ನಗರದಲ್ಲಿರುವ ಮಲೆನಾಡು ಮಿತ್ರ ವೃಂದದ ನೂತನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡದಲ್ಲಿ ಜಾಬ್ ಆಫರ್; ಆಕರ್ಷಕ ಸಂಬಳ

ನೂತನ ಅಧ್ಯಕ್ಷರಾಗಿ ಸಂದೇಶ್ ಗೌಡ ಹಂದಿಗೋಡ್, ಉಪಾಧ್ಯಕ್ಷರಾಗಿ ಉಮೇಶ್ ಇಳಿಮನೆ, ಕಾರ್ಯದರ್ಶಿ ನಾಗೇಶ್ ಕೇಳೂರು, ಸಹ ಕಾರ್ಯದರ್ಶಿ ರಾಘವೇಂದ್ರ ಶಿಸ್ಲೆ ಹಾಗೂ ಖಜಾಂಚಿಯಾಗಿ ನಿದರ್ಶನ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ದಿನೇಶ್ ಹೊಸನಗರ, ರವಿಶ್ ಮತ್ತು ನಿಶ್ಚಿತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮಲೆನಾಡು ಮಿತ್ರ ವೃಂದದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡವರ ಖಾತೆಗೆ ಹಣ ವರ್ಗಾವಣೆ
ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ಸಂದೇಶ್ ಗೌಡ ಹಂದಿಗೂಡು ಅವರು ಮಾತನಾಡಿ, “ಮಲೆನಾಡು ಮಿತ್ರ ವೃಂದದ ಮುಖ್ಯ ಧ್ಯೇಯವಾದ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸುವುದರ ಜೊತೆಗೆ, ಬೆಂಗಳೂರಿನಲ್ಲಿರುವ ಮಲೆನಾಡಿಗರ ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಸಬಲೀಕರಣಕ್ಕಾಗಿ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಎಲ್ಲಾ ಸದಸ್ಯರು, ಹಿರಿಯ ಗೌರವಾನ್ವಿತ ನಿರ್ದೇಶಕರು ಮತ್ತು ಪದಾಧಿಕಾರಿಗಳ ಸಹಕಾರದೊಂದಿಗೆ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಶ್ರಮಿಸುತ್ತೇನೆ,” ಎಂದು ತಿಳಿಸಿದರು.












