ಜಯಪುರ: ಅನ್ನ ಹಾಕಿದ ಮನೆ ಮಾಲೀಕನ ಮನೆಗೆ ಕನ್ನ ಹಾಕಿದ ಖದೀಮ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಅನ್ನ ಹಾಕಿದ ಮನೆ ಮಾಲೀಕನ ಮನೆಗೆ ಕನ್ನ ಹಾಕಿದ ಕಳ್ಳನೊಬ್ಬ ಮಾಲಿಕನ ಮನೆಯ ಬೀರುವಿನಲ್ಲಿದ್ದ ಚಿನ್ನದ ಬ್ರೇಸ್ ಲೈಟ್ ಕಳವು ಮಾಡಿ, ಬಾಳೆಹೊನ್ನೂರು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ.


ಇದನ್ನೂ ಓದಿ; Bigg Boss Kannada:ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್!


ಸಾಗರ ತಾಲೂಕಿನ ಕುಂಸಿ ಮೂಲದ ರವಿ ಬಿನ್ ತಿಮ್ಮಪ್ಪ ಎಂಬಾತ ಚಿನ್ನದ ಬ್ರೇಸ್ ಲೈಟ್ ಕಳವು ಮಾಡಿರುವ ಆರೋಪಿಯಾಗಿದ್ದಾನೆ. ಹೇರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿಬ್ಳಿಯ ತಿಮ್ಮಪ್ಪಗೌಡ ಎಂಬುವವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಆರೋಪಿ ರವಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಮನೆಯಲ್ಲಿದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಬ್ರೇಸ್ ಲೈಟ್ ಕಳವು ಮಾಡಿ ಬಚ್ಚಿಟ್ಟಿದ್ದ. ಆರೋಪಿಯ ನಡತೆಯಿಂದ ಅನುಮಾನಗೊಂಡ ಮಾಲಿಕ ತಿಮ್ಮಪ್ಪಗೌಡ ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದ ಬಾಳೆಹೊನ್ನೂರು ಪಿಎಸ್ಐ ರವೀಶ್ ಹಾಗೂ ಕ್ರೈಂ ಎಸ್ಐ ಅಭಿಷೇಕ್ ಆರೋಪಿಯನ್ನು ಬಂಧಿಸಿದ್ದಲ್ಲದೆ. ತಡರಾತ್ರಿ 2 ಘಂಟೆಯವರೆಗೆ ವಿಚಾರಣೆ ನಡೆಸಿ ಮಾಲಿಕರ ಮನೆಯ ಹಿಂಬಾಗದ ಕೊಟ್ಟಿಗೆಯ ಮಣ್ಣಿನ ಇಟ್ಟಿಗೆಗಳ ನಡುವೆ ಆರೋಪಿ ರವಿ ಬಚ್ಚಿಟ್ಟಿದ್ದ 8 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ಅನ್ನು ವಶ ಪಡಿಸಿಕೊಂಡಿದ್ದಾರೆ.


ಇದನ್ನೂ ಓದಿ; ಮುಡಾ ಕೇಸ್: ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಜಾ


ಆರೋಪಿ ರವಿ ತಡ ರಾತ್ರಿಯವರೆಗೂ ಕಳ್ಳತನ ಮಾಡಿರುವುದನ್ನು ಮುಚ್ಚಿಟ್ಟು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಪ್ರಯತ್ನಿಸಿದ್ದರೂ, ಮದ್ಯ ರಾತ್ರಿ 2 ಘಂಟೆಯವರೆಗೂ ಚಲಬಿಡದೆ ವಿಚಾರಣೆ ನಡೆಸಿದ ಪಿಎಸ್ಐ ರವೀಶ್, ಕ್ರೈಂ ಎಸ್ಐ ಅಭಿಷೇಕ್ ಹಾಗೂ ಸಿಬ್ಬಂಧಿ ಶಂಕರ್ ಹಾಗೂ ಇತರ ಸಿಬ್ಬಂಧಿಗಳಿದ್ದ ತಂಡ ಕಳ್ಳತನ ನಡೆದ 10 ಘಂಟೆಯೊಳಗೆ ಆರೋಪಿಯನ್ನು ಕದ್ದ ಮಾಲಿನ ಸಮೇತ ಹೆಡೆ ಮುರಿ ಕಟ್ಟಿದ್ದು, ಬಾಳೆಹೊನ್ನೂರು ಪೊಲೀಸರ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.


ಇದನ್ನೂ ಓದಿ; ರಾಜ್ಯದಲ್ಲಿ ಒನ್ ನೇಷನ್ ಒನ್ ಕಾರ್ಡ್ ಯೋಜನೆ ಜಾರಿ; ಏನಿದು? ಇಲ್ಲಿದೆ ನೋಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.