ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಸಲುವಾಗಿ ಟೊಯೋಟಾ ಕಿರ್ಲೋಸ್ಕರ್ ಕಂಪನಿಯು ಎಸ್ ಡಿಎಂ ಐಟಿಐ (ಸಂಸೆ) ವಿದ್ಯಾರ್ಥಿಗಳಿಗೆ ಕೈಗಾರಿಕೆ ನಿರ್ದಿಷ್ಟ ಕೌಶಲ್ಯ ಮತ್ತು ಜ್ಞಾನವನ್ನು ನೀಡಲು ಮುಂದಾಗಿದ್ದು, ಇದಕ್ಕಾಗಿ ಎಸ್ ಡಿಎಂ ಐಟಿಐ ಸಂಸೆಯೊಂದಿಗೆ ಟೊಯೋಟಾ ಕಿರ್ಲೋಸ್ಕರ್(TKEI) ಒಡಂಬಡಿಕೆ ಮಾಡಿಕೊಂಡಿದೆ.
ಇದನ್ನೂ ಓದಿ: ಪಾನ್ ಕಾರ್ಡ್ ಹೊಂದಿರುವವರ ಗಮನಕ್ಕೆ; ಇಂತಹವರಿಗೆ 10 ಸಾವಿರ ದಂಡ!

ತಾಂತ್ರಿಕ ಶಿಕ್ಷಣವನ್ನು ಪಡೆದು ಸ್ವ-ಉದ್ಯೋಗ ಮಾಡಿ ನಮ್ಮ ಕಾಲ ಮೇಲೆ ನಾವು ನಿಲ್ಲುವುದು ಉತ್ತಮ ಎನ್ನುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ವಿದ್ಯಾರ್ಥಿಗಳ ಮುಖದಲ್ಲಿ ಸಂತೋಷದ ನಗುವನ್ನು ತುಂಬಲು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅವುಗಳಲ್ಲಿ ಸಂಸೆಯಲ್ಲಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯೂ ಒಂದು.
ಎಸ್.ಎಸ್.ಎಲ್.ಸಿ. ಪಾಸ್ ಅಥವಾ ಪ್ರಥಮ/ ದ್ವಿತೀಯ ಪಿ.ಯು.ಸಿ. ಅನುತ್ತೀರ್ಣಗೊಂಡಿದ್ದೇವೆ ಅಥವಾ ಕಡಿಮೆ ಅಂಕ ಬಂದಿದೆ ಮುಂದೇನು? ಎಂಬ ಚಿಂತೆಯಲ್ಲಿರುವ ವಿದ್ಯಾರ್ಥಿಗಳಿಗೆ ಅಥವಾ ಆರ್ಥಿಕವಾಗಿ ಮುಗ್ಗಟ್ಟನ್ನು ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ/ ಹೆತ್ತವರಿಗೆ ಶೇಕಡಾ 100ರಷ್ಟು ಉದ್ಯೋಗದ ಭರವಸೆಯೊಂದಿಗೆ ಮಕ್ಕಳಿಗೆ ಒಳ್ಳೆಯ ಜೀವನ ಕೌಶಲವನ್ನು ಕಲಿಸುವುದರ ಜೊತೆಗೆ ಅನೇಕ ನೊಂದವರ ಪಾಲಿಗೆ ಬೆಳಕಾಗಿರುವ ಸಂಸ್ಥೆ ಶ್ರೀ ಧ.ಮಂ. ಕೈಗಾರಿಕಾ ತರಬೇತಿ ಸಂಸ್ಥೆ ಆಗಿದೆ.
ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವ ಹಾಗೂ ಸ್ವ-ಉದ್ಯೋಗ ಮತ್ತು ಉತ್ತಮ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿ ಕೊಡುತ್ತಿದೆ. ಈ ಸಂಸ್ಥೆಯು 1992 ರಲ್ಲಿ ಪ್ರಾರಂಭಗೊಂಡು ಇಲ್ಲಿಯವರೆಗೆ ಸುಮಾರು 3500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಪ್ರಸಕ್ತ ಸಾಲಿನಲ್ಲಿ 60 ವಿದ್ಯಾರ್ಥಿಗಳಿಗೆ ಮಾಸಿಕ 1000ದಂತೆ, 2 ವರ್ಷಗಳಿಗೆ ತಲಾ 20,000 ದಂತೆ ವಿದ್ಯಾರ್ಥಿವೇತನ ನೀಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗದಂತೆ ತಾಂತ್ರಿಕ ಶಿಕ್ಷಣ ನೀಡಿ ಮುಂದಿನ ಯುವ ಪೀಳಿಗೆಯ ಭವಿಷ್ಯಕ್ಕೆ ದಾರಿದೀಪವಾಗುತ್ತಿದೆ.
ಈ ಶಿಕ್ಷಣ ಸಂಸ್ಥೆ ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ವಿವಿಧ ಕ್ಯಾಂಪಸ್ ಸಂದರ್ಶನದಲ್ಲಿ ತಾವು ಇಚ್ಛಿಸಿದ ಕಂಪನಿಗಳಲ್ಲಿ ವಾರ್ಷಿಕ ರೂ 2,40,000ಕ್ಕೂ ಹೆಚ್ಚು ವೇತನದೊಂದಿಗೆ ಉದ್ಯೋಗ ತರಬೇತಿಗಾಗಿ ಆಯ್ಕೆಗೊಂಡಿದ್ದು, ಜುಲೈ ಪರೀಕ್ಷೆ ನಂತರ ಆಯ್ದ ಕಂಪನಿಗಳಿಗೆ ಸೇರಿಕೊಳ್ಳಲಿದ್ದಾರೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.
ಸಂಸ್ಥೆಯ ವೈಶಿಷ್ಟ್ಯಗಳು ಯಾವುದು?:
ಅನುಭವಸ್ಥ ಹಾಗೂ ಕೌಶಲ ಪ್ರಾವೀಣ್ಯ ಬೋಧಕ ವರ್ಗ, ಅತ್ಯುತ್ತಮ ಉಪಕರಣ ಒಳಗೊಂಡಿರುವ ಪ್ರಯೋಗಿಕ ಕಾರ್ಯಗಾರ, ವ್ಯವಸ್ಥಿತ ಗ್ರಂಥಾಲಯ, ವೆಲ್ಡರ್ ವಿಭಾಗದಲ್ಲಿ ಆಧುನಿಕ ತಂತ್ರಜ್ಞಾನದ MIG ಮತ್ತು TIG Resistance (spot welding), ಬಾಲಕರಿಗೆ ಹಾಸ್ಟೆಲ್ ವ್ಯವಸ್ಥೆ, ಸುಸಜ್ಜಿತ ಕಟ್ಟಡಗಳು, ವಿಶಾಲವಾದ ತರಗತಿ ಕೊಠಡಿಗಳು, ಸರ್ಕಾರ ನೀಡುವ ಅರ್ಹ ತರಬೇತಿದಾರರಿಗೆ ವಿದ್ಯಾರ್ಥಿ ವೇತನ, ಶ್ರೀ ಧರ್ಮಸ್ಥಳ ವಿದ್ಯಾಸಂಸ್ಥೆಯಿಂದ ಅರ್ಹ ತರಬೇತಿದಾರರಿಗೆ ವಿದ್ಯಾರ್ಥಿ ವೇತನ, Multiskill, ಕಂಪ್ಯೂಟರ್ ಶಿಕ್ಷಣ, ವಾಹನ ಚಾಲನಾ ತರಬೇತಿ ಉತ್ತಮ ಫಲಿತಾಂಶ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಉತ್ತಮ ಸಂಸ್ಥೆ, ವಾರ್ಷಿಕ ಪರೀಕ್ಷೆ ಮಾದರಿಯಲ್ಲಿಯೇ ಪ್ರತಿ ತಿಂಗಳು ಮಾಸಿಕ ಪರೀಕ್ಷೆ, S.M.S ಮುಖಾಂತರ ಪೋಷಕರಿಗೆ ಗೈರು ಹಾಜರಿ /ಪ್ರಗತಿ ವರದಿ, ಸೀಮಿತ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ, ಸ್ವಯಂ ಉದ್ಯೋಗಕ್ಕೆ ಉತ್ತೇಜನ, ತರಬೇತಿ ಅವಧಿಯಲ್ಲಿ ಕೈಗಾರಿಕೆಗಳ ಭೇಟಿ / ತರಬೇತಿ, ಅಂತರ್ಜಾಲ (internet ) ಸೌಲಭ್ಯ, ಮಧ್ಯಾಹ್ನದ ಊಟಕ್ಕೆ ಮೆಸ್ ವ್ಯವಸ್ಥೆ.
ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ; 15,000 ಸಂಬಳ
2025-26 ನೇ ಸಾಲಿನ ಪ್ರವೇಶಾತಿ ಪ್ರಾರಂಭಗೊಂಡಿದ್ದು, ಆಸಕ್ತ ವಿದ್ಯಾರ್ಥಿಗಳು ಈ ಕೂಡಲೇ ಸಂಸ್ಥೆಗೆ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9449927748 | 7892357617 | 8310273183 | 9449585356












