ಮಂಗನ ಕಾಯಿಲೆ | ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ದಾಖಲು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡು ಚಿಕ್ಕಮಗಳೂರಿನಲ್ಲಿ 55 ವರ್ಷದ ಮಹಿಳೆಗೆ ಮಂಗನ ಕಾಯಿಲೆ ಸೋಂಕು ದೃಢಪಟ್ಟಿದ್ದು, ಆ ಮೂಲಕ ಮಂಗನ ಕಾಯಿಲೆ ಪ್ರಕರಣ ಇದೀಗ 9 ಕ್ಕೆ ಏರಿಕೆಯಾಗಿದೆ.

 

ಇದನ್ನೂ ಓದಿ; ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ ಪೊಲೀಸ್ ಇಲಾಖೆ; ನೀವು ಪರಿಶೀಲಿಸಬೇಕಾದ ಅಂಶಗಳೇನು, ಇಲ್ಲಿದೆ ಡೀಟೇಲ್ಸ್

ನಾಲ್ವರು ಗುಣಮುಖ, ಒಬ್ಬ ಸಾವು:
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆಯ ವೃದ್ದ ಒಬ್ಬ ಮಂಗನ ಕಾಯಿಲೆಗೆ ಬಲಿಯಾಗಿದ್ದು, ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ನಾಲ್ಕು ಸಕ್ರಿಯ ಪ್ರಕರಣಗಳಿಗೆ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ; ರಾಜ್ಯದಲ್ಲಿ ಕೋಳಿ ಅಂಕ ಕಡಿವಾಣಕ್ಕೆ ಸಜ್ಜು

ಕೊಪ್ಪದ ಒ.ಎಲ್.ವಿ ಎಸ್ಟೇಟ್ ಭಾಗದಲ್ಲಿ ಪತ್ತೆ:
ಜಿಲ್ಲೆಯಲ್ಲಿ ಪತ್ತೆಯಾದ ಮಂಗನ ಕಾಯಿಲೆ ಪ್ರಕರಣಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಕೊಪ್ಪ ತಾಲೂಕಿನ ಒಎಲ್‌ವಿ ಎಸ್ಟೇಟ್ ಭಾಗದಲ್ಲಿ ಪತ್ತೆಯಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಫ್ ಡಿ ವಾರ್ಡ್ ತೆರೆದಿದೆ. ಅರಣ್ಯದಲ್ಲಿ ಕೆಎಫ್ ಡಿ ಸೋಂಕು ಹರಡದಂತೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಔಷಧಿ ವಿತರಣೆ ಮಾಡುತ್ತಿದ್ದಾರೆ.

 

ಚಿಕ್ಕಮಗಳೂರು: ಶಾಸಕ ಎಚ್.ಡಿ ತಮ್ಮಯ್ಯ ಸಹಿಯ ನಕಲಿ ಸೀಲ್ ಬಳಸಿ ಅಕ್ರಮ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಶಾಸಕ ಎಚ್.ಡಿ ತಮ್ಮಯ್ಯ ಸಹಿಯ ನಕಲಿ ಸೀಲ್ ಬಳಸಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

 

ಇದನ್ನೂ ಓದಿ; SC, ST ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಿಕ್ಕಮಗಳೂರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಪ್ರಥಮ ದರ್ಜೆ ಸಹಾಯಕ ರವಿ, ಶಾಸಕ ಎಚ್.ಡಿ ತಮ್ಮಯ್ಯರ ಸಹಿಯ ನಕಲಿ ಸೀಲ್ ಬಳಸಿ ಅಕ್ರಮಗಳನ್ನು ಎಸಗಿದ್ದಾರೆ ಎಂದು ಬೊಗಸೆ ಗ್ರಾ.ಪ ಸದಸ್ಯ ವಿನೋದ್ ಆರೋಪಿಸಿದ್ದಾರೆ.

ಇದನ್ನೂ ಓದಿ; ಅನರ್ಹರ ಜಮೀನು ವಶಕ್ಕೆ ಕಂದಾಯ ಇಲಾಖೆ ಸಜ್ಜು; ಒಂದು ತಿಂಗಳೊಳಗೆ ಅರ್ಜಿ ತಿರಸ್ಕೃತ

ಬೆಂಗಳೂರಿನ ಎಂ.ಎಸ್ ಬಿಲ್ಡಿಂಗ್ ಗೆ ಕಳುಹಿಸಿ ಸಮಾಜ ಕಲ್ಯಾಣ ಇಲಾಖೆ ಅನುದಾನ ಪಡೆಯಲಾಗಿದೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಳವಡಿಸಬೇಕಿದ್ದ ಸಿಸಿ ಟಿವಿ ಕ್ಯಾಮರಗಳನ್ನು ಮನೆಗೆ ತೆಗೆದುಕೊಂಡು ಹೋದ ಆರೋಪ, ದುರಸ್ತಿ ಹಾಸ್ಟೇಲ್ ಕಟ್ಟಡಗಳ ಉಪಯುಕ್ತ ಅವಶೇಷಗಳನ್ನು ಮಾರಿಕೊಳ್ಳಲಾಗಿದೆ ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್ ಎಫ್.ಡಿ ಎ ರವಿ ಅವರ ಅಮಾನತ್ತಿಗೆ ಶಿಫಾರಸು ಮಾಡಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.