ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಕಣ್ಣು ಮಾನವನ ಅತ್ಯಮೂಲ್ಯ ಅವಯವಗಳಲ್ಲಿ ಒಂದಾಗಿದ್ದು, ಕಣ್ಣಿನ ರಕ್ಷಣೆಗೆ ನಮ್ಮ ದಿನಚರಿಯಲ್ಲಿ ಕೆಲವು ರೂಡಿಗಳನ್ನು ಮಾಡಿಕೊಳ್ಳಬೇಕು ಎಂದು ಎಂದು ಸ್ಪಂದನ ಸ್ವಯಂ ಸೇವಾ ಸಂಸ್ಥೆಯ ಸದಸ್ಯೆ, ಪ್ರದೀಪಿನಿ ಆಯುರ್ವೇದಾಲಯದ ವೈದ್ಯೆ ಡಾ. ಯಶಸ್ವಿನಿ ಕೃಷ್ಣ ಪ್ರಸಾದ್ ಹೇಳಿದರು.
ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಂದಿಲ್ವಾ?; ಈ ದಾಖಲೆಗಳನ್ನು ಇವರಿಗೆ ತಲುಪಿಸಿ; ಇನ್ನು ಕೆಲವೇ ದಿನಗಳು ಮಾತ್ರ ಬಾಕಿ

ಜಯಪುರದಲ್ಲಿ ನಡೆದ ನವಚೈತ್ರ ಆರೋಗ್ಯ ಕಾಳಜಿ 152 ನೇ ಶಿಬಿರದ ಅಂಗವಾಗಿ, ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಮೇಗುಂದಾ ಹೋಬಳಿ ಪತ್ರಕರ್ತರ ಸಂಘ, ಚಂದ್ರಗಿರಿ ಕಲಾ ಪ್ರತಿಷ್ಠಾನ (ರಿ.) ಸ್ವಾಗತ್ ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಜಯಪುರ ಗ್ರಾಮ ಪಂಚಾಯಿತಿ ಹಾಗೂ ಇವರ ಸಹಯೋಗದಲ್ಲಿ ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆ, ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ಮಾನವನ ದೇಹ ರೂಪಿಸಿರುವ ಭಗವಂತ ದೇಹದಲ್ಲಿ ಕಣ್ಣು ಎಂಬ ವಿಶಿಷ್ಟ ಹಾಗೂ ಸೂಕ್ಷ್ಮವಾದ ಅಂಗವನ್ನು ರೂಪಿಸಿದ್ದಾನೆ. ಕಣ್ಣಿನ ಆರೈಕೆ ಹಾಗೂ ರಕ್ಷಣೆ ಅತ್ಯಂತ ಮಹತ್ವದ್ದಾಗಿದೆ. ದಿನ ನಿತ್ಯ ಬೆಳಗಿನ ಜಾವ ಕಣ್ಣಿಗೆ ಮನೆಯಲ್ಲಿ ಮಾಡಿದ ಅಂಜನವನ್ನು ಹಚ್ಚುವುದರಿಂದ ಅಥವಾ ಕೇವಲ ತುಪ್ಪವನ್ನು ಅಂಜನದಂತೆ ಹಚ್ಚುವುದರಿಂದ ಕಣ್ಣಿಗೆ ಪೊರೆ ಬಾರದೇ ಇರುವಂತೆ ತಡೆಯಬಹುದು. ವಾರಕ್ಕೆ ಒಮ್ಮೆ ಜೇನುತುಪ್ಪವನ್ನು ಅಂಜನದಂತೆ ಕಣ್ಣಿಗೆ ಹಚ್ಚುವುದರಿಂದ ಪೊರೆ ಉಂಟುಮಾಡುವ ಕಫವನ್ನು ತೆಗೆಯುತ್ತದೆ.

ಇದನ್ನೂ ಓದಿ; ರಾಜೌರಿಯಲ್ಲಿ ಗುಂಡಿನ ಕಾಳಗ; ಕನ್ನಡಿಗ ಯೋಧ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ
ತಲೆ ಸ್ನಾನ ಮಾಡುವಾಗ ತಲೆಗೆ ಬಿಸಿನೀರು ಹಾಕುವುದರಿಂದ ಕಣ್ಣಿನ ಬಲ ಕುಗ್ಗುತ್ತದೆ. ಹಾಗಾಗಿ ತಲೆಗೆ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಲ್ಲೇ ಸ್ನಾನ ಮಾಡಬೇಕು. ನೆಲ್ಲೀಕಾಯಿ, ನುಗ್ಗೇ ಸೊಪ್ಪು, ಅಗಸೇ ಸೊಪ್ಪು -ಹೂವು, ಭೃಂಗರಾಜ ಇತ್ಯಾದಿ ಕಣ್ಣಿನ ಆರೋಗ್ಯ ಹೆಚ್ಚುವಂತಹ ಔಷಧ ಗುಣವುಳ್ಳ ತರಕಾರಿಗಳನ್ನು ಚಟ್ನಿ, ತಂಬುಳಿ, ಗೋಜ್ಜು ಇತ್ಯಾದಿ ಆಹಾರದ ರೀತಿಯಲ್ಲಿ ಸೇವಿಸಿ. ರಾತ್ರಿ ಮಲಗುವ ಮುನ್ನ ಅಂಗಾಲಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಲಗುವುದರಿಂದ ಕಣ್ಣಿನ ಆರೋಗ್ಯ ಹೆಚ್ಚುತ್ತದೆ ಎಂದರು.

ಇನ್ನು ಶಿಬಿರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರ ನೇತ್ರ ತಪಾಸಣೆ ನಡೆಸಲಾಯಿತು. ನಾಲ್ಕು ಜನ ರೋಗಿಗಳನ್ನು ಉಚಿತ ಶಸ್ತ್ರ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಜಯಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಎಲ್ಲಾ ರೋಗಿಗಳ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಪರೀಕ್ಷೆಯನ್ನು ನಡೆಸಲಾಯಿತು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಪಂದನ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್, ಚಂದ್ರಗಿರಿ ಕಲಾ ಪ್ರತಿಷ್ಠಾನದ ಅಧ್ಯಕ್ಷ ದಿನೇಶ್ ಚಂದ್ರಗಿರಿ, ಜಯಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಸಂಪತ್ ಕುಮಾರ್, ನವಚೈತ್ರ ಸಾಂಸ್ಕೃತಿಕ ವೇದಿಕೆಯ ಉಪಾಧ್ಯಕ್ಷ ಸಂತೋಷ್ ಕುಲಾಸೊ, ಕೊಪ್ಪ ತಾಲೂಕು ಪತ್ರಕರ್ತ ಸಂಘದ ಉಪಾಧ್ಯಕ್ಷ ರಂಗಶ್ರೀ ರಮೇಶ್, ಪತ್ರಕರ್ತ ಸಂಘದ ಮೇಗುಂದಾ ಹೋಬಳಿ ಕಚೇರಿ ವ್ಯವಸ್ಥಾಪಕ ಪ್ರದೀಪ್ ಹೆಬ್ಬಾರ್, ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯ ವೈದ್ಯ ಡಾ. ಸಂಯುಕ್, ಸ್ಪಂದನದ ಸದಸ್ಯರುಗಳಾದ ಅರ್ಪಿತ, ಮಮತ, ಮಣಿಕಂಠನ್, ವಿಶ್ವನಾಥ್, ಸುನಿಲ್, ಕಸ್ತೂರ್ಬಾ ಆಸ್ಪತ್ರೆಯ ಸಿಬ್ಬಂದಿಗಳು, ಜಯಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಇದ್ದರು.

ವೀರ ಸಾವರ್ಕರ್ ಬದುಕಿನ ಕಥಾನಕವನ್ನು ಪ್ರಸ್ತುತ ಪಡಿಸುವ “ಕರಿನೀರ ವೀರ” ನಾಟಕ ಪ್ರದರ್ಶನ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜ್ಞಾನಭಾರತೀ ಟ್ರಸ್ಟ್(ರಿ) ಶೃಂಗೇರಿ ಇವರ ಸಹಯೋಗದಲ್ಲಿ ಸಾವರ್ಕರ್ ಪ್ರತಿಷ್ಠಾನ, ಮೈಸೂರು ಇವರು ಪ್ರಸ್ತುತಪಡಿಸುವ ಖ್ಯಾತ ನಿರ್ದೇಶಕರಾದ ಅದ್ದಂಡ ಕಾರ್ಯಪ್ಪನವರ ನಿರ್ದೇಶನದಲ್ಲಿ ಕರಿನೀರ ವೀರ ಎಂಬ ವೀರ ಸಾವರ್ಕರ್ ಅವರ ಬದುಕಿನ ಕಥಾನಕವನ್ನು ಪ್ರಸ್ತುತಪಡಿಸುವ ಅದ್ಬುತ ನಾಟಕವು ಶೃಂಗೇರಿಯ ಡಾ|| ವಿ. ಆರ್ ಗೌರೀಶಂಕರ್ ಸಭಾಂಗಣದಲ್ಲಿ ಇದೇ ಡಿಸೆಂಬರ್ 1ನೇ ತಾರೀಖು ಶುಕ್ರವಾರ ಸಂಜೆ 6 ರಿಂದ 9ರವರಗೂ ಪ್ರದರ್ಶನಗೊಳ್ಳಲಿದೆ ಎಂದು ಆಯೋಜಕರಾದ ಅಭಿರಾಮ್ ಶೃಂಗೇರಿ ಮತ್ತು ಜ್ಞಾನ ಭಾರತೀ ಟ್ರಸ್ಟ್ ಶೃಂಗೇರಿಯ ಹೆಚ್. ಆರ್ ವಿಶ್ವನಾಥ್ ಅವರು ತಿಳಿಸಿದ್ದಾರೆ.
ಈ ಪ್ರದರ್ಶನದ ಪ್ರವೇಶ ದರ ರೂ 100/- ಇರಲಿದ್ದು.. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ:-9483634964, 9481651001 ಇದಕ್ಕೆ ಕರೆ ಮಾಡಬೇಕಾಗಿ ತಿಳಿಸಿದ್ದಾರೆ..
ಹಾಗೆಯೇ ಭಾರತೀ ಜಾಗೃತ ಪ್ರತಿಷ್ಠಾನ (ರಿ.) ನಾದ ಚೈತನ್ಯ (ರಿ.) ಸಂಗೀತ ಗಂಗಾ(ರಿ.), ಚಿಕ್ಕಮಗಳೂರು ಇವರ ವತಿಯಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿಯೂ ದಿನಾಂಕ 03 ಡಿಸೆಂಬರ್ 2023ರ ಭಾನುವಾರ ಸಂಜೆ 6 ಗಂಟೆಗೆ ನಾಟಕ ಪ್ರದರ್ಶನ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.












