ಶೃಂಗೇರಿ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಾ.ಕೆ.ಸಿ.ನಾಗೇಶ್, ಕಾರ್ಯದರ್ಶಿ ಆಗಿ ಸುರೇಶ್ ಹೆಗ್ಡೆ ಆಯ್ಕೆ

ಶೃಂಗೇರಿ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಾ.ಕೆ.ಸಿ.ನಾಗೇಶ್ ಹಾಗೂ ನೂತನ ಕಾರ್ಯದರ್ಶಿ ಆಗಿ ಸುರೇಶ್ ಹೆಗ್ಡೆ ಅವರು ಆಯ್ಕೆ ಆಗಿದ್ದಾರೆ.


ಇದನ್ನೂ ಓದಿ: 10th ಪಾಸ್ ಆದ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ರೋಟರಿ ಭವನದಲ್ಲಿ ನಡೆದ ಹೊಸ ಸಾಲಿನ ನಿಯೋಜಿತ ಪದಾಧಿಕಾರಿಗಳ ಪರಿಚಯದ ಕಾರ್ಯಕ್ರಮದಲ್ಲಿ ಹಾಲಿ ಅಧ್ಯಕ್ಷ ಕೆ.ಸಿ.ಚರಣ್ ಈ ಕುರಿತು ಮಾಹಿತಿ ನೀಡಿದ್ದು, ರೋಟರಿ ಸಂಸ್ಥೆ ಸ್ಥಾಪನೆಗೊಂಡು 25 ವರ್ಷ ಆಗುತ್ತಿದ್ದು, ರಜತ ವರ್ಷಾಚರಣೆಯ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಡಾ.ಕೆ.ಸಿ.ನಾಗೇಶ್ ಹಾಗೂ ನೂತನ ಕಾರ್ಯದರ್ಶಿ ಆಗಿ ಸುರೇಶ್ ಹೆಗ್ಡೆ ನಿಯೋಜನೆಗೊಂಡಿದ್ದಾರೆ ಎಂದು ತಿಳಿಸಿದರು.

ಇನ್ನು ನೂತನ ಅಧ್ಯಕ್ಷ ನಾಗೇಶ್ ಮಾತನಾಡಿ, ಜುಲೈ 7 ರಂದು ರೈತ ಭವನದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದ್ದು, ಆಯ್ಕೆ ಮಾಡಿದ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು.


ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,200 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಬಿಜಿಎಸ್ ವಿದ್ಯಾಲಯದ ಪ್ರಾಂಶುಪಾಲರಾದ ನಾಗೇಶ ಸ್ನೇಹ ಮಾತನಾಡಿ, ಸಂಘಟನೆ ಮತ್ತು ಕಾರ್ಯಕ್ರಮಗಳ ವಿಚಾರದಲ್ಲಿ ಅನುಭವಿಗಳಾಗಿದ್ದು, ಮುಂದಿನ ಸಾಲಿನಲ್ಲಿ ರೋಟರಿ ಹಿರಿಮೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವರು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ರಾಜ್ಯಪಾಲ ಹೆಚ್.ಎಸ್. ನಟೇಶ್, ಕಾರ್ಯದರ್ಶಿ ಗೌತಮ್ ಎನ್ ಹಾಗೂ ಇನ್ನರ್ ವ್ಹೀಲ್ ಪದಾಧಿಕಾರಿಗಳು ಇದ್ದರು.


ಇದನ್ನೂ ಓದಿ: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಮಲೆನಾಡಿನಲ್ಲಿ ಧಾರಾಕಾರ ಮಳೆ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು
ಮೂಡಿಗೆರೆ:  (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು ಗುಡ್ಡ ಕುಸಿತ, ವಾಹನ ಅಪಘಾತದಂತಹ ಪ್ರಕರಣಗಳು ಸಂಭವಿಸುತ್ತಿವೆ.

ಇಂದು ಮೂಡಿಗೆರೆ ತಾಲ್ಲೂಕಿನ ಬಿದ್ರಹಳ್ಳಿ ಸಮೀಪ ಎರ್ಟಿಗ ವಾಹನವೊಂದು ಪಲ್ಟಿಯಾದ ಘಟನೆ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ನೀರು ನಿಂತ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನವು ಪಲ್ಟಿ ಹೊಡೆದಿದೆ.

ಕೊಡಗಿನ ಸೋಮವಾರಪೇಟೆಯಿಂದ ಕಳಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.