ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನರಸೀಪುರ ಗ್ರಾಮದ ದಿವಾಕರ್ ಮತ್ತು ಡಿ. ಸುಮಾ ಅವರ 5 ವರ್ಷದ ಮಗು ಶಶಿ (ಅಭಿನಂದನ್) ಕಳೆದ 4 ದಿನದ ಹಿಂದೆ ರಕ್ತವಾಂತಿ ಮತ್ತು ಇನ್ನಿತರ ಅನಾರೋಗ್ಯ ಕಾರಣದಿಂದಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತಿದ್ದು ಇದೀಗ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ; ಮಹಿಳಾ ದಿನಾಚರಣೆ ದಿನ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್; LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ

ಪ್ರತಿದಿನ 40 ರಿಂದ 50 ಸಾವಿರ ಆಸ್ಪತ್ರೆಯ ಬಿಲ್ ಬರುತ್ತಿದ್ದು, ಮಗುವಿನ ಚಿಕಿತ್ಸೆಗೆ ಸುಮಾರು 4 ರಿಂದ 5 ಲಕ್ಷ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಬಡತನ ಮಧ್ಯೆ ಜೀವಿಸುವ ಇವರ ಬದುಕು ದುಸ್ಥಿರವಾಗಿದ್ದು, ದಿಕ್ಕೇ ತೋಚದಂತಾಗಿದೆ. ಇದರಿಂದ ಮಗನ ಜೀವ ಉಳಿಸಿಕೊಳ್ಳಲು ಪೋಷಕರು ನೆರವಿನ ಹಸ್ತಕ್ಕೆ ಕೋರಿದ್ದಾರೆ.
ಪೋಷಕರ ವಿಳಾಸ:
NAME: CHANDAN B C
A/C NO: 5362500100685801
IFSC CODE: KARB0000536
KARNATAKA BANK, NARVE BRANCH
ಮೂಡಿಗೆರೆ: KSRTC ಬಸ್ ನಲ್ಲಿ ಬ್ರೇಕ್ ಫೇಲ್ : ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬ್ರೆಕ್ ಫೈಲ್ ಆಗಿ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.
ಇದನ್ನೂ ಓದಿ; ಮಹಿಳೆಯರಿಗೆ 15,000 ಸಿಗುವ ಮತ್ತೊಂದು ಬಂಪರ್ ಯೋಜನೆ!; ಇಲ್ಲಿದೆ ಮಾಹಿತಿ
ಚಿಕ್ಕಮಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್, ಚಾರ್ಮಾಡಿ ಘಾಟ್ ನಲ್ಲಿ ಬ್ರೆಕ್ ಫೈಲ್ ಆಗಿದೆ. ತಕ್ಷಣವೇ ಎಚ್ಚೆತ್ತ ಬಸ್ ಚಾಲಕ ಡಿವೈಡರ್ ಗೆ ಡಿಕ್ಕಿ ಹೊಡೆದು ಬಸ್ ನಿಲ್ಲಿಸಿದ್ದಾರೆ. ಇದರಿಂದಾಗಿ ಬಸ್ಸಿನಲ್ಲಿದ್ದ 70 ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ; ಕೊನೆಗೂ ಅಂತ್ಯ ಕಂಡ ಶೃಂಗೇರಿಯ ಪೋಕ್ಸೋ ಪ್ರಕರಣ; ಬಾಲಕಿಯ ತಾಯಿ ಹಾಗೂ ಮೂವರು ಕಾಮಾಂಧರು ಫಿಕ್ಸ್ : 49 ಆರೋಪಿಗಳಿಗೆ ರಿಲೀಫ್
ಇನ್ನು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಸಂತೋಷ್ ಅವರ ಸಮಯ ಪ್ರಜ್ಞೆಗೆ ಬಣಕಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಿದ್ದಿಕ್ ಹಾಗೂ ಬಸ್ಸಿನ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.












