ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) 100% ಮತದಾನ ಮಾಡಬೇಕು ಎಂದು ಅಭಿಯಾನ ಮಾಡುವ, ಹಾಗೂ ಅದರ ಹೊಣೆಗಾರಿಕೆ ಹೊತ್ತಿರುವ ಚುನಾವಣಾ ಆಯೋಗವೇ ಎಡವಟ್ಟೊಂದನ್ನು ಮಾಡಿದ್ದು ಅದರಿಂದ ಹಲವರು ಮತದಾನದಿಂದ ವಂಚಿತರಾಗಿದ್ದಾರೆ.
ಇದನ್ನೂ ಓದಿ: ಚಿನ್ನದ ಮೇಲೆ ಸಾಲ ಪಡೆಯಬೇಕು ಅನ್ಕೊಂಡಿದ್ದೀರಾ?; ಹಾಗಾದ್ರೆ ಈ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ; ಮಿಸ್ ಮಾಡ್ದೆ ಓದಿ

ಎಲೆಕ್ಷನ್ ವಾರಿಯರ್ಸ್ ಕಾರ್ಯಕ್ಕಾಗಿ ವಿವಿಧ ವಲಯದ ಹಲವು ಸಿಬ್ಬಂದಿಗಳಿಗೆ ತರಬೇತಿ ನೀಡಿರುವ ಜಿಲ್ಲಾಡಳಿತ ಅವರಿಗೆ ಕರ್ತವ್ಯ ನಿರ್ವಹಿಸಬೇಕಾದ ವ್ಯಾಪ್ತಿಯ ಕ್ಷೇತ್ರವನ್ನು ತಿಳಿಸಿತ್ತು, ಆದರೆ ನಿರ್ಧಿಷ್ಟವಾದ ಸ್ಥಳ ತಿಳಿಸಿರಲಿಲ್ಲ, ಹಾಗೆಯೇ ತರಬೇತಿ ಸಂದರ್ಭದಲ್ಲಿ ಪೋಸ್ಟಲ್ ಓಟನ್ನು ಮಾಡುವಂತೆ ತಿಳಿಸಿದೆ, ಆದರೆ ಆ ನಂತರದಲ್ಲಿ ನೂರಕ್ಕೂ ಅಧಿಕ ಸಿಬ್ಬಂದಿಗಳಿಗೆ ಎಲೆಕ್ಷನ್ ಡ್ಯೂಟಿಯನ್ನು ರದ್ದುಗೊಳಿಸಿದೆ. ಆದ್ದರಿಂದ ಅವರಿಗೆ ಸ್ಥಳ ನಿಯೋಜನೆ ಆಗದ ಕಾರಣ ಹಾಗೂ ಡ್ಯೂಟಿ ರದ್ದುಗೊಂಡಿದ್ದರಿಂದ ಪೋಸ್ಟಲ್ ಓಟನ್ನು ಮಾಡಿರುವುದಿಲ್ಲ. ಹಾಗೆಯೇ ಈ ಬಗ್ಗೆ ಇಲಾಖೆಯಿಂದ ಯಾವುದೇ ಸಂವಹನ ಸಹ ಮಾಡಿರುವುದಿಲ್ಲ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ; ಪೆಂಡಿಂಗ್ ಇರುವ ಹಣ ನಿಮ್ಮ ಖಾತೆಗೆ ಜಮಾ ಹೀಗೆ ಮಾಡಿ!
ಆದರೆ ಈಗ ತಮ್ಮ ಪೋಲಿಂಗ್ ಬೂತ್ ಗೆ ಮತದಾನಕ್ಕೆ ತೆರಳಿದ ಸಿಬ್ಬಂದಿಗಳಿಗೆ ಶಾಕ್ ಉಂಟಾಗಿದೆ, ಏಕೆಂದರೆ ಅಲ್ಲಿ ಮಾರ್ಕ್ ಮಾಡಿರುವುದರಿಂದ ಮತದಾನಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಹಲವರು ಮತದಾನದಿಂದ ವಂಚಿತರಾಗಿದ್ದಾರೆ.
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಬ್ಯಾಂಕ್ ಲೋನ್ ಪಡೆಯೋದು ಹೇಗೆ ಗೊತ್ತಾ; ಇಲ್ಲಿದೆ ಟಿಪ್ಸ್
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಮತದಾನದಿಂದ ವಂಚಿತರಾಗಿದವರ ಒತ್ತಾಯವಾಗಿದೆ.
ಮೂಡಿಗೆರೆ: ಮತದಾನದಿಂದ ವಂಚಿತರಾದ ಖಾಸಗಿ ವಾಹನ ಚಾಲಕರು
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಈ ಬಾರಿಯೂ ಖಾಸಗಿ ವಾಹನಗಳ ಚಾಲಕರಿಗೆ ಮತದಾನದಿಂದ ಹೊರಗುಳಿಯುವಂತೆ ಮಾಡಲಾಗಿದ್ದು, ಚಾಲಕರು, ಸಾರ್ವಜನಿಕರು ಚುನಾವಣಾ ಆಯೋಗದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್
ಪ್ರತಿ ಚುನಾವಣೆಯಲ್ಲಿಯೂ ಖಾಸಗಿ ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವ ಆಯೋಗದ ಕ್ರಮದಿಂದ ಖಾಸಗಿ ವಾಹನಗಳ ಚಾಲಕರು ಮತದಾನ ಮಾಡದೆ, ಹಕ್ಕಿನಿಂದ ವಂಚಿತರಾಗುವಂತಾಗಿದೆ. ತಾಲೂಕು ಗುಡ್ಡಗಾಡು ಪ್ರದೇಶವಾಗಿರುವುದರಿಂದ 40 ಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಅವುಗಳ ಚಾಲಕರು ತಮಗೆ ನಿಯೋಜಿಸಿದ ಮತಗಟ್ಟೆಗೆ ತೆರಳಿ ಅಲ್ಲಿಯೇ ಇರಬೇಕಾಗಿರುವುದರಿಂದ ಮತ ಹಕ್ಕು ಚಲಾಯಿಸಲಾಗದೇ ವಂಚಿತರಾಗುವಂತಾಗಿದೆ.
ಇದನ್ನೂ ಓದಿ: ಮಹಿಳೆಯರಿಗೆ ಹೊಸ ಭಾಗ್ಯ!; ಸಿಗಲಿದೆ ಉಚಿತ ಸೋಲಾರ್ ಸ್ಟವ್; ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ
ಪ್ರತಿ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ನಡೆಯುವ ಹಿಂದಿನ ದಿನ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಿಂದ ಮತಗಟ್ಟೆಗೆ ತೆರಳುವ ಸಿಬ್ಬಂದಿ, ಇವಿಎಂ ಯಂತ್ರಗಳನ್ನು ಕೊಂಡೊಯ್ಯಲು ಜೀಪ್, ತೂಫಾನ್, ಟೆಂಪೊ ಟ್ರಾವೆಲ್ಸ್, ಖಾಸಗಿ ಬಸ್ ಸೇರಿದಂತೆ ನೂರಾರು ವಾಹನಗಳನ್ನು ಆರ್ಟಿಒ ಕಚೇರಿ ಮೂಲಕ ಪಟ್ಟಿ ಪಡೆದು ಚುನಾವಣೆ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತದೆ. ಈ ಚಾಲಕರಿರುವ ಮೂಲ ಸ್ಥಳ ಬಿಟ್ಟು ಹೊರ ತಾಲೂಕು ಹಾಗೂ ಹತ್ತಾರು ಕಿ.ಮೀ ದೂರದಲ್ಲಿರುವ ಮತಗಟ್ಟೆಗೆ ಕಳುಹಿಸುವುದರಿಂದ ನಾವುಗಳು ಯಾರೂ ಕೂಡ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಬಿಡುಗಡೆ ಆಯ್ತು 9ನೇ ಕಂತಿನ ಗೃಹಲಕ್ಷ್ಮಿ ಹಣ; ಈ ಜಿಲ್ಲೆಗಳಿಗೆ ಮೊದಲು ಹಣ ಜಮಾ!; ಇಲ್ಲಿದೆ ನೋಡಿ ಡಿಟೈಲ್ಸ್
ಪ್ರತಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸರ್ಕಾರಿ ನೌಕರರು. ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರು. ವೃದ್ಧರು, ಅಂಗವಿಕಲರಿಗೆ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸುತ್ತಿದೆ. ಒಂದೆಡೆ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಲವು ಬಗೆಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮತ್ತೊಂದೆಡೆ ಖಾಸಗಿ ಚಾಲಕರಿಗೆ ಮತದಾನ ಮಾಡಲು ಅವಕಾಶ ನೀಡದೆ ವಂಚಿಸಲಾಗುತ್ತದೆ. ನಮ್ಮ ಗೋಳು ಕೇಳುವರು ಯಾರೂ ಇಲ್ಲ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ, ಮತದಾನದ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಬೇಕು ಎಂದು ಖಾಸಗಿ ವಾಹನ ಚಾಲಕರು ಆಗ್ರಹಿಸಿದ್ದಾರೆ.












