
ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಇಂಧನ ಸಚಿವ ಕೆಜೆ ಜಾರ್ಜ್ ಜಿಲ್ಲೆಯಲ್ಲೇ ರೈತರೊಬ್ಬರಿಗೆ ಮೆಸ್ಕಾಂ ಬರೊಬ್ಬರಿ 3 ಲಕ್ಷದ 20 ಸಾವಿರದ 76 ರೂಪಾಯಿ ಬಿಲ್ ನೀಡಿ ಶಾಕ್ ನೀಡಿದೆ.
ಇದನ್ನೂ ಓದಿ: ಜಿಲ್ಲಾ ಡಿಸಿಸಿ ಬ್ಯಾಂಕ್ ನಲ್ಲಿ ಜಾಬ್ ಆಫರ್; ಆಕರ್ಷಕ ಸಂಬಳ, ಅರ್ಜಿ ಲಿಂಕ್ ಇಲ್ಲಿದೆ ನೋಡಿ

ಹೌದು, ಚಿಕ್ಕಮಗಳೂರು ತಾಲೂಕಿನ ಬಿಕ್ಕರಣೆ ಗ್ರಾಮದ ಉಮೇಶ್ ಎಂಬ ರೈತರಿಗೆ 10 HP ಮೋಟರ್ ಬಳಕೆಗೆ 13 ವರ್ಷ 4 ತಿಂಗಳ ಬಳಿಕ 3,20,076 ರೂಪಾಯಿ ಬಿಲ್ ಬಂದಿದೆ.

10 HP ಮೋಟರ್ ಬಳಕೆಗೆ ವಿದ್ಯುತ್ ಉಚಿತ!:
ಕೃಷಿ ಉದ್ದೇಶಕ್ಕೆ 10 ಎಚ್ಪಿ ಮೋಟರ್ ಬಳಕೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಬಂಗಾರಪ್ಪ ಸಿಎಂ ಆಗಿದ್ದಾಗ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಿದ್ದರು. ಮುಖ್ಯಮಂತ್ರಿ ಬಂಗಾರಪ್ಪ ಕಾಲದಿಂದಲೂ ಉಚಿತ ವಿದ್ಯುತ್ ಪೂರೈಕೆಯಾಗಿತ್ತಿದ್ದು, ಈಗ ಏಕಾಏಕಿ ಮೆಸ್ಕಾಂ ಬಿಲ್ ನೀಡಿದೆ.
ಇದನ್ನೂ ಓದಿ: ಈ ಬಾರಿ 10th ಪರೀಕ್ಷೆಯಲ್ಲಿ ಹೊಸ ರೂಲ್ಸ್!; ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯ ಅಂದ್ರು ಶಿಕ್ಷಣ ಸಚಿವ
ಕಾಫಿ ಬೆಳೆಗಾರರಿಗೆ ಉಚಿತ ಇಲ್ಲ ಎನ್ನುತ್ತಿರುವ ಮೆಸ್ಕಾಂ ಅಧಿಕಾರಿಗಳು:
ಕಾಫಿ ಬೆಳೆಗಾರರಿಗೆ ವಿದ್ಯುತ್ ಉಚಿತ ಇಲ್ಲ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, 13 ವರ್ಷಕ್ಕೂ ಹೆಚ್ಚು ಕಾಲ ಬಿಲ್ ನೀಡದೆ ಈಗ ಏಕಾಏಕಿ ಬಿಲ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಲಕ್ಷಾಂತರ ರೂಪಾಯಿ ಬಿಲ್ ನೋಡಿ ರೈತ ಉಮೇಶ್ ಇದೀಗ ಕಂಗಾಲಾಗಿದ್ದಾರೆ. 15 ದಿನಗಳ ಒಳಗೆ ಹಣ ಪಾವತಿ ಮಾಡುವಂತೆ ಆಲ್ದೂರು ಮೆಸ್ಕಾಂ ಉಪ ವಿಭಾಗದಿಂದ ಅವರಿಗೆ ನೋಟಿಸ್ ನೀಡಲಾಗಿದ್ದು, ಬಿಲ್ ಪಾವತಿ ಮಾಡದಿದ್ದರೆ ವಿದ್ಯುತ್ ಕಡಿತ ಮಾಡುವ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಪಂಪ್ಸೆಟ್ ಅಳವಡಿಕೆಗೆ ಸರ್ಕಾರದಿಂದ ಸಿಗಲಿದೆ ಶೇ.80% ರಷ್ಟು ಸಹಾಯಧನ!; ಈ ರೀತಿ ಅರ್ಜಿ ಸಲ್ಲಿಸಿ ಪಡೆಯಿರಿ
















