ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶಾಸಕ ಟಿ.ಡಿ. ರಾಜೇಗೌಡ ಅವರ ಜನ್ಮದಿನ ಅಂಗವಾಗಿ ಶೃಂಗೇರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡತಲು ಕೆ.ಎಂ. ರಮೇಶ್ ಭಟ್ ಮಾತನಾಡಿ, ಟಿ.ಡಿ. ರಾಜೇಗೌಡ ಅವರಂತಹ ಶಾಸಕರು ಕ್ಷೇತ್ರಕ್ಕೆ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಅವರು ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆಗೆ ಬದ್ಧತೆಯಿಂದ ಶ್ರಮಿಸುತ್ತಿದ್ದಾರೆ. ಅವರ ಜನ್ಮದಿನದ ಅಂಗವಾಗಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಉಮೇಶ್ ಪುದುವಾಳ್ ಮಾತನಾಡಿದರು. ಆಸ್ಪತ್ರೆಯ ಎಲ್ಲ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.

ವೈದ್ಯಾಧಿಕಾರಿ ಶ್ರೀವೇಣಿ, ಕಾಂಗ್ರೆಸ್ ಮುಖಂಡರಾದ ಕುರದಮನೆ ವೆಂಕಟೇಶ್, ಲಕ್ಷ್ಮೀಶ್, ಅಜಿತ್ ನಾಯ್ಕ, ಪ್ರಸನ್ನ ಮೀಗಾ, ರಾಜ್ ಕುಮಾರ್ ಹೆಗ್ಡೆ, ರಫೀಕ್ ಅಹಮದ್, ನೂತನ್ ಹೆಗ್ಡೆ, ನಾಗೇಶ್ ಗೋಳುಗೋಡು, ತ್ರಿಮೂರ್ತಿ, ಸುಂದರೇಶ್ ಮಂಡಗದ್ದೆ, ನಾಗೇಶ್ ಕೊಡತಲು, ದೇವೇಂದ್ರ ಕಾವಡಿ, ದಿನೇಶ್ ಶೆಟ್ಟಿ, ಸುಮುಖ ಮೆಣಸೆ, ನಾಗರಾಜ್ ಹಗಡೂರು, ಪಾಂಡು ಅಂಗುರ್ಡಿ, ರಾಘವೇಂದ್ರ, ನಾಗರಾಜ್ ಬೆಳಂದೂರು, ಸುಬ್ರಹ್ಮಣ್ಯ ಹಾಗೂ ತಿಮ್ಮಪ್ಪ ಇದ್ದರು.













