ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಅಯೋಧ್ಯೆ ರಾಮ ಮಂದಿರ ದರ್ಶನ ಯಾತ್ರೆ ಅಭಿಯಾನ 2024 ರ ಅಂಗವಾಗಿ ಇಂದು ರಾಜ್ಯದ ಮೊದಲ ಬಿಜೆಪಿ ತಂಡವಾಗಿ ಕಡೂರು ರೈಲ್ವೆ ನಿಲ್ದಾಣದಿಂದ ಅಯೋಧ್ಯೆ ಶ್ರೀ ರಾಮ ಮಂದಿರ ಕಡೆಗೆ ಪ್ರಯಾಣಿಸಲಾಯಿತು.
ಇದನ್ನೂ ಓದಿ; SC, ST ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮೂಡಿಗೆರೆ ತಾಲೂಕಿನ 42 ಜಿಲ್ಲೆಯ 400 ಜನ ಕಾರ್ಯಕರ್ತರು ಅಯೋಧ್ಯೆ ಶ್ರೀ ರಾಮ ಮಂದಿರ ಕಡೆಗೆ ಪ್ರಯಾಣಿಸಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್, ಡಿ.ಎಸ್.ಸುರೇಶ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮುರಡಪ್ಪ, ಪ್ರಧಾನ ಕಾರ್ಯದರ್ಶಿಗಳಾದ ನರೇಂದ್ರ, ಪುಣ್ಯಪಾಲ್, ಪರೀಕ್ಷಿತ್ ಜಾವಳಿ, ಕಣಚೂರು ವಿನೋದ್, ಪಂಚಾಕ್ಷರಿ, ಸಂಜಯ್ ಕೊಟ್ಟಿಗೆಹಾರ, ಮಹಿಳಾ ಸೊಸೈಟಿ ಅಧ್ಯಕ್ಷೆ ಭಾರತಿ, ಪಟ್ಟಣ ಪಂಚಾಯಿತಿ ಸದಸ್ಯ ಸುಧೀರ್, ನಯನ ತಳವಾರ, ಶ್ರೇಯಸ್, ಅಶೋಕ್ ಪಾಲ್ಗೋಂಡಿದ್ದಾರೆ. ( ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ; ಅನರ್ಹರ ಜಮೀನು ವಶಕ್ಕೆ ಕಂದಾಯ ಇಲಾಖೆ ಸಜ್ಜು; ಒಂದು ತಿಂಗಳೊಳಗೆ ಅರ್ಜಿ ತಿರಸ್ಕೃತ
ಚಿಕ್ಕಮಗಳೂರು: ಆತ್ಮಹತ್ಯೆಗೆ ಶರಣಾದ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ತೇಗೂರು ಗ್ರಾಮದಲ್ಲಿ ನಡೆದಿದೆ. ವಿನೋದ್(24) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಹೆಂಡತಿ ಬಿಟ್ಟು ಹೋದಳೆಂದು ಮನನೊಂದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ವಿನೋದ್ ಮನೆಯಲ್ಲಿ ಯಾರು ಇಲ್ಲದ ವೇಳೆ ಸಮಯ ನೋಡಿಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.












