
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಹುಳಿಯೂರು ಗ್ರಾಮದಲ್ಲಿ ಪ್ರತಿಭಟನೆಯ ಬ್ಯಾನರ್ ಕಿತ್ತುಹಾಕಿದ ಪೊಲೀಸರ ಕ್ರಮ ಖಂಡಿಸಿ ರೈತರೊಬ್ಬರು ಹೈಟೆನ್ಷನ್ ವಿದ್ಯುತ್ ಮಾರ್ಗದ ಟವರ್ ಏರಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಪಾನ್ ಕಾರ್ಡ್ ಹೊಂದಿರುವವರ ಗಮನಕ್ಕೆ; ಇಂತಹವರಿಗೆ 10 ಸಾವಿರ ದಂಡ!

3 ಎಕರೆ 30 ಗುಂಟೆ ಜಾಗದಲ್ಲಿ 22 ರೈತರು ಸೇರಿ ಶ್ರೀಗಂಧದ ಮರ ಬೆಳೆದಿದ್ದರು. ಅಷ್ಟೂ ಜಾಗ ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನವಾಗಿದ್ದು, ಕಡಿಮೆ ಪರಿಹಾರ ನಿಗದಿ ಮಾಡಲಾಗಿದೆ ಎಂಬುದು ರೈತರ ಆರೋಪ. 62 ಕೋಟಿ ಪರಿಹಾರ ನೀಡುವ ಜಾಗಕ್ಕೆ ಒಂದೂವರೆ ಕೋಟಿ ಎಂದು ಅಧಿಕಾರಿಗಳು ನಮೂದಿಸಿದ್ದು ಇದರ ವಿರುದ್ಧ ನೊಂದ ರೈತರು ಅರಣ್ಯ ಇಲಾಖೆ-ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದು ಈ ನಡುವೆ ಪೊಲಿಸರು ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಬ್ಯಾನರ್ ಕಿತ್ತುಕೊಂಡು ಹೋಗಿದ್ದಾರೆ. ಇದರಿಂದ ಬೇಸತ್ತ ಓರ್ವ ರೈತ ಹೈಟೆನ್ಷನ್ ವಿದ್ಯುತ್ ಟವರ್ ಏರಿ ಏಕಾಂಗಿಯಾಗಿ ಪ್ರತಿಭಟನೆಗೆ ನಡೆಸಿದ್ದಾರೆ.














