ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪಟ್ಟದೂರು ಗ್ರಾಮದ ಸತೀಶ್ (47) ಎಂಬುವವರು ಕಾಣೆಯಾಗಿದ್ದು ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ತಿಳಿಸುವಂತೆ ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದೆ.
ಇದನ್ನೂ ಓದಿ; ನಿಮ್ಮ ಬಳಿ ಪಿಂಕ್ ನೋಟುಗಳಿದ್ದರೆ ಬದಲಿಸಿಕೊಳ್ಳಿ; 2000 ನೋಟುಗಳ ವಿನಿಮಯ ಅವಧಿ ಮತ್ತೆ ವಿಸ್ತರಣೆ

ದಿನಾಂಕ 08-08-2023ರಂದು ಮನೆಯಿಂದ ಹೊರಗೆ ಹೋದವರು ಮನೆಗೆ ಬಾರದೇ ಕಾಣೆಯಾಗಿದ್ದಾರೆ. ನೋಡಲು ಕೋಲುಮುಖ ಸಾದಾರಣ ಮೈಕಟ್ಟು ಎಣ್ಣೆ ಮೈಗೆಂಪು ಹೊಂದಿದ್ದಾರೆ. 5.5 ಅಡಿ ಎತ್ತರ ಹೊಂದಿದ್ದು, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.
ಕಾಣೆಯಾದಾಗ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಹಸಿರು ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ. ಈ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬಣಕಲ್ ಪೊಲೀಸ್ ಠಾಣೆ 9480805151,08263232249 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.
ವರದಿ- ತನು ಕೊಟ್ಟಿಗೆಹಾರ
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಆಟೋ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಆಟೋವೊಂದು ಪಲ್ಟಿ ಹೊಡೆದು ಕಂದಕಕ್ಕೆ ಬಿದ್ದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಕೊಟ್ಟಿಗೆಹಾರದ ಅತ್ತಿಗೆರೆ ಸಮೀಪ ನಡೆದಿದ್ದು, ಇಬ್ಬರಿಗೆ ತೀವ್ರ ಪೆಟ್ಟಾಗಿದೆ.
ಜಾವಾಗಲ್ ನಿಂದ ಬೆಳ್ತಂಗಡಿಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಕೊಟ್ಟಿಗೆಹಾರ ದ ಅತ್ತಿಗೆರೆ ಸಮೀಪ ಈ ಅಪಘಾತ ನಡೆದಿದೆ. ಆಟೋದಲಿದ್ದ ಇಬ್ಬರಿಗೂ ತೀವ್ರ ಪೆಟ್ಟಾಗಿದ್ದು, ಬೆಳ್ತಂಗಡಿ ತಾಲೂಕಿನ ಆಟೋ ಚಾಲಕ ನಜೀರ್‌ನ ಸ್ಥಿತಿ ಗಂಭೀರವಾಗಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರು: ಕಾವೇರಿ ವಿವಾದ; ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನಟ ನೆನಪಿರಲಿ ಪ್ರೇಮ್
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾವೇರಿಗೆ ನಾವು ಪ್ರಾಣ ಕೊಡೋಕೆ ಸಿದ್ಧ’ ಅಂತ ಅನೇಕರ ಬಾಯಲ್ಲಿ ಕೇಳುತ್ತಿರುತ್ತೇವೆ. ಈಗ ‘ನೆನಪಿರಲಿ’ ಪ್ರೇಮ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ರಕ್ತದಲ್ಲಿ ಪತ್ರ ಬರೆದಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. “ಕಾವೇರಿ, ಕರ್ನಾಟಕಕ್ಕೆ ದಯವಿಟ್ಟು ನ್ಯಾಯ ಕೊಡಿ. ಕಾವೇರಿ ನಮ್ಮದು” ಎಂದು ಅವರು ರಕ್ತದಲ್ಲಿ ಪತ್ರ ಬರೆದಿದ್ದು, ಆ ಪತ್ರದಲ್ಲಿ ಅವರ ಹಸ್ತದ ಅಚ್ಚನ್ನು ರಕ್ತದಲ್ಲಿ ನಮೂದಿಸಿದ್ದಾರೆ.












