ಸೊರಬ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಚಂದ್ರಗುತ್ತಿ ಹೋಬಳಿ ಕುಂಟಗಳಲೆ (ಶಿಂಡ್ಲಿ) ಭಾಗದ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ.
ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂಬ ಶಂಕೆ ಇದ್ದು, ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ. ಈ ಭಾಗದಲ್ಲಿ ಈ ಹಿಂದೆ ಕಾಡುಕೋಣ, ಕಡವೆ, ಜಿಂಕೆಗಳ ಸಾವು ಸಂಭವಿಸಿತ್ತು. ಎಲ್ಲವನ್ನೂ ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾಡು ಪ್ರಾಣಿಗಳನ್ನು ಕೊಂದು ಮಾರಾಟ ಮಾಡುವ ಜಾಲವೊಂದು ಈ ಭಾಗದಲ್ಲಿದ್ದು, ಅರಣ್ಯ ಇಲಾಖೆಯವರಿಗೆ ತಿಳಿದಿದ್ದರೂ ಕ್ರಮವಿಲ್ಲದಾಗಿದೆ. ‘ಪ್ರಾಣಿ ಹತ್ಯೆಗೆ ಕಡಿವಾಣ ಇಲ್ಲವೇ’ ಎಂಬುದು ಸ್ಥಳೀಯರು ಪ್ರಶ್ನಿಸಿದ್ದಾರೆ.














