ಅಮ್ಮ ಫೌಂಡೇಶನ್ ವತಿಯಿಂದ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಅಮ್ಮ ಫೌಂಡೇಶನ್ ವತಿಯಿಂದ ಆಯೋಜಿಸಲಾದ 33ನೇ ಆರೋಗ್ಯ ಶಿಬಿರದ ಅಂಗವಾಗಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವು ಮಾರ್ಚ್ 27, 2026ರಂದು ಹೊಡೆಯಾಲದ ಶ್ರೀರಾಮ ದೇವಸ್ಥಾನದಲ್ಲಿ ಯಶಸ್ವಿಯಾಗಿ ನೆರವೇರಿತು.


ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!


ಈ ಸಂದರ್ಭದಲ್ಲಿ ಹೊಡೆಯಾಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಹಿಂದಿನ ಆರೋಗ್ಯ ಶಿಬಿರದಲ್ಲಿ ನಡೆಸಿದ ಕಣ್ಣಿನ ತಪಾಸಣೆಯ ಆಧಾರದ ಮೇಲೆ ಅಗತ್ಯವಿದ್ದವರಿಗೆ ಕನ್ನಡಕಗಳನ್ನು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎನ್.ಆರ್.ಪುರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪಿ.ಜೆ. ಅಂತೋನಿ ಅವರು ಮಾತನಾಡಿ, ಶೃಂಗೇರಿ ಪ್ರದೇಶದಲ್ಲಿ ಕಳೆದ ಐದು ವರ್ಷಗಳಿಂದ ಸಮಾಜ ಸೇವೆಯಲ್ಲಿ ಹೆಸರು ಮಾಡಿರುವ ಸಂಸ್ಥೆಯಾಗಿ ಅಮ್ಮ ಫೌಂಡೇಶನ್ ಬೆಳೆದಿರುವುದನ್ನು ಶ್ಲಾಘಿಸಿದರು.

“ಸಮಾಜಕ್ಕೆ ಕೊಡುಗೆ ನೀಡಿದಾಗ ಮಾತ್ರ ವ್ಯಕ್ತಿಯ ಆಸ್ತಿ-ಸಂಪತ್ತಿಗೆ ನಿಜವಾದ ಮೌಲ್ಯ ಸಿಗುತ್ತದೆ” ಎಂಬ ನಂಬಿಕೆಯನ್ನು ಹೊಂದಿರುವ ಸುಧಾಕರ್ ಶೆಟ್ಟಿ ತಮ್ಮ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಬಳಸುತ್ತಿರುವುದು ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇಂದಿನ ದಿನಗಳಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮನೋಭಾವ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಅವರು ತಮ್ಮ ಅನುಭವವನ್ನು ಸಮಾಜ ಸೇವೆಗೆ ಅರ್ಪಿಸಿರುವುದು ಶ್ಲಾಘನೀಯ ಎಂದರು.


ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್‌!


ಈವರೆಗೆ 33 ಆರೋಗ್ಯ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಅಮ್ಮ ಫೌಂಡೇಶನ್, ಕೇವಲ ಆರೋಗ್ಯ ತಪಾಸಣೆಗಷ್ಟೇ ಸೀಮಿತವಾಗದೇ, ಅಗತ್ಯವಿರುವವರಿಗೆ ಕನ್ನಡಕ ವಿತರಣೆ, ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯ ವ್ಯವಸ್ಥೆ ಮಾಡುವ ಮೂಲಕ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೊಡೆಯಾಲ ಶ್ರೀರಾಮ ದೇವಸ್ಥಾನದ ಅಧ್ಯಕ್ಷರಾದ ಹಿರಿಯಣ್ಣ, ರೋಟರಿ ಸಂಸ್ಥೆಯ ಅಧ್ಯಕ್ಷರಾದ ವಿನಯ್ ಕಣಿವೆ, ಪ್ರಫುಲ್ಲ ಕೆ, ಪ್ರಫುಲ್ಲ ಚಂದ್ರ, ಯೋಜನಾಧಿಕಾರಿಗಳಾದ ವೆಂಕಪ್ಪ ಆಚಾರ್, ಕೃಷಿಕರಾದ ರಮೇಶ್ ಶೆಟ್ಟಿ, ರವಿಕುಮಾರ್ ಕೆ, ಕೌಶಿಕ್ ಗೌಡ, ಪ್ರಕಾಶ್ ಹೊಡೆಯಾಲ, ಅಭಿನವ್, ನಿರ್ದೇಶಕರಾದ ಪ್ರಭಾಕರ್ ಶೆಟ್ಟಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. (ವರದಿ: ಶಶಿ ಬೆತ್ತದಕೊಳಲು)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.