ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಪಲ್ಗುಣಿ ಜಾಬ್ಸ್ ಸಂಸ್ಥೆ ನಡೆಸುತ್ತಿದ್ದ ಮಹೇಂದ್ರ ಕುಮಾರ್ (52) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಜೀವವಿಲ್ಲದ ದೇಹಗಳೊಂದಿಗೆ ಅಘೋರಿಗಳ ಜೀವನ…!; ಅಘೋರಿಗಳ ವಿಚಿತ್ರ ಜೀವನ ಶೈಲಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಮಹೇಂದ್ರ ಕುಮಾರ್ ಗುರೂಜಿ ಎಂದೇ ಪ್ರಖ್ಯಾತರಾಗಿದ್ದು, ಯುವ ಜಾಗೃತಿ ಮತದಾರರ ವೇದಿಕೆಯ ರಾಜ್ಯಾದ್ಯಕ್ಷರಾಗಿ ಮತದಾನದ ಮಹತ್ವದ ಅರಿವನ್ನು ಜನರಲ್ಲಿ ಮೂಡಿಸುವ ಕೆಲಸವನ್ನು ಮಹೇಂದ್ರ ಕುಮಾರ್ ಮಾಡುತ್ತಿದ್ದರು.
ಇಂದಿನ ಯುವ ಪೀಳಿಗೆ ಸೋಮಾರಿಗಳಾಗದೆ ಸಮಯದ ಸರಿಯಾದ ಉಪಯೋಗದ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಪ್ರತಿದಿನ ಸಲಹೆ ಸೂಚನೆಗಳನ್ನು ನೀಡುತ್ತಾ ಯುವಕರ ಮಾರ್ಗದರ್ಶಕರಾಗಿ ಮಹೇಂದ್ರ ಕುಮಾರ್ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ: ರಾಜ್ಯದ BPL ಕಾರ್ಡ್ ದಾರರಿಗೆ ಮುಖ್ಯಮಂತ್ರಿಯಿಂದ ಮುಖ್ಯ ಮಾಹಿತಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಬೆಂಗಳೂರಿನಲ್ಲಿ ವಾಸವಿದ್ದ ಮಹೇಂದ್ರ ಕುಮಾರ್ ರವರು ಕಳೆದೆರಡು ದಿನಗಳ ಹಿಂದಷ್ಟೇ ಪಲ್ಗುಣಿ ಗ್ರಾಮಕ್ಕೆ ಬಂದಿದ್ದು, ತನ್ನ ಅಭಿಮಾನಿಗಳನ್ನು ಭೇಟಿ ಮಾಡಿ ಸಂತೋಷದಿಂದ ಕಾಲ ಕಳೆದಿದ್ದರು. ಇಂದು ಬೆಳಗಿನ ಜಾವ ಮನೆಯಲ್ಲಿ ಹೃದಯಾಘಾತವಾಗಿದ್ದು, ಮೂಡಿಗೆರೆಯ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಸ್ಕೂಲ್ ಬಸ್ಗೆ ಹಳದಿ ಕಲರ್ ಯಾಕೆ ಇರುತ್ತೆ ಗೊತ್ತಾ!; ಇದರ ಹಿಂದಿದೆ ರಹಸ್ಯ ಸಂದೇಶ!
ಇಂದು ಸಂಜೆ ಅವರ ಹುಟ್ಟೂರು ಪಲ್ಗುಣಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.












