ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಪರೂಪದ 2 ತಲೆ ಹಾವನ್ನು (ಮಣ್ಣುಮುಕ್ಕ) ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಸಿಐಡಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು 1 ಕೆಜಿ 400 ಗ್ರಾಂ ತೂಕದ ಬೃಹತ್ ಹಾವನ್ನು ರೆಡ್ ಹ್ಯಾಂಡಾಗಿ ವಶಪಡಿಸಿಕೊಂಡರು. ಬಂಧಿತರಲ್ಲಿ ಇಬ್ಬರು ಆಂಧ್ರಪ್ರದೇಶ ಮೂಲದವರು, ಇಬ್ಬರು ತುಮಕೂರು ಮೂಲದವರು ಹಾಗೂ ಓರ್ವ ಶಿವಮೊಗ್ಗ ಮೂಲದವನಾಗಿದ್ದು, ಆರೋಪಿಗಳಿಂದ ಆಂಧ್ರ ಮೂಲದ ಸ್ವಿಫ್ಟ್ ಕಾರು ಮತ್ತು ಕರ್ನಾಟಕ ಮೂಲದ ವ್ಯಾಗನರ್ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಅಕ್ರಮ ವನ್ಯಜೀವಿ ಸಾಗಣೆ ಮತ್ತು ಮಾರಾಟ ಯತ್ನದ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.















