ಎನ್.‌ ಆರ್.‌ ಪುರ: ಎಚ್. ಟಿ ರಾಜೇಂದ್ರ ನಿಧನದಿಂದ ಕ್ಷೇತ್ರಕ್ಕೆ ಅಪಾರ ನಷ್ಟ- ಸುಧಾಕರ್ ಎಸ್. ಶೆಟ್ಟಿ ಹೇಳಿಕೆ

ಎನ್.‌ ಆರ್.‌ ಪುರ: (ನ್ಯೂಸ್ ಮಲ್ನಾಡ್ ವರದಿ) ಎಚ್. ಟಿ ರಾಜೇಂದ್ರ ನಿಧನದಿಂದ ಕ್ಷೇತ್ರ ಹಾಗೂ ಜೆಡಿಎಸ್‌ ಪಕ್ಷಕ್ಕೆ ಅಪಾರ ನಷ್ಟವಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಹೇಳಿದರು.


ಇದನ್ನೂ ಓದಿ: 36,000 ಸ್ಕಾಲರ್‌ ಶಿಪ್‌ ನೇರ ವಿದ್ಯಾರ್ಥಿಗಳ ಖಾತೆಗೆ; ಜಸ್ಟ್‌ ಈ ರೀತಿ ಅರ್ಜಿ ಸಲ್ಲಿಸಿ


ತಾಲೂಕು ಜೆಡಿಎಸ್ ಘಟಕದಿಂದ ಎಚ್.ಟಿ. ರಾಜೇಂದ್ರ ಅವರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಶರಣರ ಸೇವೆಯನ್ನು ಮರಣದಲ್ಲಿ ನೋಡು ಎಂಬಂತೆ ಎಚ್. ಟಿ ರಾಜೇಂದ್ರ ಅವರ ಅಂತಿಮಯಾತ್ರೆ ನಡೆಯಿತು. ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್‌ ನೆಲೆಕಳೆದು ಕೊಂಡ ಸಂದರ್ಭದಲ್ಲಿ 2004ರಲ್ಲಿ ಸ್ಪರ್ಧಿಸಿ ಪಕ್ಷಕ್ಕೆ ಭದ್ರನೆಲೆ ಕಲ್ಪಿಸಿದರು. ರಾಜೇಂದ್ರ ಅವರು ಶಾಸಕರಾಗಿದ್ದರೆ ಕ್ಷೇತ್ರದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿತ್ತು. ಈ ರೀತಿ ಜನಪರ ಕಾಳಜಿ ಇರುವವರು ಶಾಸಕರಾಗಿ ಆಯ್ಕೆಯಾಗಿದ್ದರೆ ಅಭಿವೃದ್ಧಿ ಪರ್ವ ಆರಂಭವಾಗುತ್ತಿತ್ತು. ಕ್ಷೇತ್ರದ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಹೊಂದಿದ್ದ ರಾಜಕಾರಣಿಯನ್ನು ಜನರು ಕೈಬಿಟ್ಟರು. ಅವರ ಯೋಚನೆ, ಚಿಂತನೆಗಳಿಂದ 2008ರಲ್ಲಾದರೂ ಅವರು ಶಾಸಕರಾಗಬೇಕಿತ್ತು. ಆದರೆ, ನ್ಯಾಯಯುತವಾಗಿ ಬದುಕುವವರಿಗೆ ಜನರು ಕೈಹಿಡಿಯಲಿಲ್ಲ. ಜೆಡಿಎಸ್‌ ಇರುವವರೆಗೆ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಲಾಗುವುದು ಎಂದು ಹೇಳಿದರು.


ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯ ಕುರಿತು ಮಹತ್ವದ ಕ್ರಮ; ಸರ್ಕಾರದಿಂದ ನಾಲ್ಕು ಹಂತದ ಸಮಿತಿ ರಚನೆ!


ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಮಾತನಾಡಿ, ರಾಜೇಂದ್ರ ಕೇವಲ ವ್ಯಕ್ತಿಯಲ್ಲ, ಅವರು ಶಕ್ತಿಯಾಗಿದ್ದರು. ಶಿಕ್ಷಣ ತಜ್ಞ, ಪ್ರಗತಿಪರ ಕೃಷಿಕ, ಸದಾ ಅಧ್ಯಯನ ಶೀಲ ವ್ಯಕ್ತಿಯಾಗಿದ್ದರು. ರಾಜ್ಯಮಟ್ಟದ ನಾಯಕರಲ್ಲಿರಬೇಕಾದ ಎಲ್ಲಾ ಅರ್ಹತೆ ಅವರಲ್ಲಿತ್ತು. ಶಾಸಕರಾಗ ಬೇಕೆಂಬ ಅವರ ಆಸೆ ಕೊನೆಗೂ ಈಡೇರಲಿಲ್ಲ ಎಂದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.