂದರೆ ಆದಿ ಮತ್ತು ಅಂತ್ಯವಿಲ್ಲದ ಪರಂಪರೆಯಾಗಿದೆ, ಹಿಂದೂ ಸರ್ವೇಜನ ಸುಖಿನೋಭವಂತು ಎಂದು ಕೇಳಿಕೊಂಡು ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಾನೆ, ಆದರೆ ಇನ್ನೂ ಕೆಲವರು ಅವರ ಮತವನ್ನು, ದೇವರನ್ನು ಪಾಲಿಸುವವರಿಗೆ ಮಾತ್ರ ಒಳ್ಳೆಯದಾಗಲಿ ಎಂದು ಕೇಳಿಕೊಳ್ಳುತ್ತಾರೆ, ಇಂತಹ ವಿಶಾಲ ಮನೋಭಾವದ ಹಿಂದೂ ಧರ್ಮ ಸಂಕುಚಿತತೆ ಒಳಗೆ ಬರುವುದಿಲ್ಲ ಎಂದರು

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.