ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿ ಅನಾರೋಗ್ಯ ಪೀಡಿತರರಿಗೆ ಔಷಧ ಹಾಗೂ ಸರ್ಕಾರದ ಸವಲತ್ತು ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೇರೂರು ಗ್ರಾಮದ ವೀರಗಲ್ಲುಮಕ್ಕಿಯಲ್ಲಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ನಾಗಯ್ಯ ಎಂಬುವವರ ಮನೆಗೆ ಬಂದ ಅಪರಿಚಿತನೊಬ್ಬ ಶೀಘ್ರ ಗುಣಮುಖರಾಗಲು ಆಯುರ್ವೇದ ಔಷಧ ನೀಡುವುದಾಗಿ ಹಾಗೂ ಸರ್ಕಾರದಿಂದ ಆನಾರೋಗ್ಯ ಪೀಡಿತರಿಗೆ ವೀಲ್ ಚೇರ್, ಉಚಿತ ಔಷಧ ಕೊಡಿಸುವುದಾಗಿ ನಂಬಿಸಿ ₹13 ಸಾವಿರ ಹಣ ಪಡೆದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ನಾರಾಯಣ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಹಿರೇಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇದೇ ರೀತಿ ನಂಬಿಸಿ ₹25 ಸಾವಿರ ಪಡೆದು ವಂಚಿಸಿದ್ದಾನೆ ಎಂದು ದೂರು ದಾಖಲಾಗಿದೆ.














