ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮೆಸ್ಕಾಂ ಇಲಾಖೆ ವೋಲ್ವೇಜ್ ಇಲ್ಲದ ಕಳಪೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುತ್ತಿದ್ದರೂ ತಾಲೂಕಿನ ಗ್ರಾಹಕರೊಬ್ಬರಿಗೆ ದುಬಾರಿ ಮೊತ್ತದ ಬಿಲ್ಲನ್ನು ಕೊಡುವುದರ ಮೂಲಕ ಹೈ ವೋಲ್ವೇಜ್ ಶಾಕ್ ನೀಡಿದೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್: ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಮನೆ ಬಳಕೆಯ ವಿದ್ಯುತ್ ಸಂಪರ್ಕ ಹೊಂದಿರುವ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯಿತಿಯ ಕೆಳಕೊಪ್ಪ ಗ್ರಾಮದ ಬಾಚಿನ ಕೊಪ್ಪ ರತ್ನಮ್ಮ ಎಂಬುವರಿಗೆ ಜನವರಿ ತಿಂಗಳಿನಲ್ಲಿ 3717 ಹಾಗೂ ಫೆಬ್ರವರಿಯಲ್ಲಿ 4039 ಬಿಲ್ ಬಂದಿದೆ. ಪ್ರತಿ ತಿಂಗಳು ಅವರಿಗೆ ಮೇ ತಿಂಗಳಿನಲ್ಲಿ 39, ಜೂನ್‌ನಲ್ಲಿ 25 ರೂ., ನವೆಂಬರ್‌ನಲ್ಲಿ 61 ರೂ. ಬರುತ್ತಿದ್ದು, ಆದರೆ ಈಗ ದುಬಾರಿ ಬಿಲ್ ನೋಡಿ ಕಂಗಾಲಾಗಿದ್ದಾರೆ.

ಜನವರಿ ತಿಂಗಳಲ್ಲಿ ಬಂದ 3717 ಬಗ್ಗೆ ಆನ್ ಲೈನ್ ನಲ್ಲಿ ಪರೀಕ್ಷಿಸಿದಾಗ 1665 ಎಂದು ತೋರಿಸಿತ್ತು. ಹಾಗೆಯೇ ಫೆಬ್ರವರಿ ತಿಂಗಳಿನಲ್ಲಿ ತಪಾಸಣೆ ಮಾಡಿದಾಗ 2476 ರೂ. ಎಂದು ತೋರಿಸಲಾಗಿತ್ತು. ಕಚೇರಿಯಲ್ಲಿ ಕೇಳಿದಾಗ ಇಎಂಐ ಮೂಲಕ ಹಣ ಪಾವತಿಸಿ ಅಂತ ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೊಲಿಗೆ ತರಬೇತಿ; ಡಿಟೇಲ್ಸ್‌ಗಾಗಿ ಜಸ್ಟ್ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರತ್ನಮ್ಮ ರವರ ಮಗ ದಯಾನಂದರವರು, ನಮ್ಮದು ಹಳ್ಳಿ ಮನೆ ವಿದ್ಯುತ್ ಸರಬರಾಜು ಇರುವುದೇ ಅಪರೂಪ. ಇದ್ದರೂ ವೋಲ್ವೇಜ್ ಇಲ್ಲದೆ ಕೆಲವೊಮ್ಮೆ ಕತ್ತಲೆಯಲ್ಲಿಯೇ ಕುಳಿತುಕೊಳ್ಳಬೇಕಾಗಿರುತ್ತದೆ. ಹೀಗಿರುವಾಗ ಒಮ್ಮೆಲೆ ಬಿಲ್ ಈ ರೀತಿ ಬಂದರೆ ಏನು ಮಾಡುವುದು ಎಂದು ಮೆಸ್ಕಾಂ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.













