ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜಿ. ಟಿ ಕುಮಾರ್ (48) ಕಾಣೆಯಾಗಿದ್ದು ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ತಿಳಿಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ

19.08.2025 ರಂದು ಗದ್ದೆ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವರು ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಮನೆಯಿಂದ ಹೋಗುವಾಗ ಕಾಫಿ ಕಲ್ಲರ್ ಗೆರೆಯುಳ್ಳ ಶರ್ಟ್, ಸಿಮೆಂಟ್ ಕಲ್ಲರ್ ಚಡ್ಡಿ ಧರಿಸಿರುತ್ತಾರೆ. ಇವರು ಕನ್ನಡ ಭಾಷೆ ಬಲ್ಲವರಾಗಿದ್ದು, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಮೀಸೆ ಬಿಟ್ಟಿರುತ್ತಾರೆ. ಹಾಗೂ ಸುಮಾರು 5.8 ಇಂಚು ಎತ್ತರ ಹೊಂದಿದ್ದಾರೆ.

ಈ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಜಯಪುರ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ.
ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ












