ಶೃಂಗೇರಿ ಪಟ್ಟಣದಲ್ಲಿರುವ ಜ್ಞಾನಭಾರತಿ ವಿದ್ಯಾಕೇಂದ್ರದ ಶಾಲಾ ದೀಪೋತ್ಸವ ಕಾರ್ಯಕ್ರಮವು ಭಾನುವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಸುಸಂದರ್ಭದಲ್ಲಿ ಶಾಲಾ ಆವರಣವು ನೂರಾರು ಹಣತೆಗಳ ಬೆಳಕಿನಿಂದ ಕಂಗೊಳಿಸಿ, ದೀಪಾವಳಿಯ ಹಬ್ಬದ ಸೊಬಗನ್ನು ಪ್ರತಿಬಿಂಬಿಸಿತು.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್ ರದ್ದು; ನಿಮ್ಮ ತಾಲೂಕಿನ ರೇಷನ್ ಕಾರ್ಡ್ ಡಿಲೀಟ್ ಆದ ಡಿಟೈಲ್ಸ್ ಇಲ್ಲಿದೆʼ

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿದುಷಿ ಶ್ರೀಮತಿ ಸಾವಿತ್ರಿ ಪ್ರಭಾಕರ್ ಹಾಗೂ ಖ್ಯಾತ ಮೃದಂಗ ವಾದಕರಾದ ವಿದ್ವಾನ್ ಶ್ರೀ ಪ್ರಭಾಕರ್ ಅವರು ಆಗಮಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಜ್ಞಾನಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ತಬಲ, ಮೃದಂಗ ಮತ್ತು ಸಿತಾರ್ ವಾದನದ ಮೂಲಕ ಸಭಿಕರ ಮನ ಗೆದ್ದರು. ಇದಲ್ಲದೆ ವಿದ್ಯಾರ್ಥಿಗಳ ಭಕ್ತಿಪೂರ್ವಕ ಭಜನೆ ಹಾಗೂ ಮನಮುಟ್ಟುವ ಭರತನಾಟ್ಯ ಪ್ರದರ್ಶನಗಳು ಕಾರ್ಯಕ್ರಮದ ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸಿತು.
ಇದನ್ನೂ ಓದಿ: ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುತ್ತಾ?; FSSAI ವರದಿ ಇಲ್ಲಿದೆ ನೋಡಿ
ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಡಗರ-ಸಂಭ್ರಮದಿಂದ ಪಾಲ್ಗೊಂಡು, ನೂರಾರು ದೀಪಗಳ ಬೆಳಕಿನಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ಸ್ಮರಣೀಯವಾಗಿಸಿದರು. ಈ ದೀಪೋತ್ಸವ ಕಾರ್ಯಕ್ರಮವು ಶಾಲಾ ವಾತಾವರಣದಲ್ಲಿ ಸಂಸ್ಕೃತಿ, ಭಕ್ತಿ ಮತ್ತು ಕಲೆಯ ಸಮನ್ವಯವನ್ನು ಮೂಡಿಸಿತು.












