ಚಾರ್ಮಾಡಿ ಘಾಟಿಗೆ ಜಿಲ್ಲಾಧಿಕಾರಿ ಭೇಟಿ, ರಸ್ತೆ ಪರಿಶೀಲನೆ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಶುಕ್ರವಾರ ಸಂಜೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರಸ್ತೆ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.


ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ


ಬಳಿಕ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಚಾರ್ಮಾಡಿ ಘಾಟ್ ನಲ್ಲಿ ತಡೆಗೋಡೆ ಕುಸಿತ, ಬಿರುಕು ಮತ್ತಿತರ ಸಮಸ್ಯೆ ಗಮನಕ್ಕೆ ಬಂದಿದ್ದು, ಅದನ್ನು ಪರಿಶೀಲಿಸಲು ಬಂದಿದ್ದೇವೆ. ಹಾಗೆಯೇ ಮಡಿಕೇರಿ, ಸಕಲೇಶಪುರ ಮಾರ್ಗದಲ್ಲಿ ಗುಡ್ಡ ಕುಸಿತದ ಹಿನ್ನಲೆಯಲ್ಲಿ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಮನವರಿಕೆ ಮಾಡಿಕೊಂಡು ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲು ನಿರ್ಧಾರ ತೆಗೆದುಕೊಳ್ಳಲಿದ್ದೇವೆ.

ಹಗಲಿನಲ್ಲಿಯೇ ಹೆಚ್ಚು ವಾಹನ ಬಿಡಲು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಘನವಾಹನಗಳಿಗೆ ಚಾರ್ಮಾಡಿ ಘಾಟ್ ನಲ್ಲಿ ಸಂಚರಿಸಲು ಹಿಂದಿನಿಂದಲೂ ನಿಷೇಧವಿದೆ. ಸರ್ಕಾರಿ ಬಸ್, ಗೂಡ್ಸ್ ವಾಹನ, ಲಘುವಾಹನಗಳಿಗೆ ಸಂಚರಿಸಲು ಅವಕಾಶವಿದೆ. ಆದರೆ, ಮತ್ತೊಮ್ಮೆ ಕೊಡಗು, ಹಾಸನ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಜನರ ಅನುಕೂಲತೆ ಮೇರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.


ಇದನ್ನೂ ಓದಿ: ವಾಹನ ಸವಾರರೇ ಎಚ್ಚರ;ಈ ತಪ್ಪು ಮಾಡಿದ್ರೆ ಬೀಳುತ್ತೆ ಕೇಸ್ ಜೊತೆ ದಂಡ


ಚಿಕ್ಕಮಗಳೂರು ವರಿಷ್ಠಾಧಿಕಾರಿ ವಿಕ್ರಂ ಅಮಟೆ ಮಾತನಾಡಿ, ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮಳೆಯ ಹಿನ್ನೆಲೆ ರಾತ್ರಿಯ ಹೊತ್ತಲ್ಲಿ ವಾಹನ ಸಂಚಾರ ನಿಷೇಧಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ, ಮಡಿಕೇರಿ, ಶಿರಾಡಿ ಘಾಟ್ ಬಂದ್ ಆದ ಹಿನ್ನೆಲೆಯಲ್ಲಿ ಚಾರ್ಮಾಡಿ ಮಾತ್ರ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಸಂಚಾರ ನಿಷೇಧದ ಬಗ್ಗೆ ನಿರ್ಧಾರ ಸದ್ಯಕ್ಕೆ ಕೈಗೊಂಡಿಲ್ಲ ಎಂದರು.

ಸ್ಥಳೀಯ ಸಮಾಜ ಸೇವಕ ಸಂಜಯ್ ಗೌಡ, ತನು ಕೊಟ್ಟಿಗೆಹಾರ, ಸಾಗರ್ ಮತ್ತಿತರರು ಚಾರ್ಮಾಡಿ ಘಾಟ್ ತಡೆಗೋಡೆ ಬಿರುಕು, ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ. ಚಾರ್ಮಾಡಿ ರಸ್ತೆಯ ಬಲ ಬದಿಯಲ್ಲಿ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆ ಕುಸಿಯುತ್ತಿದೆ. ರಸ್ತೆಯ ಬದಿ ಕಾಡು ಕಡಿದಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ತಂದರು.


ಇದನ್ನೂ ಓದಿ: HSRP ನಂಬರ್ ಪ್ಲೇಟ್ ನಿಯಮ ಫುಲ್ ಬದಲಾವಣೆ!; ಹೊಸ ರೂಲ್ಸ್ ಏನು? ಇಲ್ಲಿದೆ ನೋಡಿ


ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಇಂಜೀನಿಯರ್ ಜಯಣ್ಣ ಮಾತನಾಡಿ, ಕಳಪೆ ಕಾಮಗಾರಿ ಆಗಿಲ್ಲ. 2019 ರಲ್ಲಿ ಭೂಕುಸಿತದಿಂದ ಅರ್ಧ ರಸ್ತೆಯೇ ಕುಸಿದಿತ್ತು. ಅದನ್ನು ಕೆಳಗಿನಿಂದಲೇ ರಿವಿಟ್ ಮೆಂಟ್ ಮಾಡಿ ರಸ್ತೆ ಸರಿಪಡಿಸಲಾಗಿದೆ. ತಡೆಗೋಡೆ ಮಾಡಿ ಬಳಿಕ ಆದರ ಆ ಕಡೆ ಎರಡೂವರೆ ಮೀಟರ್ ಸ್ಲ್ಯಾಬ್ ಹಾಕಲಾಗಿದೆ. ಅದನ್ನು ಸಮತಟ್ಟು ಮಾಡಲು ರೋಲರ್ ನಿಂದ ಕಷ್ಟ ಸಾಧ್ಯ. ಹಾಗಾಗಿ ಸ್ಲ್ಯಾಬ್ ಜಗ್ಗಿದೆ. ಅದಕ್ಕೆ ವೆಟ್ ಮಿಕ್ಸ್ ಹಾಕಿ ಸರಿಪಡಿಸಲಾಗಿದೆ. ಬೇಸಿಗೆಯಲ್ಲಿ ಮತ್ತೊಮ್ಮೆ ಕಾಮಗಾರಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು. ಚರಂಡಿ ಕಾಮಗಾರಿ ಹಾಗೂ ಜಂಗಲ್ ಕಟ್ಟಿಂಗ್ ಬಗ್ಗೆ ವ್ಯವಸ್ಥೆ ಮಾಡಲಾಗುವುದು. ಲಘು ಹಾಗೂ ಸಾಮಾನ್ಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಈ ರಸ್ತೆ ಯೋಗ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಿಇಒ ಕೆ. ಎಸ್. ಗೀತಾ, ಎಇಇ ಕಾಂಬ್ಳೆ, ಎಇ ಸಂತೋಷ್, ಮೂಡಿಗೆರೆ ಇನ್ ಸ್ಪೆಕ್ಟರ್ ಸೋಮೇಗೌಡ, ಬಣಕಲ್ ಸಬ್ ಇನ್ ಸ್ಪೆಕ್ಟರ್ ಡಿ. ವಿ. ರೇಣುಕಾ ಮತ್ತಿತರರು ಇದ್ದರು.


ಇದನ್ನೂ ಓದಿ: ಈ ಜಿಲ್ಲಾ ಅಂಗನವಾಡಿಯಲ್ಲಿ ಜಾಬ್ ಆಫರ್; 344 ಹುದ್ದೆಗಳಿಗೆ ಅರ್ಜಿ ಆಹ್ವಾನ; 10th ಪಾಸ್ ಆದವರು ಈ ರೀತಿ ಅರ್ಜಿ ಸಲ್ಲಿಸಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.