ವನ್ಯ ಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರು ಶಾಖಾದ್ರಿ ಬಂಧನ ಯಾಕಿಲ್ಲ?: ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಪ್ರಶ್ನೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹುಲಿ ಉಗುರು ಪ್ರಕರಣದಲ್ಲಿ ವರ್ತೂರ್ ಸಂತೋಷ್ ಬಂಧನವಾಗುತ್ತಿದ್ದಂತೆ, ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಸ್ವಾಮೀಜಿ, ಸೆಲೆಬ್ರಿಟಿ, ರಾಜಕಾರಣಿಗಳು ಧರಿಸಿರುವ ಬಗ್ಗೆ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರಂತೆ ಹುಲಿ ಉಗುರು ಹೊಂದಿದ್ದ ಅರೋಪದಲ್ಲಿ ಇಬ್ಬರು ಅರ್ಚಕರನ್ನು ಬಂಧಿಸಿದ್ದರು. ಸದ್ಯ ನಿನ್ನೆ ಇಬ್ಬರು ಅರ್ಚಕರಿಗೂ ಷರತ್ತ ಬದ್ಧ ಜಾಮೀನು ನೀಡಲಾಗಿದೆ. ಆದರೆ ದತ್ತಪೀಠದ ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗಿದ್ದರು ಕೂಡ ಬಂಧನ ಯಾಕೆ ಆಗಿಲ್ಲ ಎಂದು ಶ್ರೀರಾಮಸೇನೆ ಪ್ರಶ್ನೆ ಮಾಡಿದೆ.

 

ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ, 15ನೇ ಕಂತಿನ ಹಣ ಈ ದಿನ ಬರಲಿದೆ; ಅರ್ಜಿ ಸಲ್ಲಿಸುವುದು ಹೇಗೆ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

ಹೌದು, ದತ್ತಪೀಠದ ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗಿ ಚಿಕ್ಕಮಗಳೂರು ಅರಣ್ಯ ವಲಯ ಅಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ ಆದರೂ ಶಾಖಾದ್ರಿಯನ್ನು ಬಂಧನ ಮಾಡದೇ ಇರುವುದಕ್ಕೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಿ ಉಗುರು ಧರಿಸಿದ್ದ ಆರೋಪದಡಿ ಡಿ.ಆರ್.ಎಫ್.ಓ ಅಮಾನತ್ತಾಗಿ ಬಂಧನವಾಗಿದ್ದಾರೆ. ಇಬ್ಬರು ಅರ್ಚಕರನ್ನು ಬಂಧಿಸಿದ್ದರು ಎಲ್ಲರಿಗೂ ಒಂದೊಂದು ರೀತಿಯ ಶಿಕ್ಷೆಯಾಗಿದೆ. ವನ್ಯ ಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರು ಶಾಖಾದ್ರಿ ಬಂಧನ ಯಾಕಿಲ್ಲ ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಅರಣ್ಯ ಇಲಾಖೆಗೆ ಪ್ರಶ್ನಿಸಿದ್ದಾರೆ. ಶಾಖಾದ್ರಿಯನ್ನ ಬಂಧಿಸಿ ಪುರಾತನ ಕಾಲದಿಂದಲೂ ಇದ್ದ ಹುಲಿ ಚರ್ಮದ ಬಗ್ಗೆ ಮಾಹಿತಿ ಜೊತೆಗೆ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.

 

ಚಿರತೆ ಹಾಗೂ ಜಿಂಕೆ ಚರ್ಮ ಸಿಕ್ಕಿದ್ದರೂ ಕೂಡ ಮುಸ್ಲಿಂ ಧರ್ಮಗುರುವಿಗೆ ಯಾಕೆ ಶಿಕ್ಷೆ ಇಲ್ಲ ಅರಣ್ಯ ಇಲಾಖೆ ಒಬ್ಬರಿಗೊಂದು, ಮತ್ತೊಬ್ಬರಿಗೊಂದು ಕಾನೂನಾ ಎಂಬ ಪ್ರಶ್ನೆ ಮೂಡಿದೆ.

Balehonnur | ಕಾಂಬೋಡಿಯಾ ದೇಶದಲ್ಲಿ ಕೆಲಸಕ್ಕೆ ತೆರಳಿದ ಬಾಳೆಹೊನ್ನೂರು ಯುವಕ ಮಾಲೀಕರ ಬಳಿ ಬಂಧಿ

 

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ವಿದೇಶಕ್ಕೆ ಕೆಲಸಕ್ಕೆ ಹೋದ ಯುವಕನೊಬ್ಬ ಬ್ರೋಕರ್‌ಗಳಿಂದ ಮೋಸ ಹೋಗಿ ಮಾಲೀಕರ ಬಳಿ ಸಿಲುಕಿಕೊಂಡು ಸ್ವದೇಶಕ್ಕೆ ವಾಪಾಸ್ ಬರಲಾಗದೆ ಸಿಲುಕಿಕೊಂಡಿರುವ ಘಟನೆ ನಡೆದಿದೆ.

ಬಾಳೆಹೊನ್ನೂರು ಸಮೀಪದ ಮಾಗುಂಡಿ – ಮಹಲ್ಗೋಡು ಗ್ರಾಮದ ಸುರೇಶ್, ಪ್ರೇಮಾ ದಂಪತಿಗಳ ಮೊದಲ ಪುತ್ರ ಅಶೋಕ್ (26) ವಿದೇಶದಲ್ಲಿ ಸಿಲುಕಿಕೊಂಡ ಯುವಕನಾಗಿದ್ದಾನೆ. ಈತನಿಗೆ ಡಾಟಾ ಎಂಟ್ರಿ ಆಪರೇಟರ್ ಕೆಲಸ ಕೊಡಿಸುವುದಾಗಿ ಎನ್.ಆರ್. ಪುರ ಮೂಲದ ಭರತ್ ಮತ್ತು ನಿಕ್ಷೇಪ್ ಎಂಬುವವರು ನಂಬಿಸಿ ಕಾಂಬೋಡಿಯಾಕ್ಕೆ ಕರೆದುಕೊಂಡು ಹೋಗಿದ್ದಾರೆ. ಕೆಲಸಕ್ಕೆ ಸೇರ್ಪಡೆಗೊಂಡ ಬಳಿಕ ಯುವಕ ಅಶೋಕ್‌ಗೆ ಇದು ವಂಚನೆ ಮಾಡುವ ಜಾಲವಾಗಿದ್ದು, ಇಲ್ಲಿಂದ ವಿವಿಧ ಜನರ ಮೊಬೈಲ್‌ಗೆ ಕರೆ, ಮೆಸೇಜ್ ಮಾಡಿ ಹಣ ಲಪಟಾಯಿಸುವ ದಂಧೆ ಎಂದು ತಿಳಿದಿದೆ. ಆದರೆ ಯುವಕ ಅಶೋಕ್ ನಾನು ಈ ಕೆಲಸವನ್ನು ಮಾಡುವುದಿಲ್ಲ. ವಾಪಾಸ್ ಭಾರತಕ್ಕೆ ತೆರಳುತ್ತೇನೆ ಎಂದಾಗ ಅದರ ಮಾಲೀಕ ಯುವಕನಿಗೆ ವಿಚಿತ್ರ ಶಿಕ್ಷೆ ನೀಡಿ ಬೆದರಿಸುತ್ತಾ ಆತನಿಂದ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಂಡಿದ್ದಾನೆ.

 

ಡಾಟಾ ಎಂಟ್ರಿ ಆಪರೇಟರ್ ಕೆಲಸ, ಹೆಚ್ಚು ಹಣದ ಆಸೆ ತೋರಿಸಿ ನನ್ನ ಮಗನನ್ನು ಭರತ್, ನಿಕ್ಷೇಪ್ ಕರೆದೊಯ್ದು ಕಾಂಬೋಡಿಯದಲ್ಲಿ ಬೇರೆಯವರಿಂದ ಹಣ ಪಡೆದು ನನ್ನ ಮಗನನ್ನು ವಂಚಕರಿಗೆ ಮಾರಾಟ ಮಾಡಿದ್ದಾರೆ. ಕೂಡಲೇ ಈ ಇಬ್ಬರ ಕುಟುಂಬಸ್ಥರನ್ನು ವಿಚಾರಣೆ ನಡೆಸಿದಲ್ಲಿ ನನ್ನ ಮಗನನ್ನು ವಾಪಾಸ್ ಕರೆತರಲು ಸಾಧ್ಯವಿದೆ. ಇಲ್ಲದಿದ್ದರೆ ಅವನ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ. ಸರ್ಕಾರ ನನ್ನ ಮಗನನ್ನು ರಕ್ಷಣೆ ಮಾಡಿಕೊಡಬೇಕು – ಸುರೇಶ್, ಯುವಕ ಅಶೋಕ್ ತಂದೆ.

ಕಳೆದ ಒಂದು ವಾರದಿಂದ ಯುವಕನನ್ನು ಬಲವಂತವಾಗಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ, ನೀನು ಕೆಲಸ ಬಿಟ್ಟು ವಾಪಾಸ್ ಊರಿಗೆ ತೆರಳಬೇಕಾದರೆ ರೂ. 3 ಲಕ್ಷ ಹಣ ನೀಡಬೇಕು. ಇಲ್ಲದಿದ್ದಲ್ಲಿ ನಿನ್ನನ್ನು ಎರಡು ದಿನದಲ್ಲಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅದಲ್ಲದೇ ಯುವಕನಿಂದ ಕುಟುಂಬಸ್ಥರಿಗೆ ಕರೆ ಮಾಡಿಸಿ ಹಣ ಕಳುಹಿಸಲು ಹೇಳುವಂತೆ ಒತ್ತಾಯಿಸಿದ್ದಾರೆ.

ಶನಿವಾರ ಯುವಕನ ಪೋಷಕರು ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಬಾಳೆಹೊನ್ನೂರು ಠಾಣೆಗೆ ಮನವಿ ಸಲ್ಲಿಸಿ ಅಶೋಕ್‌ನನ್ನು ಕಾಂಬೋಡಿಯಾಕ್ಕೆ ಕರೆದುಕೊಂಡು ಹೋದ ನಿಕ್ಷೇಪ್, ಭರತ್ ಪೋಷಕರನ್ನು ಠಾಣೆಗೆ ಕರೆಯಿಸಿ ಅವರನ್ನು ವಿಚಾರಣೆ ಮಾಡಿ ಅಶೋಕ್‌ನನ್ನು ವಾಪಾಸ್ ಕರೆಯಿಸುವ ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಒಟ್ಟಾರೆಯಾಗಿ ಕೆಲಸ ಆಸೆಗಾಗಿ ತೆರಳಿದ ಗ್ರಾಮೀಣ ಯುವಕ ವಂಚನೆ ಜಾಲಕ್ಕೆ ಬಲಿಯಾಗಿ ತೊಂದರೆಗೆ ಸಿಲುಕಿದ್ದಾನೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.