ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಎಣ್ಣೆ ಏಟಲ್ಲಿ ಕುಡುಕನೊಬ್ಬ 108 ಗೆ ಕರೆ ಮಾಡಿ ಬಸ್ ನಿಲ್ದಾಣದಲ್ಲಿ ಗಲಾಟೆ ಆಗ್ತಿದೆ ಬೇಗ ಬನ್ನಿ ಎಂದು ಸುಳ್ಳು ಹೇಳಿ ಆಂಬುಲೆನ್ಸ್ ಕರೆಸಿಕೊಂಡ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ಶೃಂಗೇರಿಯ ಬಸ್ ನಿಲ್ದಾಣದಲ್ಲಿ ಗಲಾಟೆ ಆಗ್ತಿದೆ.. ಸೀರಿಯಸ್ ಆಗಿದೆ ಎಂದು ಕುಡುಕನೊಬ್ಬ 108 ಆಂಬುಲೆನ್ಸ್ ಗೆ ಕರೆ ಮಾಡಿದ್ದಾನೆ. ಶೃಂಗೇರಿ ಹಾಗೂ ಕೊಪ್ಪದ 108 ಆಂಬುಲೆನ್ಸ್ ಗಳು ಬಿಝಿ ಇದ್ದ ಪರಿಣಾಮ ಸುಮಾರು 45 ಕಿ. ಮೀ ದೂರವಿರುವ ಬಾಳೆಹೊನ್ನೂರಿನಿಂದ 108 ಆಂಬುಲೆನ್ಸ್ ಬಂದಿದೆ. ಆದ್ರೆ ಬಂದು ನೋಡಿದ್ರೆ ಇಲ್ಲಿ ಯಾವ ಗಲಾಟೆಯೂ ಇಲ್ಲ.. ಯಾವ ಸೀರಿಯಸ್ ಪೇಷೆಂಟ್ ಗಳು ಇಲ್ಲ.. ಅಸಲಿಗೆ ಇದು ಎಣ್ಣೆ ಏಟಲ್ಲಿ ಕುಡಕ ಮಾಡಿದ ಹುಚ್ಚಾಟ.

ಕೂಡಲೇ ಸ್ಥಳಕ್ಕಾಗಮಿಸಿದ 112 ಪೊಲೀಸರು ಆತನಿಗೆ ಕರೆ ಮಾಡಿ ವಿಚಾರಿಸಿದರೆ.. ‘ನಾನು ಭೂಮಿ ಮೇಲೆ, ಆಕಾಶದ ಕೆಳಗೆ ಇದ್ದೀನಿ.. ತಾಕತ್ತಿದ್ದೆ ನನ್ನ ಹಿಡೀರಿ ನೋಡೋಣ’ ಎಂದು ಸವಾಲು ಹಾಕಿದ್ದಾನೆ. ಸುಮಾರು ಅರ್ಧ ಗಂಟೆಗಳ ಕಾಲ ಪೊಲೀಸರು ಹಾಗೂ ಸ್ಥಳೀಯರು ಹುಡುಕಿದರೂ ಕರೆ ಮಾಡಿದ ಭೂಪ ಮಾತ್ರ ಸಿಕ್ಕಿರಲಿಲ್ಲ. ಬಳಿಕ ಶೃಂಗೇರಿಯ ವೈನ್ ಶಾಪ್ ಬಳಿ ಇದ್ದ ಕುಡುಕನನ್ನು ಪಟ್ಟಣದ ಆಟೋ ಚಾಲಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.












