ಮೂಡಿಗೆರೆ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸಿಲಿಂಡರ್ ತುಂಬಿದ್ದ ಲಾರಿ.

ಮೂಡಿಗೆರೆ/ಕೊಟ್ಟಿಗೆಹಾರ:(ನ್ಯೂಸ್ ಮಲ್ನಾಡ್ ವರದಿ)
ಚಾರ್ಮಾಡಿ ಘಾಟಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾದ ಘಟನೆ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ನಡೆದಿದೆ. ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರಣದಿಂದ ಸಿಲಿಂಡರ್‌ ತುಂಬಿದ ಲಾರಿ ಪಲ್ಟಿಯಾಗಿದೆ.

ಅಣ್ಣಪ್ಪ ಸ್ವಾಮಿ ದೇಗುಲದ ಬಳಿ, ಡೀಸೆಲ್ ಹಾಗೂ ಆಯಿಲ್ ತುಂಬಿದ್ದ ಲಾರಿ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿ ಡೀಸೆಲ್ ಹಾಗೂ ಆಯಿಲ್ ರಸ್ತೆಯಲ್ಲೇ ಲೀಕ್‌ ಆಗಿದೆ. ಲಾರಿ ತೀವ್ರವಾಗಿ ಪ್ರಪಾತಕ್ಕೆ ಬೀಳುವ ಸಂಭವವಿದ್ದು, ತಡೆಗೆ ಬರುವ ಗೋಡೆ ಹತ್ತಿರ ಹೋಗಿದ್ದು ಅಪಾಯದಿಂದ ಪಾರಾಗಿದೆ. ಲಾರಿ ಚಾಲಕನಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಡ್ರೋನ್ ಪೈಲಟ್ ಆಗಲು ಇಲ್ಲಿದೆ ಸುವರ್ಣಾವಕಾಶ: ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಉಚಿತ ಡ್ರೋನ್ ಪೈಲಟ್ ತರಬೇತಿ

ಲಾರಿಯಿಂದ ಡೀಸೆಲ್ ಹಾಗೂ ಆಯಿಲ್ ರಸ್ತೆಯಲ್ಲೇ ಸೇರಿರುವುದರಿಂದ ಬೆಂಕಿಗೆ ಒಪ್ಪುವ ಸಂಭವವಿತ್ತು,ಒಂದೆಡೆ ಲಾರಿ ಪಲ್ಟಿ ಆಗಿ ಡೀಸೆಲ್ ಹಾಗೂ ಆಯಿಲ್ ಲೀಕ್ ಆಗಿದೆ, ಇನ್ನೊಂದೆಡೆ ಅರಣ್ಯ ಪ್ರದೇಶ ಹೊತ್ತಿ ಉರಿಯುತ್ತಿದೆ. ಇದರಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇತ್ತು, ಆದರೆ ಅದೃಷ್ಟವಶಾತ್ ಯಾವುದೇ ರೀತಿಯ ಅಪಾಯವಾಗಿಲ್ಲ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಈ ಸಂದರ್ಭದಲ್ಲಿ, ಬಣಕಲ್‌ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸುರಕ್ಷಿತವಾಗಿ ಪರಿಸ್ಥಿತಿಯನ್ನು ನಿರ್ವಹಿಸಲು ಎಚ್ಚರವಹಿಸಿದ್ದಾರೆ. ಲಾರಿ ಪಲ್ಟಿಯಾದ ಪರಿಣಾಮ, ರಸ್ತೆ ಮಧ್ಯೆ ಟ್ರಾಫಿಕ್‌ ಜಾಮ್ ಉಂಟಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಬಣಕಲ್‌ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿದೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.